ತುಮಕೂರು

ನೀರು ಪೋಲು ಮಾಡದಿರಿ

Published On :

ಕ.ಪ್ರ. ವಾರ್ತೆ   ಕುಣಿಗಲ್    ಫೆ.17
ಬೇಸಿಗೆ ದಿನಗಳು ಮುಂದಿದ್ದು ಈಗಾಗಲೆ ಬಿಸಿಲಿನ ಝಳ ಹೆಚ್ಚಿದೆ. ಕಳೆದ ಸಾಲಿನಲ್ಲಿ ಸಾಕಷ್ಟು ಮಳೆಯಾಗದ ಕಾರಣ ಗ್ರಾಮಾಂತರ ಪ್ರದೇಶದಲ್ಲಿ ನೀರಿನ ಸಮಸ್ಯೆ ನಿಭಾಯಿಸುವ ನಿಟ್ಟಿನಲ್ಲಿ ಗ್ರಾಮಸ್ಥರು ಇರುವ ನೀರನ್ನು ಪೋಲು ಮಾಡದೆ ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಮುಂದಾಗಬೇಕೆಂದು ಶಾಸಕ ಡಿ. ನಾಗರಾಜಯ್ಯ ಕರೆ ನೀಡಿದರು.
  ಅಮೃತೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ  ವಿವಿಧ ಅನುದಾನಗಳಡಿಯಲ್ಲಿ 415 ಲಕ್ಷ ರು.ವೆಚ್ಚದ  ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯ ಎರಡನೇ ಹಂತದ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಗಡಿಗ್ರಾಮವಾದ ದೊಡ್ಡಕ್ಕಲಹಳ್ಳಿಯಲ್ಲಿ 11ಲಕ್ಷ ರು.ವೆಚ್ಚದಲ್ಲಿ ಕುಡಿಯು ವನೀರು ಪೂರೈಕೆ ಮೇಲುಸ್ತರದ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ನೀರು ಅತ್ಯಮೂಲ್ಯವಾಗಿದೆ. ಸಕಾಲದಲ್ಲಿ ಮಳೆಯಾಗದೆ ಸಹಜವಾಗಿ ಹಲವು ಸಮಸ್ಯೆ ತಲೆದೋರುವಂತಾಗಿದೆ.
 ಕುಡಿಯುವ ನೀರಿಗೆ ತೊಂದರೆಯಾಗದ ನಿಟ್ಟಿನಲ್ಲಿ ಅಗತ್ಯ ಮುಂಜಾಗೃತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿ,  ದೊಡ್ಡಕಲ್ಲಹಳ್ಳಿಯ ತಾಲೂಕಿನ ಗಡಿಭಾಗದಲ್ಲಿ ಹೇಮಾವತಿ ನಾಲಾವಲಯದ ವಿಶೇಷ ಅನುದಾನದಡಿಯಲ್ಲಿ 55ಲಕ್ಷ ರು.ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಕೈಗೊಳ್ಳುವುದರಿಂದ ತಾಲೂಕಿನ ನೆರೆ ತಾಲೂಕಾದ ನಾಗಮಂಗಲಕ್ಕೆ ಅತ್ಯಂತ ಸಮೀಪದ ಸಂಪರ್ಕ ವ್ಯವಸ್ಥೆ ಕಲ್ಪಿಸಿದಂತಾಗಲಿದೆ. ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಜಿಪಂ ಮಾಜಿ ಅಧ್ಯಕ್ಷ ಡಾ.ಬಿ.ಎನ್. ರವಿ, ಗ್ರಾಮದ ಶಾಲೆಯ ಬಿಸಿಯೂಟ ಕೊಠಡಿ ಉದ್ಘಾಟಿಸಿ, ಶಾಲೆಯ ಕಟ್ಟಡ ಪರಿಶೀಲಿಸಿದರು. ಸೂಕ್ತ ಗಾಳಿ, ಬೆಳಕಿನ ಕೊರತೆ ಇರುವುದನ್ನು ಗಮನಿಸಿ, ಶಾಲೆಗಳಲ್ಲಿ ಎಳೆಯ ವಯಸ್ಸಿನ ಮಕ್ಕಳ ಕಲಿಕಾ ವ್ಯವಸ್ಥೆಯ ಮೇಲೆ ಇಂತಹ ವಾತಾವರಣ ಸಾಕಷ್ಟು ನಕರಾತ್ಮಕ ಪ್ರಭಾವ ಬೀರುವುದರಿಂದ ಸಾಧ್ಯವಿರುವ ಕ್ರಮ ಕೈಗೊಂಡು ಉತ್ತಮ ಗಾಳಿ ಬೆಳಕಿನ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳುವಂತೆ ಜಿಪಂ ಅಧಿಕಾರಿಗಳಿಗೆ ಸೂಚಿಸಿ, ಶಾಲಾಕಟ್ಟಡ ಸೇರಿದಂತೆ ಪರಿಸರ ಸ್ವಚ್ಛ ಮತ್ತು ಆರೋಗ್ಯವಾಗಿರಿಸುವ ನಿಟ್ಟಿನಲ್ಲಿ ಗ್ರಾಮಸ್ಥರು ಸಹಕರಿಸಬೇಕೆಂದರು.
  ತಾಪಂ ಸದಸ್ಯ ಕೆಂಪಗೂಳಿಗೌಡ, ಪಡುವಗೆರೆ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಪ್ರಮುಖರಾದ ಬೆನವಾರ ಶೇಷಾಚಲ, ರಾಜಣ್ಣ, ಲೋಕೇಶ್, ಜಿಪಂ ಎಇಇ ಸಣ್ಣಮರಿಗೌಡ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.