ಒತ್ತುವರಿ ತೆರವಿಗೆ ಒಪ್ಪಿಗೆ
ಪಾವಗಡ: ಒತ್ತುವರಿಯನ್ನು ತೆರವು ಗೊಳಿಸಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸುವುದಾಗಿ ಚನ್ನಮ್ಮನಹಳ್ಳಿಯ ಯುವ ರೈತ ಆನಂದ್ ತಿಳಿಸಿದರು. ಗ್ರಾಮಕ್ಕೆ ಬೇಲಿ ಹಾಗೂ ಇತರೆ ಸಮಸ್ಯೆ ಸೇರಿದಂತೆ ಶುಕ್ರವಾರ ತಾಲೂಕಿನ ಚನ್ನಮ್ಮರೆಡ್ಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಹಿನ್ನಲೆಯಲ್ಲಿ ಗ್ರಾಮಕ್ಕೆ ತೆರಳಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ವೆಂಕಟೇಶಪ್ಪ ಪುತ್ರ ಆನಂದ್, ಒತ್ತುವರಿ ಮಾಡಲಾದ ಗ್ರಾಮದ ನಕಾಶೆಯಲ್ಲಿರುವ 9ಅಡಿ ರಸ್ತೆಯನ್ನು ತೆರವುಗೊಳಿಸಿ ಗ್ರಾಮಸ್ಥರ ಓಡಾಟಕ್ಕೆ ಅನುಕೂಲ ಕಲ್ಪಿಸುವ ಭರವಸೆ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿ ನಡೆಯುತ್ತಿದ್ದು ಜಿಸಿಬಿ ಕಾಮಗಾರಿಯಿಂದ ತಮ್ಮ ಜಮೀನಿನಲ್ಲಿಟ್ಟಿದ್ದ ಬೆಳೆ ನಷ್ಟವಾಗುವ ಹಿನ್ನಲೆಯಲ್ಲಿ ಪೈಪ್ಲೈನ್ ಕಾಮಗಾರಿಗೆ ತಮ್ಮ ತಂದೆ ವೆಂಕಟೇಶಪ್ಪ ತಡೆ ಮಾಡಿದ್ದಾರೆ ಹೂರತು ದುರುದ್ದೇಶವಲ್ಲ, ಗ್ರಾಮಸ್ಥರ ಸಲಹೆಯಂತೆ ಗ್ರಾಮಸ್ಥರ ಅನುಕೂಲಕ್ಕಾಗಿ ನಕಾಶೆಯಲ್ಲಿರುವ 9 ಅಡಿ ರಸ್ತೆ ಹಾಗೂ ಪೈಪ್ಲೈನ್ ಕಾಮಗಾರಿಗೆ ಅನುವು ಮಾಡಿಕೂಡುವುದಾಗಿ ಅವರು ತಿಳಿಸಿದರು. ಗ್ರಾಮದಲ್ಲಿ ನಡೆಯುವ ಮರಳು ಮಾಫಿಯಾ ತಡೆದು ಅಂತರ್ಜಲ ಹೆಚ್ಚಳಕ್ಕೆ ಸಹಕರಿಸಿ ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಗ್ರಾಮದ ಆನೇಕ ಮಂದಿ ಹಿರಿಯ ಮುಖಂಡರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

