ತುಮಕೂರು

ಪಾಲಿಕೆಗೆ 466.08 ಲಕ್ಷ ಬಜೆಟ್

Published On :

ತುಮಕೂರು: ತುಮಕೂರು ಮಹಾನಗರ ಪಾಲಿಕೆ 2014-15 ನೇ ಸಾಲಿನಲ್ಲಿ 466. 08 ಲಕ್ಷ ರು ಉಳಿತಾಯ ಬಜೆಟ್ ಮಂಡಿಸಿದೆ. 2014-15 ನೇ ಸಾಲಿನ ನಿರೀಕ್ಷಿತ ಆದಾಯ ಒಟ್ಟು 25017.01 ಲಕ್ಷ ರು. ಗಳಾಗಿದ್ದು, ನಿರೀಕ್ಷಿತ ಖರ್ಚು 24,550.93 ಲಕ್ಷ ರು. ಗಳಾಗಿದೆ.
ಬಜೆಟ್ ಮಂಡಿಸಿ, ವಿವರ ನೀಡಿದ ಮಹಾಪೌರರಾದ ಗೀತಾ ರುದ್ರೇಶ್ ಮಾತನಾಡಿ, ತುಮಕೂರು ಮಹಾನಗರಪಾಲಿಕೆಯ ಈ ಸಾಲಿನ ಬಜೆಟ್ ಉಳಿತಾಯ ಬಜೆಟ್ ಆಗಿದೆ ಎಂದರು. ಹಾಗೂ ಪ್ರಮುಖ ಆದಾಯದ ಮೂಲಗಳ ಬಗ್ಗೆ ಮಾಹಿತಿ ನೀಡಿದರು.
ಕಟ್ಟಡಗಳ ಮತ್ತು ಭೂಮಿ ಮೇಲಿನ ಆಸ್ತಿ ತೆರಿಗೆ ಈ ಬಾರಿ 20 ಕೋಟಿ ರು. ನಿರೀಕ್ಷಿಸಲಾಗಿದೆ. ಆಸ್ತಿ ತೆರಿಗೆ ದಂಡ1 ಕೋಟಿ,  ಆಸ್ತಿ ಹಕ್ಕು ಬದಲಾವಣೆ ಶುಲ್ಕ 80 ಲಕ್ಷ ರು. ಕಟ್ಟಡಗಳ ಪರವಾನಗಿ ಶುಲ್ಕ 1 ಕೋಟಿ ರು. ಉದ್ದಿಮೆಗಳ ಪರವಾನಗಿ ಶುಲ್ಕ80 ಲಕ್ಷ ರು.,  ನಲ್ಲಿ ನೀರಿನ ಕಂದಾಯ 8 ಕೋಟಿ ರು. ಹೊಸ ನಲ್ಲಿ ಜೋಡಣೆ ಶುಲ್ಕ 25 ಲಕ್ಷ ರು., ಅಂಗಡಿ ಕಟ್ಟಡಗಳ ಬಾಡಿಗೆ ( ಖಾಸಗಿ ಬಸ್ ಸ್ಟ್ಯಾಂಡ್ ಮಳಿಗೆ, ಶಿರಾಗೇಟ್ ಮಳಿಗೆ) 2 ಕೋಟಿ ರು., ಜಾಹಿರಾತು ತೆರಿಗೆ 30 ಲಕ್ಷ ರು, ಅಧಿಭಾರ ಶುಲ್ಕ 30 ಲಕ್ಷ ರು., ಅಭಿವೃದ್ಧಿ ಶುಲ್ಕ 50 ಲಕ್ಷ ರು, ಸುಧಾರಣೆ ಶುಲ್ಕ 20 ಲಕ್ಷ ರು., ರಸ್ತೆ ಕಟಿಂಗ್ ಶುಲ್ಕ 1 ಕೋಟಿ ರು., ಘನತ್ಯಾಜ್ಯ ಉಪಕರ ವಸ್ತು ನಿರ್ವಹಣೆ ಉಪಕರ 2 ಕೋಟಿ ರು, ಅಭಿವೃದ್ಧಿ ಶುಲ್ಕ 50 ಲಕ್ಷ ರು, ಅನಧಿಕೃ ನಲ್ಲಿಗಳ ಸಕ್ರಮೀಕರಣ 5 ಲಕ್ಷ ರು, ಒಳಚರಂಡಿ ಹೊಸ ಸಂಪರ್ಕದಿಂದ ಆದಾಯ 1 ಕೋಟಿ ರು, ಬ್ಯಾಂಕ್ ಬಡ್ಡಿ 40 ಲಕ್ಷ ರು, ಹಾಗೂ ಇತರೆ ಎಲ್ಲ ಮೂಲಗಳಿಂದ 1.35 ಕೋಟಿ ರು ಎಂದು ವಿವರ ನೀಡಿದರು.
ವಿವರ: ಎಂಪಿ, ಎಂಎಲ್ಎ, ಎಂಎಲ್ಸಿ ಅನುದಾನಗಳು 15 ಕೋಟಿ ರು, 13 ನೇ ಹಣಕಾಸು ಯೋಜನೆ 4.25 ಕೋಟಿ ರು, ಎಸ್ಎಫ್ಸಿ ಮುಕ್ತ ಅನುದಾನ 20  ಕೋಟಿ ರು, ವೇತನ ಅನುದಾನ 16 ಕೋಟಿ ರು, ಎಸ್ಜೆಎಸ್ಆರ್ವೈ ಅನುದಾನ 30 ಕೋಟಿ, ಸರ್ಕಾರದಿಂದ ವಿಶೇಷ ಅನುದಾನ 68 ಕೋಟಿ ರು., ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಅನುದಾನ 1 ನೇ ಹಂತ 6 ಕೋಟಿ ರು, 2 ನೇ ಹಂತದಲ್ಲಿ 20 ಕೋಟಿ ಎಸ್ಎಫ್ಸಿ ವಿದ್ಯುತ್ ಶುಲ್ಕ ಅನುದಾನ 15 ಕೋಟಿ, ಪ್ರಕೃತಿ ವಿಕೋಪ, ಬರಪರಿಹಾರ, ಇತರೆ ಅನುದಾನ 5.50 ಕೋಟಿ ರು. ಎಂದು ಗೀತಾ ರುದ್ರೇಶ್ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಉಪಮೇಯರ್ ಧನಲಕ್ಷ್ಮಿ ರವಿ, ಆಯುಕ್ತ ಅಶಾದ್ ಎಸ್. ಷರೀಪ್, ಸಂಸದ ಜಿ.ಎಸ್. ಬಸವರಾಜು ಪಾಲಿಕೆ ಸದಸ್ಯರು, ಅಧಿಕಾರಿ ವರ್ಗ ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.