ಇಂದು ಎರಡು ನಾಟಕ ಪ್ರದರ್ಶನ
ತುಮಕೂರು: ನಗರದ ಅಮರೇಶ್ವರ ವಿಜಯ ನಾಟಕ ಮಂಡಳಿ ವತಿಯಿಂದ ಫೆ.27 ರಂದು ಮಹಾಶಿವರಾತ್ರಿ ಜಾಗರಣೆ ಪ್ರಯುಕ್ತ ಎರಡು ನಗೆ ನಾಟಕಗಳನ್ನು ಆಯೋಜಿಸಲಾಗಿದೆ. ಬೋವಿಪಾಳ್ಯದಲ್ಲಿರುವ ಸರ್ಕಾರಿ ಶಾಲಾ ಮುಂಭಾಗದಲ್ಲಿ ಚನ್ನಬಸಯ್ಯ ಗುಬ್ಬಿ ನಿರ್ದೇಶನದ ಸಾದ್ವಿ ಸರಸ್ವತಿ ಮತ್ತು ನಂಜುಂಡೇಶ್ವರ ಕಲಾ ಸಂಘದ ವತಿಯಿಂದ ಮಲಮಗಳು ಅಥವಾ ಮುದುಕನ ಮದುವೆ ನಾಟಕ ಪ್ರದರ್ಶನವಿದೆ. ನಾಟಕ ಆರಂಭವಾಗುವ ಸಮಯ ರಾತ್ರಿ 9 ಗಂಟೆಗೆ.
ಇಂದು ಮಹಾಶಿವರಾತ್ರಿ
ಇಲ್ಲಿನ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಫೆ. 27 ರಂದು ಮಹಾಶಿವರಾತ್ರಿ ಆಚರಣೆ ಆಯೋಜಿಸಲಾಗಿದೆ. ಬೆಳಗ್ಗೆಯಿಂದಲೇ ಪುಣ್ಯಾಹ, ಗಣಪತಿ ಪೂಜೆ, ಮಹಾರುದ್ರ ಸ್ವಾಹಕಾರ ಹೋಮ, ಮುಂತಾದ ಪೂಜೆಗಳನ್ನು ಆಯೋಜಿಸಲಾಗಿದೆ. ವಿವರಗಳಿಗೆ ಅರುಣಕುಮಾರ್ ಅವರನ್ನು 9844798124 ಸಂಪರ್ಕಿಸಬಹುದು.
ಸಿದ್ಧಗಂಗಾ ಶ್ರೀಗಳಿಗೆ
ಗುರುವಂದನೆ
ಮಾರ್ಚ್ 2 ಕ್ಕೆ ಅಲುಮ್ಲಿ ಮೀಟ್ ಇಲ್ಲಿನ ಸಿದ್ಧಗಂಗಾ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜೀಸ್ ವತಿಯಿಂದ ಶಿವಕುಮಾರ ಸ್ವಾಮೀಜಿ ಸ್ಟೇಡಿಯಂನಲ್ಲಿ ಗೋಲ್ಡನ್ ಜುಬಿಲಿ ಗ್ಲೋಬಲ್ ಅಲುಮ್ಲಿ ಮೀಟ್ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಸಿದ್ಧಗಂಗಾ ಶ್ರೀಗಳಿಗೆ ಗುರುವಂದನೆ ಆಯೋಜಿಸಲಾಗಿದೆ. ಸಿದ್ಧಗಂಗೆ ಕಿರಿಯ ಶ್ರೀ ಸಿದ್ಧಲಿಂಗಸ್ವಾಮೀಜಿ, ವೀರೇಶಾನಂದ ಸರಸ್ವತಿ ಶ್ರೀಗಳು ಸಾನಿಧ್ಯ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಎಸ್‌ಐಟಿ ನಿರ್ದೇಶಕ ಎಂ.ಎನ್. ಚನ್ನಬಸಪ್ಪ ಉಪಸ್ಥಿತರಿರುವರು.
ಮಾರ್ಚ್ 2ಕ್ಕೆ
ನಾಟಕ ಪ್ರದರ್ಶನ
ಇಲ್ಲಿನ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಗುಬ್ಬಿ ಡ್ರಾಮಾ ಕಂಪನಿಯಿಂದ ಮಾ.2 ರಂದು ಸಂಜೆ 5.30 ಕ್ಕೆ ವಿನೋದ ಸದಾರಮೆ ನಾಟಕ ಪ್ರದರ್ಶನವಿದೆ. ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ವಹಿಸಲಿದ್ದಾರೆ. ಜಿ.ಪಂ. ಸಿಇಓ ಗೋವಿಂದರಾಜು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹೆಬ್ಬಾಕ ಸಿ ದ್ದಲಿಂಗಪ್ಪ, ಎನ್.ಎಸ್. ಮೂರ್ತಿ ಅವರನ್ನು ಸನ್ಮಾನಿಸಲಾಗುವುದು. ಮುಖ್ಯ ಅತಿಥಿಯಾಗಿ ಎಸ್.ನಾಗಣ್ಣ, ಉಗಮ ಶ್ರೀನಿವಾಸ್, ಚಂದೋಡಿ ಚಂದ್ರಣ್ಣ ಆಗಮಿಸಲಿದ್ದಾರೆ.
ಇಂದು ಅಕ್ಕಿ ಪೂಜೆ
ಮಹಾಶಿವರಾತ್ರಿ ಅಂಗವಾಗಿ ಫೆ. 27 ರಂದು ಎಸ್‌ಐಟಿ ಆವರಣದಲ್ಲಿರುವ ಶಿವಗಣಪತಿ ದೇವಾಲಯದಲ್ಲಿ ಅಕ್ಕಿಪೂಜೆ ಏರ್ಪಡಿಸಲಾಗಿದೆ. ಹಾಗೆಯೇ ಸಹಸ್ರ ಬಿಲ್ವಾರ್ಚನೆ ನಡೆಯಲಿದೆ. ಮಹಾಮಂಗಳಾರತಿ ಕೂಡ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

