ತುಮಕೂರು

ಉಚಿತ ಬಸ್ ಪಾಸ್‌ಗೆ ಒತ್ತಾಯ

Published On :

ತುಮಕೂರು: ತುಮಕೂರು ನಗರದ ಬಿ.ಎಚ್, ರಸ್ತೆಯಲ್ಲಿರುವ ಹೊಯ್ಸಳ ಹೊಟೇಲ್ ಸಭಾಂಗಣದಲ್ಲಿ ಅಧ್ಯಕ್ಷ ಸೈಯದ್ ಹುಮಾಯುನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆ.ಎಸ್.ಆರ್.ಟಿ.ಸಿ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಭೆಯಲ್ಲಿ ಕೆ.ಎಸ್.ಆರ್.ಟಿ.ಸಿ ನಿವೃತ್ತ ನೌಕರರಿಗೆ ಪಿಂಚಣಿ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಲು ಬಸ್ ಪಾಸ್‌ಗೆ ಒತ್ತಾಯಿಸಿದರು.
ಇದೇ ಸಂದಭರ್ದಲ್ಲಿ ಕೆ.ಎಸ್.ಆರ್.ಟಿ.ಸಿ ನಿವೃತ್ತ ಸಂಘದ ವತಿಯಿಂದ 2014 ರ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ರಾಜ್ಯ ರಸ್ಥೆ ಸಾರಿಗೆ ಸಂಸ್ಥೆಯಲ್ಲಿ ಸುಮಾರು 30-35 ವರ್ಷ ಸೇವೆ ಸಲ್ಲಿಸಿದಂತವರಿಗೆ ಕೇವಲ 200 ರಿಂದ 1 ಸಾವಿರ ರು.  ತಿಂಗಳ ಪಿಂಚಣಿ ಪಡೆಯುತ್ತಿದ್ದು ಸದರಿ ನಿವೃತ್ತರು ಈ ಕಡಿಮೆ ಪಿಂಚಣಿಯಲ್ಲಿ ವೈದ್ಯಕೀಯ ವೆಚ್ಚವನ್ನು ಭರಿಸಲು ಆಗದೇ, ಇಡೀ ಕುಟುಂಬ ಜೀವನ ನಡೆಸುವುದು ಹೇಗೆ ಸಾಧ್ಯ ಎಂಬುದನ್ನು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಜನಪ್ರತಿನಿಧಿಗಳು ಯೋಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.
ಸಂಬಂಧಿಕರ ಶುಭಕಾರ್ಯಗಳಿಗೆ ಹೋಗಿ ಬರಲು ಬಸ್ ಪ್ರಯಾಣ ದರವನ್ನು ಕೊಡಲು ಶಕ್ತಿ ಇಲ್ಲದವರಾಗಿ ಸಂಬಂಧಗಳನ್ನೆ ಮರೆಯುವಂತಾಗಿದೆ. ಸೇವೆಯಲ್ಲಿದ್ದಾಗ ಸಂಸ್ಥೆಯ ನೌಕರರಿಗೆ ಉಚಿತ ಬಸ್ ಪಾಸನ್ನು ನೀಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಈ ಸೌಲಭ್ಯವನ್ನು ಕಡಿತಗೊಳಿಸಲಾಗಿದೆ. ಆದ್ದರಿಂದ ನಿವೃತ್ತಿಯ
ನಂತರವು ಇದನ್ನು ಮುಂದುವರೆಸಬೇಕೆಂದು ನಿವೃತ್ತ ನೌಕರರ ಸಂಘಟನೆಗಳು ಹಿಂದಿನ ಸರ್ಕಾರಗಳಿಗೆ ಅನೇಕ ಮನವಿಗಳನ್ನು ಸಲ್ಲಿಸಿದರೂ ಇದನ್ನು ನೀಡದೆ ನಿವೃತ್ತರನ್ನು ನಿರ್ಲಕ್ಷಿಸಲಾಗಿದೆ. ಪ್ರಸ್ತುತ ಹಾಲಿ ಇರುವ ರಾಜ್ಯ ಸರ್ಕಾರ ಕೆ.ಎಸ್.ಆರ್.ಟಿ.ಸಿ ನೌಕರರ ಕ್ಷೇಮಾಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ನಿವೃತ್ತ ನೌಕರರಿಗೂ ಹಾಗೂ ಕರ್ತವ್ಯದಲ್ಲಿ ಇದ್ದಾಗ ಅಪಘಾತಗಳಿಂದ ಮೃತಪಟ್ಟಿರುವ ಸಿಬ್ಬಂದಿಯ ಕುಟುಂಬದವರಿಗೂ ಪಿಂಚಣಿಯನ್ನು ನಿಗದಿಪಡಿಸಬೇಕು. ಹಾಗೂ ಉಚಿತ ಬಸ್ ಪಾಸ್ ನೀಡಬೇಕೆಂದು ಒತ್ತಾಯಿಸಿದರು. ರಾಜ್ಯದ ಕೆ.ಎಸ್.ಆರ್.ಟಿ.ಸಿ ನಿವೃತ್ತ ನೌಕರರು ಮುಂದಿನ ದಿನಗಳಲ್ಲಿ ಸಂಘಟನೆಯಾಗಿ ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕೆಂದು ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಒಕ್ಕೊರಲಿನಿಂದ ಸರ್ಕಾರವನ್ನು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘ ಹಾಗೂ ನಿವೃತ್ತ ಪೊಲೀಸರ ಸಂಘದ ಪದಾಧಿಕಾರಿಗಳೂ ಹಾಜರಿದ್ದು ಅವರ ಬೆಂಬಲವನ್ನು ಕೆ.ಎಸ್.ಆರ್.ಟಿ.ಸಿ ನಿವೃತ್ತ ಸಂಘಕ್ಕೆ ನೀಡಿದ್ದಾರೆ. ಒಂದು ವೇಳೆ ಬೇಡಿಕೆ ಈಡೇರದಿದ್ದರೆ ಪ್ರತಿಭಟನೆಗೆ ಮುಂದಾಗಬೇಕೆಂದು ಸಲಹೆ ಮಾಡಿದರು.
ಸಭೆಯಲ್ಲಿ ಸೈಯದ್ ಹುಮಾಯುನ್, ಮಾಲೂರಪ್ಪ, ಲಕ್ಷ್ಮೀಕಾಂತ್, ಪಕೀರಪ್ಪ, ಬಿ.ಎಂ. ಚಿಕ್ಕರಂಗಯ್ಯ, ಎಂ.ಎಸ್. ವೆಂಕಟನಾರಾಯಣ್, ಎಚ್.ಎಸ್. ಪ್ರಭಾಕರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.