ಉಚಿತ ಶೂ ವಿತರಣೆ ಕಾರ್ಯಕ್ರಮ
ಶಿರಾ: ಬಡತನದಿಂದ ಗ್ರಾಮೀಣಾಪ್ರದೇಶದಲ್ಲಿ ಮಕ್ಕಳು ಶಿಕ್ಷಣ ಮೊಟಕುಗೊಳಿಸುತ್ತಿದ್ದು, ಈ ನಿಟ್ಟಿನಲ್ಲಿ
ಅಂತವರ ಶಿಕ್ಷಣ ಅಭಿವೃದ್ಧಿಗೆ ಸಮಾಜ ಸೇವೆಯಲ್ಲಿ ತೊಡಗಿರುವ ಟ್ರಸ್ಟ್ಗಳು ಮಾಡುತ್ತಿರುವ ಸೇವೆ ಮೆಚ್ಚವಂತದ್ದು ಎಂದು ನಾದೂರು ಜಿಲ್ಲಾ ಪಂಚಾಯತಿ ಸದಸ್ಯ ಸಿ.ಆರ್. ಉಮೇಶ್ ಹೇಳಿದರು. ಅವರು ಶಿರಾ ತಾಲೂಕಿನ ಹೆಂದೊರೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕರುಣಾ ಟ್ರಸ್ಟ್ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಶೂ ವಿತರಣಾ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.
ಸರ್ಕಾರ ಟ್ರಸ್ಟ್ ನಂಬಿ ಆರೋಗ್ಯ ಮತ್ತು ಇತರೆ ಸೇವೆಗಳಿಗೆ ಜವಾಬ್ದಾರಿ ನೀಡುತ್ತಿರುವುದು ಟ್ರಸ್ಟ್ಗಳ ಸೇವ್ಪಾಪ್ರಾಮಾಣಿಕತೆಗೆ ಸಂದ ಗೌರವ ಎಂದರು.
ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ತಿಮ್ಮರಾಜು ಮಾತನಾಡಿ ಗ್ರಾಮದಲ್ಲಿ ಶೌಚಾಲಯ ಹೊಂದುವುದರ ಮೂಲಕ ಸಾಂಕ್ರಮಿಕ ರೋಗಗಳಿಗೆ ಕಡಿವಾಣ ಹಾಕುವ ಅವಶ್ಯಕತೆ ಇದ್ದು ಈ ಬಗ್ಗೆ ಮಕ್ಕಳು ಗ್ರಾಮೀಣಾ ಪ್ರದೇಶದ ನಾಗರಿಕರಿಗೆ ಅರಿವು ಮೂಡಿಸಿ ರೋಗ ಮುಕ್ತ ಗ್ರಾಮದಂತೆ ನೋಡಿಕೊಂಡಾಗ ಗಾಂಧಿ ಕಂಡ ಗ್ರಾಮ ಸ್ವರಾಜ್ಯ ಕನಸು ನನಸಾಗಲಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಂದೂರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮರಾಜ್ ಅವರು ವಹಿಸಿದ್ದರು.
ಹೆಂದೊರೆ ತಾಲೂಕು ಪಂಚಾಯಿತಿ ಸದಸ್ಯ ಕಾಂತರಾಜು, ಗ್ರಾ.ಪಂ ಸದಸ್ಯ ಆನಂದ್, ಮೋಹನ್ ಕುಮಾರ್, ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಶ್ರೀಕಾಂತ್ , ಕೆ. ವೆಂಕಟೆಶ್ ರೆಡ್ಡಿ, ಶಿಕ್ಷಕ ಕುಮಾರ್, ರಂಗನಾಥಪ್ಪ, ಮಾಯಮ್ಮ, ರವಿಕುಮಾರ್, ಕೆಂಚಮ್ಮ, ಮುಕ್ತಾನಂದ, ಸಿಡಿಯಪ್ಪ ಸೇರಿದಂತೆ ಹಲವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

