ಖೋಖೋ; ಆಳ್ವಾಸ್ ಪ್ರಥಮ
ಗುಬ್ಬಿ: ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಒಟ್ಟು 52 ತಂಡಗಳ ಆಹ್ವಾನಿತ ಖೋಖೋ ಪಂದ್ಯಾವಳಿಯನ್ನು ರಾಜ್ಯ ಖೋಖೋ ಫೆಡರೇಷನ್ ನಿಯಾಮಾನುಸಾರ ನಡೆಸಲಾಗಿದ್ದು, ಪುರುಷ ವಿಭಾಗದ ಫೈನಲ್ ಪಂದ್ಯದಲ್ಲಿ ಮೂಡಬಿದರೆ ಆಳ್ವಾಸ್ ತಂಡ ಬೆಂಗಳೂರಿನ ಪಯೋನಿಯರ್ಸ್ ತಂಡದ ಎದುರು ರೋಚಕ ಜಯ ಗಳಿಸಿದೆ. ಹಾಸನಾಂಬ ತಂಡ ತೃತೀಯ ಸ್ಥಾನ ಗಳಿಸಿದರೆ, ಅತಿಥೇಯ ಎಸ್ಸಿವೈಸಿ ತಂಡ ಚತುರ್ಥ ಗಳಿಸಿದೆ.
ಮಹಿಳಾ ವಿಭಾಗದಲ್ಲಿ ಟಿ.ನರಸೀಪುರದ ನವೋದಯ ತಂಡ ಪ್ರಥಮ ಸ್ಥಾನ ಗಳಿಸಿದರೆ, ಫೈನಲ್ನಲ್ಲಿ ಸೋತ ಅತಿಥೇಯ ಎಸ್ಸಿವೈಸಿ ತಂಡ ದ್ವಿತೀಯ ಸ್ಥಾನ ಗಳಿಸಿದೆ. ತೃತೀಯ ಸ್ಥಾನದಲ್ಲಿ ರಾಯಚೂರು ಕೆಎಂಎಸ್ ತಂಡ, ಚತುರ್ಥ ಸ್ಥಾನದಲ್ಲಿ ಶಿವಮೊಗ್ಗದ ಸಿಕೆಕೆಸಿ ತಂಡ ಪಡೆದುಕೊಂಡಿದೆ. ಬಾಲಕರ ವಿಭಾಗದಲ್ಲಿ ತುಮಕೂರಿನ ವಿವೇಕಾನಂದ ತಂಡ ಪ್ರಥಮ ಸ್ಥಾನ ಗಳಿಸಿದರೆ, ಬೆಂಗಳೂರಿನ ಪಯೋನಿಯರ್ಸ್ ತಂಡ ದ್ವಿತೀಯ ಸ್ಥಾನ ಪಡೆದಿದೆ. ದಾವಣಗೆರೆಯ ಡಿವೈಎಸ್ಎಸ್ ತಂಡ ತೃತೀಯ ಹಾಗೂ ಅತಿಥೇಯ ಎಸ್ಸಿವೈಸಿ ತಂಡ ಚತುರ್ಥ ಸ್ಥಾನ ಪಡೆದುಕೊಂಡಿದೆ.
ಫೈನಲ್ ಪಂದ್ಯದ ಪಂದ್ಯ ಪುರುಷೋತ್ತಮ ವೈಯಕ್ತಿಕ ಬಹುಮಾನ ಮೂಡಬಿದರೆ ಆಳ್ವಾಸ್ ತಂಡದ ಗಿರೀಶ್ ಪಡೆದುಕೊಂಡರು. ಉತ್ತಮ ಓಟಗಾರನಾಗಿ ಅತಿಥೇಯ ಎಸ್ಸಿವೈಸಿ ತಂಡದ ವಿನಾಯಕ, ಉತ್ತಮ ಹಿಡಿತಗಾರನಾಗಿ ಬೆಂಗಳೂರಿನ ಪಯೋನಿಯರ್ಸ್ ತಂಡದ ಬಸವರಾಜು ಗಳಿಸಿಕೊಂಡಿದ್ದಾರೆ. ಮಹಿಳಾ ವಿಭಾಗದಲ್ಲಿ ಶ್ರೇಷ್ಠ ಆಟಗಾರ್ತಿಯಾಗಿ ಟಿ.ನರಸೀಪುರದ ನವೋದಯ ತಂಡದ ಮೇಘನಾ ಆಯ್ಕೆಯಾದರು. ಉತ್ತಮ ಓಟಗಾರ್ತಿಯಾಗಿ ರಾಯಚೂರು ಕೆಎಂಎಸ್ ತಂಡದ ನಿರ್ಮಲ, ಉತ್ತಮ ಹಿಡಿತಗಾರ್ತಿಯಾಗಿ ಅತಿಥೇಯ ಎಸ್ಸಿವೈಸಿ ತಂಡದ ರೂಪ ಪಡೆದುಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

