ತುಮಕೂರು

ಹಳ್ಳಿ ಸಂಸ್ಕೃತಿ ಅನಾವರಣ

Published On :

ಕ.ಪ್ರ.ವಾರ್ತೆ ,  ತುಮಕೂರು ,  ಜ.18
ನಗರದ ಬಟವಾಡಿ ಮಹಾಲಕ್ಷ್ಮೀ ನಗರದಲ್ಲಿರುವ ಶ್ರೀರಂಗ ವಿದ್ಯಾಮಂದಿರದಲ್ಲಿ ಹಳ್ಳಿ ಆಟ - ಹಳ್ಳಿ ಊಟ  ಎಂಬ ಹೆಸರಿನಲ್ಲಿ ವಿಶಿಷ್ಟ ವಿನೂತನ ಕಾರ್ಯಕ್ರಮ ನಡೆಯಿತು. ಎಂದಿನಂತೆ ನಡೆಯುತ್ತಿದ್ದ ಶಾಲಾ ವಾರ್ಷಿಕೋತ್ಸವದ ಬದಲಾಗಿ ಪೋಷಕರ ದಿನಾಚರಣೆಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಅಪ್ಪಟ ಹಳ್ಳಿ ಸಂಸ್ಕೃತಿ, ಗ್ರಾಮೀಣ ಸೊಗಡು ಅನಾವರಣಗೊಂಡಿತ್ತು.
ತನ್ನ ಶಾಲೆಯ ವಿದ್ಯಾರ್ಥಿಗಳ ನಗರಕೇಂದ್ರಿತ ಪೋಷಕರಿಗಾಗಿ ನಡೆದ ಈ ಕಾರ್ಯಕ್ರಮದಲ್ಲಿ 250 ಕ್ಕಿಂತಲೂ ಹೆಚ್ಚಿನ ಪೋಷಕರು ನಗರದ ಮೂಲೆಮೂಲೆಗಳಿಂದ ಬಂದರು. ಖುಷಿ ಖುಷಿಯಾಗಿ ಭಾಗವಹಿಸಿದರು. ಕಲ್ಲುಗಳಿಂದ ಒಲೆ ಹೂಡಿದರು. ಪಾತ್ರೆ ಪಗಡ ಇಟ್ಟು ದವಸ ಧಾನ್ಯ ಹಾಕಿ ಹಳ್ಳಿ ಅಡುಗೆ ಮಾಡಿದರು. ಹಳ್ಳಿ ಆಟಗಳನ್ನು ಆಡಿದರು. ಗೆದ್ದವರು ಸಂಭ್ರಮಿಸಿದರು. ಸೋತವರು ಅಭಿನಂದಿಸಿದರು. ಪಾಲಕರ ಆಟಪಾಠ ನೋಡಿ ಮಕ್ಕಳು ನಲಿದರು. ಹಳ್ಳಿ ಊಟ ಮಾಡಿದರು, ಸಂತಸಪಟ್ಟರು.
ಈ ವಿಶಿಷ್ಟ ಸಂದರ್ಭಕ್ಕೆ ಸಾಕ್ಷಿಯಾದವರು ಖ್ಯಾತ ಚಲನಚಿತ್ರ ನಟಿ ಭವ್ಯ, ನಗರ ಮಧ್ಯದಲ್ಲಿ ಮರುಸೃಷ್ಟಿಗಳಿಂದ ಹಳ್ಳಿಯ ಪರಿಸರವನ್ನು ಕಂಡು ಆನಂದಿಸಿದರು. ಈ ವಿಶಿಷ್ಟ ಕಾರ್ಯಕ್ರಮದ ಮೇಲ್ಪಂಕ್ತಿಯನ್ನು ನಗರ ಪ್ರದೇಶದ ಎಲ್ಲ ಶಾಲಾ ಕಾಲೇಜುಗಳು ಅನುಸರಿಸಬೇಕು, ನಮ್ಮ ಪರಂಪರೆಯನ್ನು ಸಂಸ್ಕೃತಿಯನ್ನು ಸಂರಕ್ಷಿಸಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಸಂಚಾಲಕ ಸಿ. ಲಲಿತ ಮಲ್ಲಪ್ಪ ಮತ್ತು ಜಿ.ಪಂ. ಮಾಜಿ ಅಧ್ಯಕ್ಷ ಸುನಂದ ಪಿ. ಕುಮಾರ್ ಅವರು ನಟಿ ಭವ್ಯ ಅವರನ್ನು ಶಾಲುಹೊದಿಸಿ ಫಲಪುಷ್ಪ ನೀಡಿ ವಿದ್ಯಾಮಂದಿರದ ಪರವಾಗಿ ಗೌರವ ಸಲ್ಲಿಸಿದರು. ಮೆಚ್ಚಿದ ನಟಿಯನ್ನು ನೋಡಿ ಎಲ್ಲರೂ ಆನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.