ರೋಟರಿ ಕಾರ್ಯಕ್ಕೆ ಶ್ಲಾಘನೆ
ಹುಳಿಯಾರು: ಅನೇಕ ವರ್ಷಗಳಿಂದ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಾಮಾಜಿಕವಾಗಿ ಸ್ವಯಂ ಪ್ರೇರಣೆಯಿಂದ ಸಮಾಜದ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಸಾಗುತ್ತಿರುವ ರೋಟರಿ ಸಂಸ್ಥೆ ಸದಾಕಾಲ ಕ್ರಿಯಾತ್ಮಕವಾದುದು ಎಂದು ರೋಟರಿ ಜಿಲ್ಲಾ ಗವರ್ನರ್ ಕೆ.ಎಸ್. ನಾಗರಾಜು ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ರೋಟರಿ ಬಾಲಭವನದಲ್ಲಿ ಹೋಬಳಿ ರೋಟರಿ ಸಂಸ್ಥೆಯ ಹಮ್ಮಿಕೊಂಡಿದ್ದ ಅಧಿಕೃತ ರಾಜ್ಯಪಾಲರ ಭೇಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರೋಟರಿ ಸ್ಥಾಪನೆಯಾದ ಅಂದಿನಿಂದಲೂ ಸಮಾಜದ ಜನರ ಕಷ್ಟಗಳ ನಿವಾರಣೆಗಾಗಿ ದುಡಿಯುತ್ತಿದೆ. ಇಂತಹ ಸಾರ್ವಜನಿಕ ಹಿತಾಸಕ್ತಿಯನ್ನು ಹೊಂದಿರುವ ಸಂಸ್ಥೆಗೆ ನಿಸ್ವಾರ್ಥ ಮನೋಭಾವದಿಂದ ಹೆಚ್ಚಿನ ಯುವಪೀಳಿಗೆಯ ಜನ ಸದಸ್ಯರಾಗಲು ಮುಂದೆ ಬರುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವಂತೆ ತಿಳಿಸಿದರು. ಹುಳಿಯಾರು ರೋಟರಿ ಸಂಸ್ಥೆಯಲ್ಲಿ ಕಡಿಮೆ ಸದಸ್ಯರಿದ್ದರೂ ಸಹ ಅವರುಗಳು ಕೈಗೊಳ್ಳಂಡಿರುವ ಉಚಿತ ಸಾಮೂಹಿಕ ವಿವಾಹ, ಉಚಿತ ರಕ್ತದಾನ ಶಿಬಿರಗಳು, ಉಚಿತ ಆರೋಗ್ಯತಪಾಸಣೆ ಶಿಬಿರ, ಸೋಲಾರ್ಲೈಟ್ ವಿತರಣೆ, ಪುಸ್ತಕ ವಿತರಣೆ ಸೇರಿದಂತೆ ಹತ್ತಾರು ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದರ ಜೊತೆಗೆ ಈ ಸಂಘದವರು ಮಾಡುವ ಕಾರ್ಯವನ್ನು ಪ್ರತಿ ತಿಂಗಳು ಜಿಲ್ಲಾ ಸಂಘಕ್ಕೆ ತಿಳಿಸುವಂತೆ ಹಾಗೂ ಅದರ ಸಹಕಾರವನ್ನು ಪಡೆಯುವಂತೆ ತಿಳಿಸಿದರು.
ಹೋಬಳಿ ಘಟಕದ ಅಧ್ಯಕ್ಷ ಗಂಗಾಧರರಾವ್ ಮಾತನಾಡಿ, ಸಮಾಜದಲ್ಲಿ ಯಾರಿಗಾದರೂ ತೊಂದರೆಯಾಗಿದೆ ಎಂದರೆ ಅಲ್ಲಿ ರೋಟರಿ ಸಂಸ್ಥೆ ಸಿದ್ಧವಿರುತ್ತದೆ. ನಾವು ಕೈಗೊಳ್ಳುವ ಕಾರ್ಯಗಳಲ್ಲಿ ಯಾವುದೇ ಸ್ವಾರ್ಥ, ಭೇದಭಾವ, ಜಾತಿಧರ್ಮದ ಅಂತರವಿರುವುದಿಲ್ಲ ಎಂದರು. ಇಂತಹ ಸಂಸ್ಥೆಗೆ ಜನ ಸ್ವಯಂ ಸೇವಾ ಮನೋಭಾವದಿಂದ ನೊಂದಾಯಿತರಾಗಿ ಹೋಬಳಿ ಸಂಘವನ್ನು ಪೋಷಿಸಿ ಬೆಳೆಸುವಂತೆ ಕೋರಿದರು.
ಜಿಲ್ಲಾ ಸಂಸ್ಥೆಯ ನಾಗರಾಜು, ರಮೇಶ್, ಸತೀಶ್, ಶ್ರೀನಾಥ್ಬಾಬು, ಹುಳಿಯಾರು ರೋಟರಿ ಸಂಸ್ಥೆಯ ಕಾರ್ಯದರ್ಶಿ ರವೀಶ್,ಮಂಜುನಾಥ ಗುಪ್ತ, ಮಲ್ಲಿಕಣ್ಣ, ಶ್ರೀನಿವಾಸ್, ಕಾರ್ಗಿಲ್ಸತೀಶ್, ವೆಂಕಟಾಚಲಪತಿ ಶೆಟ್ರು ಉಪಸ್ಥಿತರಿದ್ದು, ಪಟ್ಟಣದ ಅಸ್ಪತ್ರೆಯ ರೇವಣ್ಣ ಹಾಗೂ ಆಟೋ ಚಾಲಕ ಜಬಿ ಅವರನ್ನು ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

