ತುಮಕೂರು

ನಿಲ್ಲದ ಅಕ್ರಮ ಮರಳು ದಂಧೆ

Published On :

ಮಧುಗಿರಿ: ತಾಲೂಕಿನ ಜೀವ ನದಿಗಳಾದ ಕುಮದ್ವತಿ ಹಾಗೂ ಜಯಮಂಗಲಿ ನದಿ ಪಾತ್ರದಲ್ಲಿ ಅಕ್ರಮ ಮರಳು ದಂಧೆ ರಾತ್ರಿ ವೇಳೆ ಎಗ್ಗಿಲ್ಲದೆ ಸಾಗಿದೆ.
ತಾಲೂಕಿನ ಆಂಧ್ರದ ಗಡಿಯಲ್ಲಿರುವ ಕೊಡಿಗೇನಹಳ್ಳಿ ಹೋಬಳಿ ಕಸಿನಾಯಕನಹಳ್ಳಿ, ಕಡಗತ್ತೂರು, ವೆಂಗಳಮ್ಮನಹಳ್ಳಿ ಸುತ್ತಮುತ್ತ ಕುಮದ್ವತಿ ಮತ್ತು ಜಯಮಂಗಲಿ ನದಿ ಪಾತ್ರಗಳಲ್ಲಿ ಪ್ರತಿ ನಿತ್ಯ  ರಾತ್ರಿ ವೇಳೆ ನೂರಾರು ಅಕ್ರಮ ಮರಳು ತುಂಬಿದ ಲಾರಿಗಳು ಬೆಂಗಳೂರಿಗೆ ಹೋಗುತ್ತಿವೆ.
ಜಯಮಂಗಲಿ ನದಿ ನಿಷೇಧಿತ ಪ್ರದೇಶ ಎಂದು ಸರ್ಕಾರ ಘೋಷಿಸಿದ್ದರೂ ನಿರಂತರವಾಗಿ ದಂಧೆ ಮುಂದುವರಿದಿದೆ. ಮರಳು ಲಾರಿಗಳ ಸಂಚಾರದಿಂದಾಗಿ ಈ ಭಾಗದ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿದೆ. ಸಂಬಂಧಪಟ್ಟ ಇಲಾಖೆ  ಅಧಿಕಾರಿಗಳು ಇತ್ತ ಗಮನ ಹರಿಸಿ ಮರಳು ಮಾಫಿಯಾಗೆ ಕಡಿವಾಣ ಹಾಕಬೇಕು ಎಂದು ಈ ಬಾಗದ ಜನತೆ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 13 ಲಾರಿಗಳನ್ನು ಮಧುಗಿರಿ ಸಿಪಿಐ ಗಿರೀಶ್ ನಾಯ್ಕ್ ನೇತೃತ್ವದ ತಂಡ ದಾಳಿ ಮಾಡಿ ವಶಪಡಿಸಿಕೊಂಡಿದೆ. ಲಾರಿಗಳಿಗೆ 25 ಸಾವಿರ ರು.ದಂಡ ವಿಧಿಸಿ
ಲೋಕೋಪಯೋಗಿ ಇಲಾಖೆಗೆ ಒಪ್ಪಿಸಿದ್ದಾರೆ. ಮರಳು ದಂಧೆಗೆ ಕಡಿವಾಣ ಹಾಕಲು ಮಿಡಿಗೇಶಿ ಹೋಬಳಿ ರೆಡ್ಡಿಹಳ್ಳಿ, ಕೊಡಿಗೇನಹಳ್ಳಿ ಹೋಬಳಿ ಕಸಿನಾಯಕನಹಳ್ಳಿಯಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದೆ ಎಂದು ಸಿಪಿಐ ಗಿರೀಶ್ ನಾಯ್ಕ್ ತಿಳಿಸಿದ್ದಾರೆ.
ದಾಳಿಯಲ್ಲಿ ಪೊಲೀಸ್ ಸಿಬ್ಬಂದಿ ರಂಗನಾಥ್, ಧರ್ಮಪಾಲ್, ಶ್ರೀನಿವಾಸ್, ರಂಗಧಾಮಯ್ಯ, ಕುಮಾರಸ್ವಾಮಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.