ಇಲ್ಲಗಳ ನಡುವೆ ಪಪೂ ಕಾಲೇಜು
ಅಣೇಕಟ್ಟೆ ಸಿದ್ದರಾಮಣ್ಣ
ಚಿಕ್ಕನಾಯಕನಹಳ್ಳಿ: ನಲವತ್ತು ವರ್ಷಗಳ ಹಿಂದೆ ಸರ್ವೋದಯ ಪಥದ ಜಿ.ವಿ.ನಾರಾಯಣಮೂರ್ತಿಯಂತಹ ಶಿಕ್ಷಣ ಪ್ರೇಮಿಗಳಿಂದ ಪ್ರಾರಂಭವಾದ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜು ಉಪನ್ಯಾಸಕರು ಮತ್ತು ಇತರೆ ಸೌಲಭ್ಯಗಳ ಕೊರತೆಯಿಂದ ಸೊರಗುತ್ತಿದೆ.
1973ರಲ್ಲಿ ಪ್ರಾರಂಭವಾದ ರಾಜ್ಯದ ಮೊದಲ ಎರಡು ಸ್ವತಂತ್ರ ಪದವಿ ಪೂರ್ವಕಾಲೇಜುಗಳಲ್ಲಿ ಒಂದಾದ ಕಾಲೇಜು ವಿದ್ಯಾರ್ಥಿಗಳಿದ್ದರು ಉಪನ್ಯಾಸಕರ ಕೊರತೆ ಕಾಡುತಿದೆ. ಶಿಕ್ಷಣ ಭೀಷ್ಮರಾದ ದೇಶೀಯ ವಿದ್ಯಾಪೀಠದ ಮುಖ್ಯಶಿಕ್ಷಕ ಸಿ.ಟಿ. ಈಶ್ವರನ್, ಸಿ.ಕೆ. ಕೃಷ್ಣರಾವ್ ಶಿಕ್ಷಣಾಸಕ್ತರು ಸೇರಿ 40 ವರ್ಷಗಳ ಹಿಂದೆ 1 ಲಕ್ಷ ರು.ಗಳ ಠೇವಣಿ ಮತ್ತು 8 ಎಕರೆ ಸ್ಥಳಾವಕಾಶದ ಸರ್ಕಾರದ ಷರತ್ತುಗಳಿಗೆ ಸಮ್ಮತಿಸಿ ಕಾಲೇಜನ್ನು ಪ್ರಾರಂಭಿಸಿದರು. ಅಂದಿನ ಕಾಲಕ್ಕೇ 50 ಸಾವಿರ ದಾನ ನೀಡಿದ ದಿ.ನಾರಾಯಣಶೆಟ್ಟಿ, ಬ್ರಹ್ಮಪುರಿ ಆಂಜನೇಯ ಸ್ವಾಮಿಯ 8 ಎಕರೆ ಜಮೀನು ದಾನನೀಡಿದ ದೇವಾಲಯ ಆಡಳಿತ ಮಂಡಳಿ, ಮರಕ್ಕೊಂದು ತೆಂಗಿನಕಾಯಿ ಕೊಟ್ಟು ಸರ್ಕಾರಕ್ಕೆ ಕಟ್ಟಬೇಕಾಗಿದ್ದ 1ಲಕ್ಷ ರು.ಗಳನ್ನು ಒಟ್ಟುಗೂಡಿಸಿ ತಂದ ಕಾಲೇಜಿನ ಸ್ಥಿತಿ ಇಂದು ಸೌಲಭ್ಯಗಳ ಕೊರತೆಯಿಂದ ಕ್ಷೀಣಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

