ತುಮಕೂರು

ಸೌಂದರ್ಯ ಲಹರಿ ಪಠಣ ನಾಳೆ

Published On :

ತುಮಕೂರು: ಇಲ್ಲಿನ ಶಿವಡಂಗುರ ಧಾರ್ಮಿಕ ಪತ್ರಿಕೆ ಹಾಗೂ ಲಲಿತಾಂಬಿಕಾ ಮಹಿಳಾ ಭಜನಾ ಮಂಡಳಿಯಿಂದ ಜೂ.10 ರಂದು ಮಂಗಳವಾರ ಬೆಳಿಗ್ಗೆ 10.30 ಕ್ಕೆ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದ ರಂಗತಾಲೀಮು ಸಭಾಂಗಣದಲ್ಲಿ ಲಲಿತಾ ಸಹಸ್ರನಾಮ ಸೌಂದರ್ಯಲಹರಿ ಮತ್ತು ಪೂಜಾ ಪಠಣ ಏರ್ಪಡಿಸಲಾಗಿದೆ. ಸಾನಿಧ್ಯವನ್ನು ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಾರದ ವೀರಬಸವ ಸ್ವಾಮೀಜಿ ವಹಿಸಲಿದ್ದಾರೆ.

ವರ್ಷನಿಧಿ ಸಹಕಾರಿ ಬ್ಯಾಂಕ್ ಉದ್ಘಾಟನೆ
ಕೊರಟಗೆರೆ: ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸಹಕಾರ ಪತ್ತಿನ ಬ್ಯಾಂಕ್ಗಳು ಉಪಯೋಗಕಾರಿ ಎಂದು ಸಿದ್ದರಬೆಟ್ಟದ ಬಾಳೇಹೊನ್ನೂರು ಖಾಸಾ ಶಾಖಾ ಮಠದ ವೀರಭದ್ರಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಪಟ್ಟಣದಲ್ಲಿ ವರ್ಷನಿಧಿ ಪತ್ತಿನ ಸೌಹಾರ್ದ ಸಹಕಾರಿ ನೂತನ ಬ್ಯಾಂಕ್ ಉದ್ಘಾಟನೆ ನೆರವೇರಿಸಿ ಮಾತನಾಡಿ ಆರೋಗ್ಯದ ಸಮಸ್ಯೆ ಎದುರಿಸುತ್ತಿರುವವರಿಗೆ ಬ್ಯಾಂಕ್ ಸಹಾಯ ಹಸ್ತ ಚಾಚಬೇಕು. ಸಮಾಜಿಕವಾಗಿ ಬ್ಯಾಂಕ್ ಬೆಳೆಯಬೇಕು. ಇದಕ್ಕೆ ಬ್ಯಾಂಕ್ನ ಪಧಾದಿಕಾರಿಗಳು ಹಾಗೂ ಷೇರುದಾರರ ಸಹಕಾರ ಹೆಚ್ಚಿದ್ದು ಈ ನಿಟ್ಟಿನಲ್ಲಿ ಬ್ಯಾಂಕ್ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಲಿ ಎಂದು ಹಾರೈಸಿದರು. ಬ್ಯಾಂಕ್ನ ಅಧ್ಯಕ್ಷ ಸಿ. ಶಿವಣ್ಣ ಮಾತನಾಡಿದರು. ಬ್ಯಾಂಕ್ ಉಪಾಧ್ಯಕ್ಷ ಅಬ್ದುಲ್ ರಹೀಮ್ ಸಾಬ್, ಸದಸ್ಯರುಗಳಾದ ಗಿರೀಶ್, ಆನಂದ್ ಕುಮಾರ್, ಮಂಜುನಾಥ್, ಪದ್ಮಾವತಿ, ರಂಗಮ್ಮ, ವಕೀಲ ನಾಗರಾಜು ಇದ್ದರು.




ವೈ.ಎಸ್.ಹುಚ್ಚಯ್ಯಗೆ ಸನ್ಮಾನ
ಪಾವಗಡ: ಜಿಪಂ ಪ್ರಭಾರ ಅಧ್ಯಕ್ಷರಾಗಿ ಆಯ್ಕೆಯಾದ ವೈ.ಎಸ್.ಹುಚ್ಚಯ್ಯ ಅವರನ್ನು ಇಲ್ಲಿನ ವಿವಿಧ ದಲಿತ ಪರ ಸಂಘಟನೆಗಳು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಡಿಎಸ್ಎಸ್ ತಾಲೂಕು ಸಂಚಾಲಕ ಸಿ.ಕೆ.ತಿಪ್ಪೇಸ್ವಾಮಿ, ಕುಣಿಗಲ್ ತಾಲೂಕಿನ ಹುತ್ರಿದುರ್ಗ ಜಿಪಂ ಕ್ಷೇತ್ರದಿಂದ ಸತತ 4 ನೇ ಬಾರೀ ಸದಸ್ಯರಾಗಿ ಆಯ್ಕೆಯಾದ ವೈ.ಎಸ್.ಹುಚ್ಚಯ್ಯ ಅವರದ್ದು ಜನಪರ ವ್ಯಕ್ತಿತ್ವ. ಎಲ್ಲಾ ವರ್ಗದ ಬಡವರ ಏಳಿಗೆ ಮತ್ತು ಭ್ರಷ್ಟಾಚಾರ ನಿಯಂತ್ರಿಸುವ ಮೂಲಕ ಜಿಪಂ ಆಡಳಿತದಲ್ಲಿ ಪರಾದರ್ಶಕತೆ ಕಾಪಾಡುವ ವಿಶ್ವಾಸವಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.