ತುಮಕೂರು

ಮದ್ಯ ಮಾರಾಟಕ್ಕೆ ವಿರೋಧ

Published On :

ಮಧುಗಿರಿ: ದೇಶದ ಹಿತ ದೃಷ್ಟಿಯಿಂದ ಮದ್ಯದಿಂದ ಆದಾಯ ಸಂಗ್ರಸುವುದನ್ನು ನಿಲ್ಲಿಸಬೇಕು ಎಂದು  ತಗ್ಗಿಹಳ್ಳಿ ಶ್ರೀ ರಾಮಕೃಷ್ಣಾಶ್ರಮ ಮಠದ ಶ್ರೀ ರಮಾನಂದ ಚೈತನ್ಯಸ್ವಾಮೀಜಿ ನುಡಿದರು.
 ತಾಲೂಕಿನ ಪುರವರದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಏರ್ಪಡಿಸಿದ್ದ ಮದ್ಯವರ್ಜನೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ,ನಮ್ಮ ದೇಶದಲ್ಲಿ ಮಾನವ ಸಂಪನ್ಮೂಲ ಬಳಸಿ ಒಳ್ಳೆ ಆದಾಯ ಗಳಿಸಬಹುದು. ಆದರೆ ಸರ್ಕಾರ ಜನತೆಗೆ ಮದ್ಯದ ರುಚಿ ತೋರಿಸಿ ಆದಾಯಗಳಿಸುವ ನಿಟ್ಟಿನಲ್ಲಿ ದುರ್ಬಲರನ್ನು ಕುಡಿತದ ಚಟಕ್ಕೆ ತಳ್ಳುತ್ತಿರುವುದು ವಿಷಾದದ ಸಂಗತಿ ಎಂದರು.
 ಧಾರ್ಮಿಕ ಮುಖಂಡ ಎಂ.ಜಿ.ಶ್ರೀನಿವಾಸಮೂರ್ತಿ, ಕುಡಿತದ ಚಟಕ್ಕೆ ಬಿದ್ದ ಅನೇಕ  ಕುಟುಂಬಗಳು ಬೀದಿ ಪಾಲಾಗಿವೆ. ಇಂತಹ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭೀವೃದ್ಧಿ ಸಂಸ್ಥೆ ಮದ್ಯ ಕುಡಿಯುವ ವ್ಯಕ್ತಿಗಳನ್ನು ಗರುತಿಸಿ ಅವರಿಗೆ ಮದ್ಯದ ಚಟ ಬಿಡಿಸುವ ಕಾರ್ಯಕ್ರಮ ಉತ್ತಮವಾದುದು ಎಂದರು.
ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಪಿ.ಕೆ.ಪುರುಷೋತ್ತಮ್ ಮಾತನಾಡಿದರು. ಶಿಬಿರದ ಅಧ್ಯಕ್ಷ ಲಿಂಗಾರೆಡ್ಡಿ,ನಿರ್ದೇಶಕ ವೀವೇಕ್,ಯೋಜನಾಧಿಕಾರಿ ಜಿನ್ನಪ್ಪ,ಮೇಲ್ವಿಚಾರಕ ಧರ್ಮರಾಜ್, ಮೋಹನ್ ಮತ್ತು ಗ್ರಾಮಾಭಿವೃದ್ಧಿ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


ನಂಜುರೋಗಕ್ಕೆ ಔಷಧಿ ಸಿಂಪರಣೆಗೆ ಸಲಹೆ

ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಹೆಸರು ಬೆಳೆಗೆ ನಂಜುರೋಗ ತಗುಲಿದ್ದು, ಅದರ ನಿವಾರಣೆಗಾಗಿ ರೋಗನಿರೋಧಕ ಔಷಧಿ ಸಿಂಪರಣೆ ಮಾಡುವಂತೆ ಕೃಷಿ ಇಲಾಖೆ ಸಲಹೆ ಮಾಡಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಇಲಾಖೆ, ನಂಜುರೋಗವು ಪ್ರಾರಂಭಿಕ ಹಂತದಲ್ಲಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಹೂವು ಮತ್ತು ಕಾಯಿ ಕಟ್ಟುವ ಪ್ರಮಾಣ ಕಡಿಮೆಯಾಗುತ್ತಿದೆ. ಇದರ ಹತೋಟಿಗಾಗಿ ಔಷಧಿ ಸಿಂಪರಣೆ ಅನಿವಾರ್ಯ. ರೋಗ ತಗುಲಿರುವ ಸಸಿಗಳನ್ನು ಕಿತ್ತು ನಾಶಪಡಿಸುವುದು,1.7 ಮಿಲಿ ಡೈಮಿಥೋಯೇಟ್ ಔಷಧವನ್ನು ಅಥವಾ 0.5 ಮಿಲೀ ಪಾಸ್ಪಾಮಿಡಾನ್ ಔಷಧವನ್ನು 1 ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಒಂದು ಎಕರೆಗೆ ಸುಮಾರು 250ಲೀ. ನಷ್ಟು ದ್ರಾವಣ ಬೇಕಾಗುತ್ತದೆ.
ಮೇಲಿನ ಸಸ್ಯಸಂರಕ್ಷಣಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ರೈತರಿಗೆ ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ರೈತಸಂಪರ್ಕ ಕೇಂದ್ರಗಳ ಅಧಿಕಾರಿಗಳನ್ನು ಸಂಪರ್ಕಿಸಲು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.