ತುಮಕೂರು

ಶಿಕ್ಷಕರ ವರ್ಗಾವಣೆ

Published On :

2014-15ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ವೃಂದದ ಶಿಕ್ಷಕರ ವರ್ಗಾವಣೆಯನ್ನು ಆನ್‌ಲೈನ್ ಮೂಲಕ ಜಾರಿಗೊಳಿಸಲು ಘಟಕದೊಳಗಿನ ಕೋರಿಕೆ ವರ್ಗಾವಣೆಯ ತಾತ್ಕಾಲಿಕ ಆದ್ಯತಾ ಪಟ್ಟಿಯನ್ನು ಡಿಡಿಪಿಐ ಕಚೇರಿಯಲ್ಲಿ ಪ್ರಕಟಿಸಲಾಗಿದೆ. ಈ ಆದ್ಯತಾ ಪಟ್ಟಿಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಸಂಬಂಧಿಸಿದ ಶಿಕ್ಷಕರು ಜೂನ್ 18 ರೊಳಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದಾಖಲೆಗಳೊಂದಿಗೆ ಸಲ್ಲಿಸಲು ಕೋರಿದೆ.

ವಿದ್ಯಾರ್ಥಿನಿಲಯಕ್ಕೆ ಅರ್ಜಿ
ತಿಪಟೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ತಿಪಟೂರು ಟೌನ್‌ನಲ್ಲಿ ನಡೆಯುತ್ತಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ-ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ 2014-15ನೇ ಸಾಲಿನ ನಿಲಯಕ್ಕೆ ಸೇರಿ ವ್ಯಾಸಂಗ ಮಾಡಬಯಸುವ ಹಿಂದುಳಿದ ವರ್ಗ-1, 2ಎ, 2ಬಿ, 3ಎ, 3ಬಿ ಮತ್ತು ಪ. ಜಾತಿ, ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜು. 19 ಕೊನೆ ದಿನಾಂಕವಾಗಿರುತ್ತದೆ.
ಅರ್ಜಿಗಳನ್ನು ನಿಲಯದ ವಾರ್ಡನ್‌ರಿಂದ ಅರ್ಜಿ ಪಡೆದು, ಇತ್ತೀಚಿನ 4ಪಾಸ್‌ಪೋರ್ಟ್ ಸೈಜಿನ ಭಾವಚಿತ್ರ, ತೇರ್ಗಡೆ ಅಂಕಪಟ್ಟಿ ಹಾಗೂ ಪ್ರಾಂಶುಪಾಲರಿಂದ ದೃಢೀಕರಣ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ದೂರದ ದೃಢೀಕರಣ ಪ್ರತಿ, ಆಧಾರ್‌ಕಾರ್ಡ್ ಜೆರಾಕ್ಸ್‌ಪ್ರತಿ ಲಗತ್ತಿಸಬೇಕು. ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುವುದೆಂದು ತಾಲೂಕು ಹಿಂದಳಿದ ವರ್ಗಗಳ ವಿಸ್ತರಣಾಧಿಕಾರಿಗಳು ತಿಳಿಸಿದ್ದಾರೆ.

ಮದ್ಯವರ್ಜನ ಶಿಬಿರ
ಗುಬ್ಬಿ: ಸಾಮಾಜಿಕ ಬದುಕಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಉತ್ತಮ ಆರೋಗ್ಯವಂತರಾಗಿ ಜೀವನ ಸಾಗಿಸಬೇಕಾದರೆ ದುಶ್ಚಟಗಳಿಂದ ದೂರವಿರಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಗಂಗಾಧರ ರೈ ತಿಳಿಸಿದರು. ತಾಲೂಕಿನ ನಿಟ್ಟೂರಿನ ವೆಂಕಟೇಶ್ವರ ಕಲ್ಯಾಣ ಮಂದಿರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸರುವ 697 ನೇ ಮದ್ಯವರ್ಜನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಇದುವರೆಗೂ 696 ಮದ್ಯವರ್ಜನ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿದ್ದು, ಸಹಸ್ರಾರು ಕುಟುಂಬಗಳು ನೆಮ್ಮದಿಯ ಬದುಕುಸಾಗಿಸುತ್ತಿವೆ ಎಂದು ಅವರು ತಿಳಿಸಿದರು. ಮುಖಂಡರಾದ ಎನ್.ಸಿ. ನಂಜಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಮದ್ಯವರ್ಜನ ಶಿಬಿರದ ಅಧ್ಯಕ್ಷ ಜಯಪ್ರಕಾಶ್, ಗ್ರಾಪಂ ಮಾಜಿ ಅಧ್ಯಕ್ಷ ರಂಗಸ್ವಾಮಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ  ಪ್ರವೀಣ್‌ಕುಮಾರ್, ಎನ್.ಸಿ. ಗಿರೀಶ್ ಸೇರಿದಂತೆ ಯೋಜನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

ವಿದ್ಯಾರ್ಥಿಗಳಿಗೆ  ಬಸ್‌ಪಾಸ್
ತುಮಕೂರು: ರಾಜ್ಯ ರಸ್ತೆ ಸಾರಿಗೆ ನಿಗಮ 2014-15 ನೇ ಸಾಲಿಗಾಗಿ ವಿದ್ಯಾರ್ಥಿ ರಿಯಾಯತಿ ಬಸ್‌ಪಾಸ್‌ಗಳನ್ನು ವಿತರಿಸಲಿದ್ದು, ವಿದ್ಯಾರ್ಥಿಗಳು ಭರ್ತಿ ಮಾಡಿದ ಅರ್ಜಿ ಫಾರಂಗಳನ್ನು ನಿಗದಿತ ಶುಲ್ಕದೊಂದಿಗೆ ಸಂಬಂಧಪಟ್ಟ ಶೈಕ್ಷಣಿಕ ಸಂಸ್ಥೆಗಳ ಮೂಲಕ ನಿಗಮಕ್ಕೆ ಸಲ್ಲಿಸಿ ಬಸ್ ಪಾಸ್‌ಗಳನ್ನು ಪಡೆದುಕೊಳ್ಳುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಶೈಕ್ಷಣಿಕ ಸಂಸ್ಥೆಯಿಂದ ಮತ್ತು ವಾಸ ಸ್ಥಳಕ್ಕೆ 60 ಕಿ.ಮೀ. ಗರಿಷ್ಠ ಅಂತರವಿರುವ ವಿದ್ಯಾರ್ಥಿಗಳು ಮಾತ್ರ ಈ ಸೌಲಭ್ಯಕ್ಕೆ ಅರ್ಹರು.
7ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ 10 ತಿಂಗಳ ಅವಧಿಗೆ ಸಂಸ್ಕರಣಾ ಶುಲ್ಕ 60 ಹಾಗೂ ಅಪನಿ ಶುಲ್ಕ 20 ಸೇರಿದಂತೆ ಪಾಸ್ ಒಟ್ಟು ಮೊತ್ತ 80 ಆಗಿರುತ್ತದೆ. ಹೈಸ್ಕೂಲ್ ವಿದ್ಯಾರ್ಥಿಗಳಿಗೆ 10 ತಿಂಗಳ ಅವಧಿಗೆ 680, 5 ತಿಂಗಳ ಅವಧಿಗೆ 370 ಪಾಸ್ ಶುಲ್ಕ ಆಗಿದ್ದು, ಹೈಸ್ಕೂಲ್ ವಿದ್ಯಾರ್ಥಿನಿಯರಿಗೆ 10 ತಿಂಗಳ ಅವಧಿಗೆ 480 ಮತ್ತು 5 ತಿಂಗಳ ಅವಧಿಗೆ ಪಾಸ್ ಶುಲ್ಕ ರು. 270 ಆಗಿರುತ್ತದೆ.  ಕಾಲೇಜು, ಡಿಪ್ಲೋಮೋ ವಿದ್ಯಾರ್ಥಿಗಳಿಗೆ 10 ತಿಂಗಳ ಅವಧಿಗೆ 980 ಮತ್ತು 5 ತಿಂಗಳ ಅವಧಿಗೆ 520 ಆಗಿರುತ್ತದೆ. ಐ.ಟಿ.ಐ. ವಿದ್ಯಾರ್ಥಿಗಳಿಗೆ 12 ತಿಂಗಳ ಅವಧಿಗೆ 1234 ಮತ್ತು 6 ತಿಂಗಳ ಅವಧಿಗೆ 647 ಆಗಿರುತ್ತದೆ.

6ನೇ ತರಗತಿ ವಿದ್ಯಾರ್ಥಿ ನಾಪತ್ತೆ
ಶ್ರೀರಂಗಪಟ್ಟಣ: ಪಟ್ಟಣನದ ಕಾವೇರಿ ಪ್ರೌಢಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದ ಮಹದೇವು (12) ವಿದ್ಯಾರ್ಥಿ ನಾಪತ್ತೆಯಾಗಿರುವುದಾಗಿ ಆತನ ಪೋಷಕರು ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಟ್ಟಣದ ರಂಗನಾಥ ನಗರದ ನಿವಾಸಿಯಾದ ನಾಗರಾಜು ಎಂಬುವರ ಮೊಮ್ಮಗ ಮಹದೇವು(12) ಕಳೆದ ಜೂ.8 ರಂದು ಕಂಪ್ಯೂಟರ್ ಗೇಮ್ ಆಡಲು ಮನೆಯಿಂದ ಹೊರ ಹೋದವನು ಇದುವರೆಗೂ ವಾಪಸ್ ಬಂದಿಲ್ಲ. ದುಂಡು ಮುಖ, ಗೋಧಿ ಮೈ ಬಣ್ಣ, ಎರಡು ಕೈಗಳ ಮೇಲೆ ಕತ್ತಿ ಹಾಗೂ ಕುದುರೆಯ ಅಚ್ಚೆ ಇದೆ. ಮೇಲಿನ ಚಹರೆಯುಳ್ಳ ಬಾಲಕ ಕಂಡು ಬಂದಲ್ಲಿ  ಹತ್ತಿರದ ಠಾಣೆ, ಜಿಲ್ಲಾ ಕಂಟ್ರೋಲ್ ರೊಂಗೆ ಮಾಹಿತಿ ನೀಡುವಂತೆ ಪಟ್ಟಣ ಪೊಲೀಸರು ತಿಳಿಸಿದ್ದಾರೆ.

ದಲಿತರಿಗೆ ನ್ಯಾಯ ಸಿಕ್ಕಿಲ್ಲ
ಶಿರಾ: ಈ ದೇಶದ ಮೂಲ ನಿವಾಸಿಗಳಾಗಿ ಸಿಂಧೂ ನಾಗರಿಕತೆಯ ಮೊಮ್ಮಕ್ಕಳಾಗಿರುವ ನಮಗೆ 21ನೇ ಶತಮಾನ ಕಳೆದರೂ ದಲಿತರಿಗೆ ಇನ್ನೂ ಸಾಮಾಜಿಕ ಸಮಾನತೆ ನ್ಯಾಯ ದೊರಕದಿರುವುದು ವಿಷಾದನೀಯ ಸಂಗತಿ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ(ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಸಂಚಾಲಕ ವೆಂಕಟಗಿರಿಯಯ್ಯ ಹೇಳಿದರು. ಶಿರಾ ನಗರದ ಕೋಟೆ ಕೆರೆಹಿಂದಲಹಟ್ಟಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ನಗರ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಅವ್ವ ಸಂಸ್ಕೃತಿ ದಲಿತರದ್ದು. ಅವ್ವ ಸಂಸ್ಕೃತಿ ಎಂದರೆ ಸಮಾನವಾಗಿ ಹಂಚಿಕೊಂಡು ಬದುಕುವ ಸಂಸ್ಕೃತಿಯಾಗಿದೆ. ಆದರೆ ಇಷ್ಟು ವರ್ಷ ಸಮಾಜದ, ದೇಶದ ಸೇವೆ ಮಾಡುತ್ತಿರುವ ನಮಗೆ ಇನ್ನೂ ಸಮಾಜ ನಮ್ಮನ್ನು ನೀವು ನಮ್ಮಂತೆಯೇ ಎಂದು ಹಂಚಿಕೊಂಡು ಬಾಳುತ್ತಿಲ್ಲ ಎಂದು ಪ್ರಶ್ನಿಸಿದರು. ರಾಜ್ಯ ದಲಿತ ಮುಖಂಡ ಜೆ.ಎನ್.ರಾಜಸಿಂಹ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ದಸಂಸ ಸಂಚಾಲಕ ಟೈರ್ ರಂಗನಾಥ್ ವಹಿಸಿದ್ದರು. ಸರಿತಾ ರವಿಕುಮಾರ್, ಬೆಲ್ಲದಮಡು ಭರತ್‌ಕುಮಾರ್, ತಿಪ್ಪೇಸ್ವಾಮಿ, ಶೀಬಿ ರಂಗಯ್ಯ, ಕೆ.ಮಂಜುನಾಥ್, ರಾಜು, ಸುರೇಶ್ ಮತ್ತಿತರರು ಹಾಜರಿದ್ದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
ಕೊರಟಗೆರೆ: ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಕೊರಟಗೆರೆ ತಾಲೂಕಿನ ರಾಜ್ಯ ಮತ್ತು ಸಿಬಿಎಎಸ್‌ಇ ಪಠ್ಯದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸಿದ್ದರಬೆಟ್ಟದ ಬಾಳೇಹೊನ್ನೂರು ಖಾಸಾ ಶಾಖಾ ಮಠದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಠದ ಪೀಠಾಧ್ಯಕ್ಷ ವೀರಭದ್ರಶಿವಾಚಾರ್ಯಸ್ವಾಮೀಜಿ, ನಿವೃತ್ತ ಡಿಡಿಪಿಐ ಆಂಜನಪ್ಪ, ಬಿಇಒ ಐ.ಎಸ್. ಮಹೇಶ್ ಇದ್ದರು.

ಅಭಿನಂದನೆ
ಮಳವಳ್ಳಿ: ತಾಲೂಕಿನ ಶಿವನ ಸಮುದ್ರ (ಬ್ಲಪ್) ಎಪಿಸಿ ಎಂಪ್ಲಾಯಿಸ್ ಯೂನಿಯನ್ ನೂತನ ನಿರ್ದೇಶಕರಾಗಿ ಆಯ್ಕೆಯಾದ ಪನ್ನಿರ್ ಸ್ವೆಂ ಮತ್ತು ಕೃಷ್ಣೇಗೌಡರನ್ನು ಮಾಜಿ ನಿರ್ದೇಶಕ ಎಸ್.ಸಿದ್ದೇಗೌಡ ಹಾಗೂ
ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.