ಬಹುಮುಖಿ ಪರಮೇಶ್ವರ ಭಟ್ಟ
ತುಮಕೂರು: ಬಹುಮುಖ ವ್ಯಕ್ತಿತ್ವದ ಸಾಹಿತ್ಯ ದಿಗ್ಗಜ ಎಸ್.ವಿ. ಪರಮೇಶ್ವರ ಭಟ್ಟರು ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದರು ಎಂದು ಹಿರಿಯ ಸಾಹಿತಿ ಡಾ. ರಾ. ಲಕ್ಷ್ಮೀನಾರಾಯಣ ಬಣ್ಣಿಸಿದರು.
ತುಮಕೂರಿನ ನಗೆಮುಗುಳು ಹಾಸ್ಯ ಮಾಸಪತ್ರಿಕೆ ಮತ್ತು ಪೂರ್ಣಿಮ ಸಾಹಿತ್ಯ ಮಂದಿರ ಪುಸ್ತಕ ಪ್ರಕಾಶನ ಸಂಸ್ಥೆ ಆಶ್ರಯದಲ್ಲಿ ನಡೆದ ಮಾಸಿಕ ಅಧ್ಯಯನ ಗೋಷ್ಠಿಯ 55ನೇ ಕಾರ್ಯಕ್ರಮದ ಅಂಗವಾಗಿ ಎಸ್.ವಿ.ಪರಮೇಶ್ವರ ಭಟ್ಟರ ಜನ್ಮಶತಮಾನೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರನ್ನು ತಮ್ಮ ಕಾವ್ಯಗುರುವನ್ನಾಗಿ ಸ್ವೀಕರಿಸಿದ ಭಟ್ಟರು ಆಂಗ್ಲ ಸಾಹಿತಿ ಮೈಕೇಲ್‌ನ ಸಾಹಿತ್ಯವನ್ನು ಕನ್ನಡದ ವಾತಾವರಣಕ್ಕೆ ತಕ್ಕಂತೆ ರೂಪಾಂತರ ಮಾಡಿದರು ಎಂದರು.
ಕಾಳಿದಾಸನ ಮೇಘದೂತ, ಋತುಸಂಹಾರ ಮುಂತಾದ ಕೃತಿಗಳನ್ನು ಸಂಪಾದಿಸಿ, ಅನುವಾದಿಸಿ ಕಾಳಿದಾಸ ಸಂಪುಟವನ್ನು ಪರಮೇಶ್ವರ ಭಟ್ಟರು ಹೊರತಂದರು. ಬುದ್ಧಚರಿತೆ, ಭಾಸ ಸಂಪುಟವನ್ನು ಸಹ ಅತ್ಯಂತ ಶ್ರಮವಹಿಸಿ ಕನ್ನಡದಲ್ಲಿ ಹೊರತಂದರು. ಅಷ್ಟೇ ಅಲ್ಲದೆ ಕುವೆಂಪುರವರ ಎಲ್ಲಾ ಸಾಹಿತ್ಯವನ್ನು 5 ಸಂಪುಟಗಳಲ್ಲಿ ಹೊರತಂದು ಸಾರಸ್ವತ ಲೋಕದ ಮೆಚ್ಚುಗೆ ಗಳಿಸಿದರು ಎಂದರು.
ಹಿರಿಯ ಸಹಕಾರಿ ಆರ್. ಕಾಮರಾಜ್, ಮಾತನಾಡಿ, ಅಧ್ಯಯನಶೀಲತೆಯನ್ನು ಮರೆಯುತ್ತಿರುವ ಯುವಜನತೆಗೆ ಇಂತಹ ವಿಶಿಷ್ಟ ಕಾರ್ಯಕ್ರಮಗಳು ಅತ್ಯಗತ್ಯವಾಗಬೇಕಾಗಿದೆ ಎಂದರು.
ಎಚ್.ಎಸ್.ರಾಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾವಾಲಯ ಗಾಯನ ತಂಡದ ಮುಖ್ಯಸ್ಥೆ ರೂಪಾ ನಾಗೇಂದ್ರ ಮತ್ತು ಸಂಗಡಿಗರು ಎಸ್.ವಿ. ಪರಮೇಶ್ವರ ಭಟ್ಟರ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಉಪನ್ಯಾಸ ನೀಡಿದ ಡಾ. ರಾ.ಲಕ್ಷ್ಮೀನಾರಾಯಣ ಮತ್ತು ಆರ್. ಕಾಮರಾಜ್ ಅವರನ್ನು ಕಾರ್ಯಕ್ರಮದ ಆಯೋಜಕ ಎಚ್.ಎಸ್. ರಾಮಣ್ಣ ಮತ್ತು ಎಚ್.ಎಸ್. ಸಾವಿತ್ರಿ ರಾಮಣ್ಣ ದಂಪತಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ಪ್ರೊ.ಸಿ.ಎಚ್. ಮರಿದೇವರು, ಡಾ.ಎಸ್.ಪಿ. ಪದ್ಮಪ್ರಸಾದ್, ಅಬ್ಬಿನಹೊಳೆ ಸುರೇಶ್, ಜಿ.ವಿ.ವಿ.ಶಾಸ್ತ್ರಿ, ಪ್ರೊ.ಕೆ.ಎಸ್. ವೆಂಕಟೇಶ್, ಮಿಮಿಕ್ರಿ ಈಶ್ವರಯ್ಯ, ಎಚ್.ಎಸ್. ಸಾವಿತ್ರಿ ರಾಮಣ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

