ಕೊರಟಗೆರೆಯಲ್ಲೂ ಕಸದ ಹೊರೆ
ಜಿ.ಎಲ್. ಸುರೇಶ್
ಕೊರಟಗೆರೆ: ಹಿಂದೊಮ್ಮೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಪ್ರತಿನಿಧಿಸಿದ್ದ ಕೊರಟಗೆರೆ ಕ್ಷೇತ್ರವೂ ಕಸ ವಿಲೇವಾರಿಯಲ್ಲಿ ಯಶಸ್ಸು ಸಾಧಿಸಿಲ್ಲ. ಘನತ್ಯಾಜ್ಯ ವಿಲೇವಾರಿಯಲ್ಲಿ ಕೊರಟಗೆರೆ ತಾಲೂಕು ಸಹ ವೈಫಲ್ಯ ಕಂಡಿದೆ. 14 ವಾರ್ಡ್ಗಳಿಂದ ಕೂಡಿದ್ದು, 15,245 ಜನಸಂಖ್ಯೆ ಹೊಂದಿದೆ. ಪ್ರತಿ ದಿನ ತ್ಯಾಜ್ಯ ವಿಲೇವಾರಿ ಮಾಡುವಲ್ಲಿ ಆಡಳಿತ ಯಂತ್ರ ಸಂಪೂರ್ಣ ವಿಫಲವಾಗಿದೆ.
14 ವಾರ್ಡ್ಗಳಲ್ಲಿಯೂ ಪ್ರತಿ ವಾರ್ಡ್ನ ಮುಖ್ಯ ರಸ್ತೆಯಲ್ಲಿಯೇ ಕಸದ ರಾಶಿ ಎದ್ದು ಕಾಣುತ್ತಿದೆ. ಶಾಲಾ-ಕಾಲೇಜುಗಳು, ದೇವಾಲಯಗಳ ಬಳಿ, ಬ್ಯಾಂಕ್ಗಳ ಸಮೀಪ, ಸರ್ಕಾರಿ ಕಚೇರಿಗಳ ಮುಂಭಾಗ, ಮಸೀದಿ ಮಂಭಾಗ, ಸರ್ಕಾರಿ ಆಸ್ಪತ್ರೆ ಸೇರಿದಂತೆ ಎಲ್ಲೆಡೆ ಪ್ರತಿದಿನ ಕಸ ವಿಲೇವಾರಿ ಸಮಸ್ಯೆ ಕಾಡುತ್ತಿದೆ. ವಾರ್ಡ್ನ ಮುಖ್ಯ ರಸ್ತೆಯಲ್ಲಿಯೇ ಕಸದ ರಾಶಿ ಕಣ್ಣಿಗೆ ರಾಚುತ್ತಿದ್ದು, ಪಟ್ಟಣದ ಪ್ರತಿ ವಾರ್ಡ್ನ ಗಲ್ಲಿಗಳಲ್ಲಿ ಕಸದ ರಾಶಿ ಕಂಗೊಳಿಸುತ್ತಿದೆ.
ಪ್ರತಿ ದಿನ ಪಟ್ಟಣದಲ್ಲಿ 6 ಟನ್ ಕಸ ಉತ್ಪಾದನೆಯಾಗುತ್ತಿದ್ದು, 4 ಟನ್ಗಳಷ್ಟು ಕಸವನ್ನು ಪ್ರತಿ ದಿನ ವಿಲೇವಾರಿ ಮಾಡಲಾಗುತ್ತಿದೆ. ಉಳಿಕೆ 2 ಟನ್ ಕಸ ವಿಲೇವಾರಿ ಮಾಡಲು ಸಿಬ್ಬಂದಿ ಮತ್ತು ಕಸ ವಿಲೇವಾರಿ ಮಾಡುವ ವಾಹನದ(ಟ್ರಾಕ್ಟರ್) ಕೊರತೆಯಿದೆ. 6 ಟನ್ ಕಸ ವಿಲೇವಾರಿ ಮಾಡಲು ಕನಿಷ್ಠ 14 ವಾರ್ಡ್ಗಳಿಂದ 14 ಜನ ಸಿಬ್ಬಂದಿಯಲ್ಲಿ ಕೇವಲ 5 ಜನ ಕಾಯಂ ಕೆಲಸಗಾರರಿದ್ದಾರೆ. ಇದರಲ್ಲೂ ಒಬ್ಬ ಕೆಲಸಗಾರ ಕಾಯಿಲೆಯಿಂದ ನರಳುತ್ತಿದ್ದು ಕೇವಲ 4 ಜನ ಸಿಬ್ಬಂದಿ ಜೊತೆ ಪ್ರತಿ ದಿನ ಪ್ರತಿ 14 ವಾರ್ಡ್ನಲ್ಲೂ ಕಸದ ರಾಶಿ ವಿಲೇವಾರಿ ಮಾಡಲು ಮತ್ತು ಎರಡು ವಾಹನ(ಟ್ರಾಕ್ಟರ್)ದ ಅವಶ್ಯಕತೆಯಿದೆ. ಆದರೆ ಕೇವಲ ಒಂದು ವಾಹನ(ಟ್ರಾಕ್ಟರ್)ವಿದ್ದು ಕಸ ವಲೇವಾರಿ ಮಾಡಲು ತೊಂದರೆಯಾಗಿದೆ ಎನ್ನುತ್ತಾರೆ ಪಪಂ ಆರೋಗ್ಯ ನಿರೀಕ್ಷಕ ಆರ್. ಲಕ್ಷ್ಮಿನರಸಿಂಹಯ್ಯ.
ಸರ್ಕಾರದಿಂದ ಬೋಡಬಂಡೇನಹಳ್ಳಿ ರಸ್ತೆಯಲ್ಲಿ 3.3 ಎಕರೆ ಜಮೀನನ್ನು ಕಸ ತುಂಬಲು ಸ್ಥಳವಿದೆ. ಈ ಸಮಸ್ಯೆಯ ಬಗ್ಗೆ ಪಪಂ ಮುಖ್ಯಾಧಿಕಾರಿ ಮತ್ತು ಪಪಂ ಅಧ್ಯಕ್ಷರನ್ನೊಳಗೊಂಡ ಎಲ್ಲ ಸದಸ್ಯರ ಗಮನಕ್ಕೆ ತಂದಿದ್ದರು ನಮಗೆ ಇದುವರೆಗೆ 10 ಜನರನ್ನು ಹೆಚ್ಚುವರಿ ಸಿಬ್ಬಂದಿಯಾಗಲಿ, ಒಂದು ವಾಹನ ಹೆಚ್ಚಾಗಿ ನೀಡದಿರುವುದರಿಂದ ಕಸ ವಿಲೇವಾರಿಗೆ ತೊಂದರೆ ಉಂಟಾಗುತ್ತಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

