ಪ್ರಾಣ ಬೆದರಿಕೆ: ಆರೋಪ
ಪಾವಗಡ: ಆರ್ಟಿಐ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರು ಪ್ರಾಣ ಬೆದರಿಕೆ ಹಾಕಿದ್ದಾರೆಂದು ಮುಖಂಡ ಸಾರವಾಟಪುರ ಹನುಮಪ್ಪ ತಿಳಿಸಿದ್ದಾರೆ.
ಅವರು ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ 2010-11ನೇ ಸಾಲಿನ ಖಾತ್ರಿ ಯೋಜನೆಗೆ ಸಂಬಂಧಿಸಿದಂತೆ ನಾಗರಾಜ್ ಎಂಬುವರು ತಾ.ಬೂದಿಬೆಟ್ಟ ಗ್ರಾಪಂನಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂದು ಮಾಹಿತಿ ಹಕ್ಕಿನಲ್ಲಿ ಮಾಹಿತಿ ಪಡೆದು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಪರಿಣಾಮ ತಾಲೂಕಿನ ಎಲ್ಲಾ ಗ್ರಾಪಂಗಳ ಕಾಮಗಾರಿಗಳ ಪರಿಶೀಲನೆಗೆ ಜಿಪಂ ಸಿಇಒ ಆದೇಶ ಜಾರಿ ಮಾಡಿ ಕೂಲಿಕಾರರಿಂದ ನಿರ್ವಹಿಸಿದ್ದ ಗುಣಮಟ್ಟದ ಕಾಮಗಾರಿಗಳ ಹಣ ತಡೆಹಿಡಿದಿದ್ದರು. ಬಂಡವಾಳ ಹಾಕಿ ನಿರ್ವಹಣೆ ಮಾಡಿದ ಕಾಮಗಾರಿಗಳ ಹಣ 2ವರ್ಷ ಕಳೆದರೂ ಬಿಡುಗಡೆ ಆಗಿಲ್ಲದ ಕಾರಣ ಕೂಲಿಕಾರರು ಬೀದಿ ಪಾಲಾಗಿ ಜೀವನೋಪಾಯಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದರು. ಕಳೆದ 2ದಿನಗಳ ಹಿಂದೆ ಮಾಹಿತಿ ಹಕ್ಕಿನ ಅಡಿಯಲ್ಲಿ ನಾಗರಾಜ್ ಇಲ್ಲಿನ ಜಿಪಂಗೆ ಆಗಮಿಸಿ ಜಿಪಂನ ಎಇಇ ಅವರಿಂದ ಮಾಹಿತಿ ಪಡೆಯುತ್ತಿರುವ ಸಂದರ್ಭದಲ್ಲಿ ನಾಗರಾಜ್ ಆಗಮನ ವಿಷಯ ತಿಳಿದ ಕೂಲಿಕಾರರು ಜಿಪಂಗೆ ಆಗಮಿಸಿ ಅವರನ್ನು ಪ್ರಶ್ನಿಸುತ್ತಿದ್ದ ವೇಳೆಯಲ್ಲಿ ಕೂಲಿಕಾರರು ಮತ್ತು ನಾಗರಾಜ್ ಮಧ್ಯೆ ಮಾತಿನ ಚಕಮಕಿ ನಡೆದು ನಾಗರಾಜ್ ವಿರುದ್ಧ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೌರ್ಜನ್ಯ ಹಾಗೂ ಪ್ರಾಣ ಬೆದರಿಕೆಗೆ ಸಂಬಂಧಿಸಿದಂತೆ ತಾ.ಯ.ನಾ.ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿರುವುದಾಗಿ ತಿಳಿಸಿದರು.
ಪಾವಗಡಕ್ಕೆ ಜಿಪಂ ಅಧ್ಯಕ್ಷೆ ಸಾಕಮ್ಮ ಭೇಟಿ: ಪರಿಶೀಲನೆ
ಪಾವಗಡ: ಸೋಮವಾರ ಪಾವಗಡಕ್ಕೆ ಜಿಲ್ಲಾ ಪಂಚಾತಿಯಿತಿ ಅಧ್ಯಕ್ಷೆ ಸಾಕಮ್ಮ ನಾಗರಾಜು ಭೇಟಿ ಕೊಟ್ಟು ವಿವಿಧ ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸಿದರು.
ತಾಪಂನಲ್ಲಿ ವಿವಿಧ ಯೋಜನೆಗಳ ಪ್ರಗತಿಯ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಪಂ ಸದಸ್ಯರೊಡನೆ ಚರ್ಚಿಸುವ ಸಲುವಾಗಿ ತಾವು ಭೇಟಿ ಕೊಟ್ಟಿರುವುದಾಗಿ ತಿಳಿಸಿದರು.ಯೋಜನೆಗಳನ್ನು ತ್ವರಿತ ಗತಿಯಲ್ಲಿ ನಡೆಸಲು ಸೂಚಿಸಿದ್ದು ಪ್ರಗತಿ ವಿಳಂಬದ ಬಗ್ಗೆ ಅಧಿಕಾರಿಗಳಿಗೆ ಈಗಾಗಲೇ ಎಚ್ಚರಿಸಲಾಗಿದೆ ಎಂದರು. ತಾ.ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಇಲಾಖೆ ಎಸ್ಸಿ, ಎಸ್ಟಿ ಹಾಗೂ ಬಿಸಿಎಂ ಸಹಾಯ ಧನದ ಸೌಲಭ್ಯ ಸೇರಿದಂತೆ ಹಾಸ್ಟೆಲ್ಗಳ ನಿರ್ವಹಣೆ ಕುರಿತು ಸಾರ್ವಜನಿಕರ ದೂರುಗಳಿದ್ದು ಇಲಾಖೆಗಳಿಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ಅವರು ತಿಳಿಸಿದರು.ಇದೇ ಸಂದರ್ಭದಲ್ಲಿ ಜಿಪಂ ಎಇಇ ಅಶೋಕರೆಡ್ಡಿ ಇತರೆ ಅಧಿಕಾರಿ ವರ್ಗದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

