ತುಮಕೂರು

'ಜಿಎಸ್‌ಬಿಯವರ ಸಾಧನೆ ಶೂನ್ಯ'

Published On :

ತುರುವೇಕೆರೆ: ಜಿಲ್ಲಾ ಬಿಜೆಪಿಯ ಸಂಸದ ಜಿ. ಎಸ್. ಬಸವರಾಜು ಅವರ ಸಾಧನೆ ಸಂಪೂರ್ಣ ಶೂನ್ಯ. ಅವರು ಕಳೆದ ನಾಲ್ಕು ಬಾರಿ ಸಂಸದರಾಗಿದ್ದಾರೆ. ಅವರು ಜಿಲ್ಲೆಗೆ ಯಾವ ಗುರುತರವಾದ ಯೋಜನೆ ತಂದಿದ್ದಾರೆ ಹೇಳಿ  ಎಂದು  ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಪ್ರಶ್ನಿಸಿದರು.
ಪಟ್ಟಣದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭಾರತ್ ನಿರ್ಮಾಣ್ ಯಾತ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಜಿ. ಎಸ್. ಬಸವರಾಜು  ಕೇವಲ ಜಾತಿಯ ಆರಾಧಕರು. ಕ್ಷಣಕ್ಕೊಂದು ತೀರ್ಮಾನ, ಕ್ಷಣಕ್ಕೊಂದು ನಿರ್ಧಾರ ಕೈಗೊಳ್ಳುವ ಮನುಷ್ಯ. ತಾಲೂಕಿನಲ್ಲಿ ಎಷ್ಟು ಬಾರಿ ಭೇಟಿ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ್ದೀರಾ ಎಂದರು.
ಕಾಂಗ್ರೆಸ್ ದಿಗ್ಗಜರಾದ ಮನಮೋಹನ್ ಸಿಂಗ್, ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿಯವರ ನಾಯಕತ್ವ ಹಾಗೂ ದೂರದೃಷ್ಟಿಯಿಂದ ದೇಶದ ಜನರು ಇಂದು ಉತ್ತಮವಾದ ಜೀವನವನ್ನು  ಮಾಡುವಂತಾಗಿದೆ. ಕಾಂಗ್ರೆಸ್ 10 ವರ್ಷಗಳ ಸಾಧನೆ ಅನನ್ಯ. ಬಡಜನರಿಗೆ ವರದಾನವಾಗಿರುವ ಆಹಾರ ಭದ್ರತೆ ಕಾಯ್ದೆ. 1 ರು. ಗೆ 1 ಕೆ ಜೆ ಅಕ್ಕಿ ನೀಡುವಂತಹ ಕಾರ್ಯಕ್ರಮದಿಂದಾಗಿ ಬಡ ಜನರು ಇಂದು ಎರಡು ಹೊತ್ತು ನೆಮ್ಮದಿಯಿಂದ ಹೊಟ್ಟೆ ತುಂಬಿಸಿಕೊಳ್ಳುವಂತಾಗಿದೆ ಎಂದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.