26 ಚೆಕ್‌ಪೋಸ್ಟ್ ನಿರ್ಮಾಣ
ತುಮಕೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 26 ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಗಡಿ ಭಾಗಗಳಲ್ಲಿ ಒಟ್ಟು 8 ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ನಾಲ್ಕು ಜನರ ತಂಡ ಚುನಾವಣೆ ಮುಗಿಯುವವರೆಗೂ ಕಾಯಂ ಆಗಿ ಚೆಕ್ ಪೋಸ್ಟ್‌ನಲ್ಲೇ ಕಾರ್ಯನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಸತ್ಯಮೂರ್ತಿ ಮಾಹಿತಿ ನೀಡಿದರು.
ಎಲ್ಲೆಲ್ಲಿ ಚೆಕ್ ಪೋಸ್ಟ್?: ತುಮಕೂರು ನಗರ- ಜಾಸ್ ಟೋಲ್ ಗೇಟ್, ಗ್ರಾಮಾಂತರ- ವೈ.ಕೆ.ಆರ್. ಸರ್ಕಲ್, ಊರ್ಡಿಗೆರೆ ಸರ್ಕಲ್, ಹೊನ್ನುಡಿಕೆ, ಗುಬ್ಬಿ- ಅಂಕಸಂದ್ರ, ಕುಣಿಗಲ್- ನಿಡಸಾಲೆ, ಯಡಿಯೂರು ಗಡಿ, ತಿಪಟೂರು- ಕೊನೆಹಳ್ಳಿ, ಗುಂಗರಮಳೆ ಗೇಟ್, ಬನ್ನಿಹಳ್ಳಿ, ತುರುವೇಕೆರೆ- ಜೋಡಘಟ್ಟ, ಚಿಕ್ಕನಾಯಕನಹಳ್ಳಿ- ಶ್ರೀರಾಂಪುರ ಗಡಿ, ಕೆಂಕೆರೆ, ಮಧುಗಿರಿ- ಚಂದ್ರಭಾವಿ, ಕೋಡಗತೂರು, ಬಡವನಹಳ್ಳಿ,
ಶಿರಾ- ಬಾಗೂರು, ಐಆರ್‌ಬಿ ಟೋಲ್ ಗೇಟ್, ಬುಕ್ಕಾಪಟ್ಟಣ ರಸ್ತೆ, ಮದಲೂರು, ಕೊರಟಗೆರೆ- ಕೋಳಾಲ, ಬೈರೇನಹಳ್ಳಿ, ಪಾವಗಡ- ರಾಜವಂತಿ, ನಾಗಲಾಪುರ, ವಿರೂಪಸಂದ್ರ, ಕಡಮಲಕುಂಟೆ.
ಫ್ಲೈಯಿಂಗ್ ಸ್ವ್ಯಾಡ್: ತುಮಕೂರು ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳಲ್ಲಿ ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು ನೇಮಿಸಲಾಗಿದೆ, ಹಣ, ಮದ್ಯ ಸರಬರಾಜು ಬಗ್ಗೆ ಯಾವುದೇ ಮಾಹಿತಿ ಬಂದರೇ ತಕ್ಷಣ ಆ ಜಾಗಕ್ಕೆ ಈ ಫ್ಲೈಯಿಂಗ್ ಸ್ಕ್ವಾಡ್‌ಗಳು ತೆರಳುತ್ತವೆ. ಈ ಸ್ಕ್ವಾಡ್‌ನಲ್ಲಿ ಒಬ್ಬರು ಎಎಸ್ಪಿ, ಇಬ್ಬರು ಪೊಲೀಸ್ ಪೇದೆ, ವಿಡಿಯೋ ಗ್ರಾಫರ್ ಇರುತ್ತಾರೆ.
ಮತಯಂತ್ರ ಪರಿಶೀಲನೆ: ತುಮಕೂರು ಜಿಲ್ಲಾ ಲೋಕಸಭಾ ವ್ಯಾಪ್ತಿಗೆ ಒಟ್ಟು 2990 ಮತ ಯಂತ್ರಗಳು ಬಂದಿದ್ದು ಬೆಂಗಳೂರಿನಿಂದ ಬಂದ ತಾಂತ್ರಿಕ ತಂಡ ಇದನ್ನು ಪರಿಶೀಲಿಸಿ ಸುಸ್ಥಿತಿಯಲ್ಲಿವೆ ಎಂದು ದೃಢೀಕರಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. 3800 ಬ್ಯಾಲೆಟ್ ಯೂನಿಟ್‌ಗಳನ್ನು ಪರಿಶೀಲಿಸಿದ್ದಾರೆ ಎಂದರು.
ಡಮ್ಮಿ ಅಭ್ಯರ್ಥಿ- ಕಾನೂನು ಬಾಹಿರ: ಯಾವುದೇ ಪಕ್ಷೇತರ ಅಭ್ಯರ್ಥಿ ಮತ್ತೊಬ್ಬ ಅಭ್ಯರ್ಥಿಯ ಡಮ್ಮಿ ಅಭ್ಯರ್ಥಿಯಾಗುವುದು ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ ಕಾನೂನು ಬಾಹಿರವಾಗುತ್ತದೆ ಎಂದು ತಿಳಿಸಿದರು.
ಈ ರೀತಿ ಒಬ್ಬ ಅಭ್ಯರ್ಥಿಯು ಮತ್ತೊಬ್ಬ ಅಭ್ಯರ್ಥಿಯ ಪರವಾಗಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಚುನಾವಣಾ ಸಮಯದಲ್ಲಿ ಮತ ಯಾಚಿಸಿದರೆ ಅಂತಹ ಡಮ್ಮಿ ಅಭ್ಯರ್ಥಿಯ ಖರ್ಚನ್ನು ಮೂಲ ಅಭ್ಯರ್ಥಿಗೆ ಸೇರಿಸಲಾಗುವುದು ಎಂದು ತಿಳಿಸಿದರು.
ನಂತರ ಮಾತನಾಡಿದ ಎಸ್ಪಿ ರಮಣಗುಪ್ತ, ಕಳೆದ 3 ಚುನಾವಣೆಯಲ್ಲಿ 104 ಜನರು ವಿವಿಧ ಚುನಾವಣಾ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದು, ಅಂತವರ ಮೇಲೆ ಕಟ್ಟು ನಿಟ್ಟಿನ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.
3 ಪ್ರಕರಣ ದಾಖಲು: ಚುನಾವಣೆ ಸಂಬಂಧ ಈವರೆಗೆ ಜಿಲ್ಲೆಯಲ್ಲಿ 3 ಪ್ರಕರಣ ದಾಖಲಾಗಿದೆ. ಇದರಲ್ಲಿ ತಿಪಟೂರಿನಲ್ಲಿ ಎರಡು ಪ್ರಕರಣ ಮತ್ತು ಗುಬ್ಬಿಯಲ್ಲಿ ಒಂದು ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.
ಮದ್ಯ ವಶ: ಈವರೆಗೆ 219 ದಾಳಿ ನಡೆಸಿದ್ದು 32 ಕೇಸುಗಳನ್ನು ದಾಖಲಿಸಲಾಗಿದೆ. 14 ಆರೋಪಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೆಯೇ ಒಂದು ದ್ವಿಚಕ್ರ ವಾಹನ ಮತ್ತು 1850 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಜಿಪಂ ಸಿಇಓ ಗೋವಿಂದರಾಜು, ಎಎಸ್ಪಿ ಲಕ್ಷ್ಮಣ್, ಹೆಚ್ಚುವರಿ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

