ನಾಳೆ ಕಾರ್ಮಿಕರ ಕಾರ್ಯಕ್ರಮ
ತುಮಕೂರು: ಭಗತ್ಸಿಂಗ್ ರಾಜ್ ಗುರು, ಸುಖ್ದೇವ್ ಅವರ ಹುತಾತ್ಮ ದಿನಾಚರಣೆ ಅಂಗವಾಗಿ ಕಾರ್ಮಿಕ ವರ್ಗದ ಪ್ರಶ್ನೆಗಳು ಒಂದು ಚರ್ಚೆ ಕಾರ್ಯಕ್ರಮವನ್ನು ಮಾ. 23ರಂದು ಮಧ್ಯಾಹ್ನ 2 ಗಂಟೆಗೆ ನಗರದ ರಂಗತಾಲೀಮು ಕೇಂದ್ರದಲ್ಲಿ ಆಯೋಜಿಸಲಾಗಿದೆ.ಕಾರ್ಯಕ್ರಮದ ಉದ್ಘಾಟನೆಯನ್ನು ಸಿಐಟಿಯು ಅಖಿಲ ಭಾರತ ವರ್ಕಿಂಗ್ ಕಮಿಟಿ ಸದಸ್ಯರಾದ ಮೀನಾಕ್ಷಿ ಸುಂದರಂ ನೆರವೇರಿಸುವರು. ಅಧ್ಯಕ್ಷತೆಯನ್ನು ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ವಹಿಸುವರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ರಾಜ್ಯ ಕಾರ್ಯದರ್ಶಿ ಬಿ. ಉಮೇಶ್, ದುಡಿಯುವ ಮಹಿಳೆಯರ ಸಂಚಾಲಕಿ ಜಿ. ಕಮಲ, ಹಮಾಲಿ ಕಾರ್ಮಿಕರ ಸಂಘದ ಗೋವಿಂದರಾಜು, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಗುಲ್ಜಾರ್ ಭಾನು, ಕೆಎಸ್ಆರ್ಟಿಸಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವರಾಜು, ಬೀಡಿ ಕಾರ್ಮಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ನಿಸಾರ್ಅಹಮ್ಮದ್, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಲೋಕೇಶ್ ಡಿಶಾ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.
ಕಾಲಭೈರವೇಶ್ವರ ಸ್ವಾಮಿ ರಥೋತ್ಸವ
ಚಿಕ್ಕನಾಯಕನಹಳ್ಳಿ: ಧಾರ್ಮಿಕ ಪರಂಪರೆಯಲ್ಲಿ ಕಾರಹುಣ್ಣಿಮೆ ಹಬ್ಬದ ಇತಿಹಾಸವನ್ನು ಹೊಂದಿರುವ ಶೆಟ್ಟೀಕೆರೆ ಕಸಬಾ ಶ್ರೀಕಾಲಭೈರವೇಶ್ವರ ಸ್ವಾಮಿ ರಥೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಕ್ತಮಂಡಳಿ ತಿಳಿಸಿದೆ. 23ರಂದು ಭಾನುವಾರ ಬೆಳಿಗ್ಗೆ 8ಗಂಟೆಗೆ ಧ್ವಜಾರೋಹಣ, ವೃಷಭೋತ್ಸವ ಹಾಗೂ ರುದ್ರಾಭಿಷೇಕ ಪೂಜೆ, ಮಹಾಮಂಗಳಾರತಿ, ಬ್ರಾಹ್ಮಣರಿಗೆ ಅನ್ನಸಂತರ್ಪಣೆ ಮುಂತಾದ ಕಾಯಕ್ರಮಗಳು ನಡೆಯಲಿವೆ. ಮಾ.24 ರಂದು ಬೆಳಿಗ್ಗೆ 9 ಗಂಟೆಗೆ ಗಂಗಾಸ್ನಾನ, ಮಧ್ಯಾಹ್ನ 12ಗಂಟೆಗೆ ಬ್ರಹ್ಮರಥೋತ್ಸವ, ಮಾ.25ರಂದು ಅಡ್ಡಪಲ್ಲಕ್ಕಿ ಉತ್ಸವ, ಮಾ.26ರಂದು ವಸಂತೋತ್ಸವ, ಉಯ್ಯಾಲೋತ್ಸವ, ಮಹಾಮಂಗಳಾರತಿ ನಂತರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮಗಳು ಸಮಾಪನಗೊಳ್ಳಲಿದೆ.
ದೇಗುಲ ಬೀಗ ಮುರಿದು ಹಣ ದೋಚಿ ಪರಾರಿ
ಮಧುಗಿರಿ: ಇಲ್ಲಿನ ವರಸಿದ್ಧಿ ವಿನಾಯಕ ದೇವಸ್ಥಾನದ ಬಾಗಿಲು ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಹುಂಡಿ ಒಡೆದು ಅದರಲ್ಲಿದ್ದ 25 ಸಾವಿರಕ್ಕೂ ಅಧಿಕ ಹಣ ದೋಚಿ ಪರಾರಿಯಾಗಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. ಈ ದೇವಸ್ಥಾನದಲ್ಲಿ 2ನೇ ಸಲ ಕಳವು ಪ್ರಕರಣ ನಡೆದಿದ್ದು, ದೇವಸ್ಥಾನದ ಎರಡು ಬಾಗಿಲು ಬೀಗ ಮುರಿದು ಒಳ ನುಗ್ಗಿರುವ ದರೋಡೆ ಕೋರರು ಹುಂಡಿಗೆ ಹಾಕಿದ್ದ ಹಣವನ್ನು ಸುಲಭವಾಗಿ ಒಡೆದು ಸುಮಾರು 25 ಸಾವಿರಕ್ಕೂ ಅಧಿಕ ಹಣ ದೋಚಿ ಪರಾರಿಯಾಗಿದ್ದಾರೆ ಏನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲಿಸಿದರು. ಧಾರ್ಮಿಕ ಮುಖಂಡ ಎಂ.ಜಿ. ಶ್ರೀನಿವಾಸಮೂರ್ತಿ, ಡಾ.ಜಿ.ಕೆ. ಜಯರಾಮ್, ಟಿ.ಸಿ.ಮಂಜುನಾಥ್ ಮತ್ತು ವಕೀಲ ದಯಾನಂದ್ ಮಾತನಾಡಿ ಇಂತಹ ಕಳವು ಪ್ರಕರಣಗಳನ್ನು ಪೊಲೀಸರು ಮಟ್ಟಹಾಕಬೇಕು ಎಂದು ತಿಳಿಸಿದ್ದಾರೆ.
ರು. 4.5 ಲಕ್ಷ ಮೌಲ್ಯದ ಚಿನ್ನ ದೋಚಿ ಪರಾರಿ
ಮಧುಗಿರಿ: ಒಡವೆ ಖರೀದಿಸುವ ನೆಪದಲ್ಲಿ ಬಂದ ಕಳ್ಳ ಗಿರಾಕಿಯೊಬ್ಬ ಮಾಲೀಕನ ಗಮನ ಬೇರೆಡೆ ಸಳೆದು 4.5 ಲಕ್ಷ ರು ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಮಧುಗಿರಿಯಲ್ಲಿ ನಡೆದಿದೆ.
ಪಟ್ಟಣದ ಅಮರ್ ಜ್ಯೂಯೆಲರರ್ಸ್ ಅಂಗಡಿಗೆ 30 ವರ್ಷದ ಅಪರಿಚಿತ ಯುವಕನೊಬ್ಬ ಬಂದಾಗ ಚೈನ್ ತೋರಿಸಿ ಎಂದಾಗ ಮಾಲೀಕ ಚೈನ್ ತೋರಿಸಿದ್ದಾರೆ. ಆಗ ಕೊಳ್ಳುವ ನೆಪದಲ್ಲಿ ಮಾಲೀಕನ ಗಮನ ಬೇರೆಡೆ ಸೆಳೆದು 174 ಗ್ರಾಂ. ತೂಕದ 18 ಚೈನುಗಳನ್ನು ಕದ್ದು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

