ತುಮಕೂರು

ಬಿಜೆಪಿಗೆ ಮರಳಿ ಬನ್ನಿ

Published On :

ಪಿರಿಯಾಪಟ್ಟಣ: ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಎಚ್.ಡಿ. ಗಣೇಶ್ ಅವರ ಮನೆಗೆ ಬುಧವಾರ ರಾತ್ರಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಭೇಟಿ ನೀಡಿ, ಪಕ್ಷಕ್ಕೆ ಮರಳುವಂತೆ ಹಾಗೂ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಈ ಹಿಂದೆ ಬಿಜೆಪಿಯಲ್ಲಿದ್ದು, ನಂತರದ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಕೆಪಿಸಿಸಿ ಸದಸ್ಯರಾಗಿ ನಂತರದ ರಾಜಕೀಯ ಬೆಳವಣಿಗೆಗಳಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಎಚ್.ಡಿ. ಗಣೇಶ್ ಮನೆಗೆ ಮಾಜಿ ಶಾಸಕ ಮೇದಪ್ಪ, ಮೈಲ್ಯಾಕ್ ಮಾಜಿ ಅಧ್ಯಕ್ಷ ಮೈ.ವಿ. ರವಿಶಂಕರ್ರೊಡನೆ ಭೇಟಿ ನೀಡಿ ಅರ್ಧಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸಿದ ಅವರು, ಮತ್ತೆ ಬಿಜೆಪಿಗೆ ಮರಳುವಂತೆ ಹಾಗೂ ತಾಲೂಕಿನಲ್ಲಿ ಪಕ್ಷದ ಸಂಘಟನೆ ಕೈಗೆತ್ತಿಕೊಂಡು ತಮ್ಮ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು.
ತಮ್ಮನ್ನು ಪಕ್ಷದಲ್ಲಿ ಕೆಲವರು ಮೂಲೆಗುಂಪು ಮಾಡಿದ ಹಿನ್ನೆಲೆ ತಾವು ಪಕ್ಷ ಬಿಡಬೇಕಾಯಿತು. ಈಗಲೂ ನನಗೆ ಪಕ್ಷದ ಬಗ್ಗೆ ಪ್ರೀತಿ ಇದ್ದು, ನಂತರದ ದಿನಗಳಲ್ಲಿ ಪಕ್ಷಕ್ಕೆ ಸೇರುವ ಬಗ್ಗೆ ಯೋಚಿಸುವುದಾಗಿ ಗಣೇಶ್ ಭರವಸೆ ನೀಡಿದ್ದಾರೆ. ಎಚ್.ಡಿ. ಗಣೇಶ್ ಅವರಿಗೆ ಪಕ್ಷದಲ್ಲಿ ಹಿಂದಿನಿಂದಲೂ ಕೆಲವರಿಂದ ಅನ್ಯಾಯವಾಗುತ್ತಲೇ ಬಂದಿದ್ದು, ಗಣೇಶ್ ಅವರಿಗೆ ಸೂಕ್ತ ಸ್ಥಾನಮಾನ ನೀಡಿ ಸರಿಯಾಗಿ ನಡೆಸಿಕೊಳ್ಳುವುದಾದರೆ ಮಾತ್ರ ಎಚ್.ಡಿ. ಗಣೇಶ್ ಅವರ ನಾಯಕತ್ವದಲ್ಲಿ ಪಕ್ಷ ಸಂಘಟನೆ ಮತ್ತು ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವುದಾಗಿ, ಇಲ್ಲವಾದಲ್ಲಿ ತಾವು ಮೊದಲಿನಂತೆಯೇ ಸುಮ್ಮನಿರುವುದಾಗಿ ಹಿಂದಿನಿಂದಲೂ ಗಣೇಶ್ ಅವರೊಂದಿಗೆ ಗುರುತಿಸಿಕೊಂಡಿರುವ ರಾವಂದೂರು ಮಂಡಲ ಪಂಚಾಯ್ತಿ ಮಾಜಿ ಪ್ರಧಾನ ಆರ್.ಎಲ್. ಮಣಿ ಹೇಳಿದರು. ಇನ್ನು ಬಿಜೆಪಿಯಲ್ಲಿಯೇ ಇದ್ದರೂ ಕಳೆದ ವಿಧಾನಸಭಾ ಚುನಾವಣೆಯಿಂದ ತಟಸ್ಥವಾಗಿ ಉಳಿದಿರುವ ಬಿ.ಎಸ್. ರಾಮಚಂದ್ರು ಸಹ ಎಚ್.ಡಿ. ಗಣೇಶ್ ಅವರು ಬಿಜೆಪಿಗೆ ಮರಳಿದರೆ ಮಾತ್ರ ಅವರ ನಾಯಕತ್ವದಲ್ಲಿ ಪಕ್ಷದ ಸಂಘಟನೆಗೆ ದುಡಿಯುವುದಾಗಿ ಭರವಸೆ ನೀಡಿದರು. ಇದೇ ವೇಳೆ ಸ್ಥಳೀಯ ಪಕ್ಷದ ಮುಖಂಡ ಶಶಿಕುಮಾರ್ ಬಿಟ್ಟರೆ ಮತ್ಯಾವ ಮುಖಂಡರೂ ಇರಲಿಲ್ಲ. ಗಣೇಶ್ ಬೆಂಬಲಿಗ ಸುಂಡವಾಳು ಮಹದೇವ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.