ಅಕ್ರಮ ಮದ್ಯ ಮಾರಾಟ: ದಾಳಿ
ಕೊರಟಗೆರೆ: ಪೆಟ್ಟಿಗೆ ಅಂಗಡಿಯೊಂದರ ಮೇಲೆ ಅಬಕಾರಿ ಮತ್ತು ಲಾಟರಿ ನಿಷೇಧ ದಳ ದಾಳಿ ನಡೆಸಿ, 2348 ಮೌಲ್ಯದ ವಿವಿಧ ಮಾದರಿಯ ಮದ್ಯವನ್ನು ವಶಪಡಿಸಿಕೊಂಡಿದೆ.
ತಾಲೂಕಿನ ಹೊಳವನಹಳ್ಳಿ ಹೋಬಳಿಯ ಸಿರಗೋನಹಳ್ಳಿ ಗ್ರಾಮದ ರಾಜಕುಮಾರ್ ಎಂಬುವರ ಚಿಲ್ಲರೆ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ. ದಾಳಿ ನೇತೃತ್ವವನ್ನು ಮುಖ್ಯ ಪೇದೆ ವಿರೂಪಾಕ್ಷ ಅವರು ವಹಿಸಿದ್ದರು. ವಶ ಪಡಿಸಿಕೊಂಡಿರುವ ಮಾಲುಗಳನ್ನು ಅಧಿಕಾರಿಗಳು ಮೋಟಾರ್ ಬೈಕ್ನಲ್ಲಿ ಕಚೇರಿಗೆ ತರುವ ಮಾರ್ಗ ಕಳ್ಳಿ ಪಾಳ್ಯದ ಬಳಿ ರಸ್ತೆಯಲ್ಲಿ ದ್ವಿಚಕ್ರ ವಾಹನವನ್ನು ಅಡ್ಡಡಗಟ್ಟಿದ ಆರೋಪಿ ರಾಜಕುಮಾರ್ ಮತ್ತು ಇತರರು, ವಶಪಡಿಸಿಕೊಂಡಿರುವ ಮದ್ಯದ ಬಾಟಲ್ಗಳನ್ನು ವಾಪಸ್ ಕೊಡಿ. ಇಲ್ಲದಿದರೆ ನಿಮಗೆ ಒಂದು ಗತಿ ಕಾಣಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಕೊಡಲೇ ದೂರವಾಣಿ ಮೂಲಕ ಮೇಲಾಧಿಕಾರಿಗಳನ್ನು ಸಂಪರ್ಕಿಸಿದಾಗ ಸ್ಥಳಕ್ಕೆ ಹೊಳವನಹಳ್ಳಿ ಪಿಎಸ್ಐ ಗಂಗಾಧರಯ್ಯ, ಮುಖ್ಯ ಪೇದೆ ಸಾಕಪ್ಪ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದಾಗ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಅಬಕಾರಿ ಜಾರಿ ಮತ್ತು ನಿಷೇದ ದಳದ ಮುಖ್ಯಪೇದೆ ವಿರೂಪಾಕ್ಷ ಅವರು ನೀಡಿದ ದೂರಿನ ಮೇರೆಗೆ ಕೊರಟಗೆರೆ ಠಾಣೆಗೆ ಹಾಜರಾಗಿ ನೀಡಿದ್ದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಮುಂದಿನ ಕ್ರಮ ಜರುಗಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

