ಅಂತಿಮ ಕಣದಲ್ಲಿ 16 ಮಂದಿ
ಕ.ಪ್ರ.ವಾರ್ತೆ, ತುಮಕೂರು, ಮಾ.29
ಸಂಯುಕ್ತ ಜನತಾದಳ ಅಭ್ಯರ್ಥಿ ಡಾ.ಇಂತಿಯಾಜ್ ಅಹ್ಮದ್ ಲೋಕಸಭಾ ಚುನಾವಣೆ ಕಣದಿಂದ ಹಿಂದೆ ಸರಿದಿದ್ದು 7 ಮಂದಿ ಪಕ್ಷೇತರರು ನಾಮಪತ್ರ ಹಿಂಪಡೆದಿರುವುದರಿಂದ ಈಗ ಕಣದಲ್ಲಿ 16 ಮಂದಿ ಉಳಿದಿದ್ದಾರೆ.
ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ 24 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ಶನಿವಾರ ಕೊನೆಯ ದಿನವಾಗಿತ್ತು. ಇವರಲ್ಲಿ ಸಂಯುಕ್ತ ಜನತಾದಳದಿಂದ ಸ್ಪರ್ಧಿಸಿದ್ದ ಇಂತಿಯಾಜ್ ಅಹ್ಮದ್, ಪಕ್ಷೇತರರಾಗಿ ಸ್ಪರ್ಧಿಸಿದ್ದ ಜಿ.ಎಸ್.ಬಸವರಾಜು, ಪ್ರಕಾಶ್ ಆರ್.ಎ. ಜೈನ್, ಬಿ. ರಮೇಶ್, ಟಿ.ಬಿ. ಸಿದ್ದರಾಮೇಗೌಡ, ಎಂ.ಕೆ. ವರದರಾಜು, ಜಯರಾಮ್ ಸಹ ಅಖಾಡದಿಂದ ಹಿಂದೆ ಸರಿದಿದ್ದಾರೆ.
ಉಳಿದಂತೆ ಈಗ ಕಣದಲ್ಲಿ 16 ಮಂದಿ ಉಳಿದಿದ್ದು ಅವರ ಹೆಸರು ಈ ಕೆಳಕಂಡಂತಿದೆ.
ಎ.ಕೃಷ್ಣಪ್ಪ, ಜನತಾದಳ (ಜಾತ್ಯತೀತ), ಚಿನ್ನಪ್ಪ ವಿ., ಭಾರತೀಯ ಕಮ್ಯೂನಿಸ್ಟ್ ಪಕ್ಷ, ನಿಲುಫರ್ ಜಮಾನಿ, ಬಹುಜನ ಸಮಾಜಪಕ್ಷ, ಜಿ.ಎಸ್. ಬಸವರಾಜು, ಭಾರತೀಯ ಜನತಾಪಕ್ಷ, ಎಸ್.ಪಿ. ಮುದ್ದಹನುಮೇಗೌಡ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್.
ಎ.ಎಸ್. ಡಿಸಿಲ್ವ, ಆಮ್ ಆದ್ಮಿ ಪಾರ್ಟಿ, ಎಚ್.ಎಲ್. ಮೋಹನ್ ಕುಮಾರ್, ಹಿಂದೂಸ್ಥಾನ್ ಜನತಾ ಪಾರ್ಟಿ, ಬಿ.ವೆಂಕಟೇಶ, ಕರುನಾಡು ಪಾರ್ಟಿ.
ಅನ್ವರ್, ಗೋವಿಂದರಾಜು ಜಿ., ಜಯರಾಮ್, ಜಿ.ನಾಗೇಂದ್ರ, ಬ್ರಹ್ಮಾನಂದರೆಡ್ಡಿ, ಎಲ್.ಪಿ. ಯದುನಂದನ, ಶಿವಕುಮಾರ್, ಎಚ್.ಎನ್. ಶಿವಲಿಂಗಯ್ಯ, ಕೆ.ವಿ. ಶ್ರೀನಿವಾಸ್ ಕಲ್ಕೆರೆ, ಎಸ್.ಬಿ. ಹನುಮಂತ ರಾಯಪ್ಪ ಕಣದಲ್ಲಿದ್ದಾರೆ.
ಈಗಾಗಲೇ ಚುನಾವಣಾ ಪ್ರಚಾರ ಬಿರುಸಿನಿಂದ ಆರಂಭವಾಗಿದೆ. ಕಣದಲ್ಲಿರುವ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯ ಆರಂಭಿಸಿವೆ. ಎಲ್ಲ ಪಕ್ಷಗಳೂ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

