ಯುಗಾದಿಗೆ ಸಕಲ ಸಿದ್ಧತೆ
ಹುಳಿಯಾರು: ಬೇವುಬೆಲ್ಲದ, ನವ ಸಂವತ್ಸರದ ಹಬ್ಬ ಯುಗಾದಿ ಆಚರಣೆಗೆ ಹುಳಿಯಾರು ಹಾಗೂ ಸುತ್ತಮುತ್ತಲಿನ ಜನ ಸಿದ್ಧರಾಗಿದ್ದಾರೆ. ಪಟ್ಟಣದಲ್ಲಿ ಭಾನುವಾರ ನಡೆದ ಸಂತೆಯಲ್ಲಿಗೆ ಧಾವಿಸಿ ಹಬ್ಬಕ್ಕೆ ಹಣ್ಣು, ಹೂ, ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳನ್ನು ಕೊಂಡುತರುವ ಮೂಲಕ ಸಕಲ ಸಿದ್ಧತೆಯಲ್ಲಿ ತೊಡಗಿದ್ದು ಕಂಡುಬಂತು.
ಹಿಂದೂ ಸಂಪ್ರದಾಯದ ನೂತನ ವರ್ಷದ ಆರಂಭವಾಗಿ ಯುಗಾದಿಯ ಆಚರಣೆ ನಡೆದುಕೊಂಡು ಬಂದಿದ್ದು ಕುಟುಂಬದ ಎಲ್ಲಾ ಸದಸ್ಯರು, ಬಂಧು ಬಾಂಧವರು ಒಂದೆಡೆ ಸೇರಿ ತಮ್ಮ ಮನೆದೇವರಿಗೆ ಪೂಜೆ ಸಲ್ಲಿಸುವ ಮೂಲಕ ಹಬ್ಬದ ಆಚರಣೆಯಲ್ಲಿ ತೊಡಗಿಕೊಳ್ಳುತ್ತಾರೆ. ಇಂತಹ ಹಬ್ಬದ ಆಚರಣೆಯ ಮುನ್ನಾದಿನ ಹಬ್ಬಕ್ಕೆ ಬೇಕಾದ ಮಾವಿನ ಸೊಪ್ಪು, ಬೇವಿನ ಹೂ, ಹೊಸಬಟ್ಟೆ ಸೇರಿದಂತೆ ಅನೇಕ ವಸ್ತುಗಳನ್ನು ತರುವಲ್ಲಿ ಜನ ಮುಂದಾಗಿದ್ದರು. ಕಳೆದ ಎರಡು ಮೂರು ವರ್ಷಗಳಿಂದ ಕಾಡುತ್ತಿರುವ ತೀವ್ರ ಬರದ ಕಾರಣ ಪಟ್ಟಣದ ಬಟ್ಟೆ ಅಂಗಡಿ, ದಿನಸಿ ಅಂಗಡಿಗಳಲ್ಲಿ ಬಿರುಸು ಕಂಡುಬರಲಿಲ್ಲ. ಹಬ್ಬದ ಆಚರಣೆಗೆ ನಾನಾ ಭಾಗದಿಂದ ಜನ ಆಗಮಿಸಿದ್ದರಿಂದ ಪಟ್ಟಣದ ಬಸ್ ನಿಲ್ದಾಣ ಜನರಿಂದ ತುಂಬಿತ್ತು. ಯುಗಾದಿ ಹಬ್ಬದ ಮುನ್ನಾದಿನ ಭಾನುವಾರ ಸಂತೆಯಲ್ಲಿ ಹೋಬಳಿಯ ನಾನಾ ಭಾಗದ ರೈತರು ಸೇರಿದಂತೆ ಅನೇಕರು ಆಗಮಿಸಿ ತಮಗೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳಲು ಮುಂದಾಗಿದ್ದರು. ಬೆಲೆ ಏರಿಕೆಯ ನಡುವೆಯೂ ಅಡುಗೆಗೆ ಬೇಕಾದ ಬೆಲ್ಲ, ಬೇಳೆ ಸೇರಿದಂತೆ ಇತರ ದಿನಸಿ ಪದಾರ್ಥಗಳನ್ನು ಕೊಳ್ಳುವಲ್ಲಿ ತೊಡಗಿದ್ದರು.
ಬೆಂಗಳೂರಿನಿಂದ ಹುಳಿಯಾರು ಹಾಗೂ ಹೊಸದುರ್ಗಕ್ಕೆ ಖಾಸಗಿ ಬಸ್‌ಗಳ ಸಂಚಾರಕ್ಕೆ ನಿರ್ಭಂದವಿದ್ದುದರಿಂದ ಬೆಂಗಳೂರಿನಿಂದ ಈ ಭಾಗಕ್ಕೆ ಬರುವ ಜನ ತೊಂದರೆ ಪಡುವಂತಾಗಿತ್ತು. ಹಾಗಿದ್ದೂ ಕೂಡ ಕೆ.ಎಸ್.ಆರ್.ಟಿ.ಸಿ ಕೆಲ ವಿಶೇಷ ಬಸ್‌ಗಳ ಸಂಚಾರ ವ್ಯವಸ್ಥೆ ಮಾಡಿದ್ದು ಜನಕ್ಕೆ ಸ್ವಲ್ಪ ಮಟ್ಟಿಗೆ ಅನುಕೂಲವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

