ಪಿಆರ್‌ಒಗಳಿಗೆ ತರಬೇತಿ
ತುಮಕೂರು: ತುಮಕೂರು ನಗರ ಹಾಗೂ ತುಮಕೂರು ಗ್ರಾಮಾಂತರ ಮಟ್ಟದ 1896 ಮಂದಿ ಪಿಆರ್‌ಒ ಮತ್ತು ಎಪಿಆರ್‌ಒಗಳಿಗೆ ಭಾನುವಾರ ತರಬೇತಿ ನೀಡಲಾಯಿತು.
ಜಿಲ್ಲಾ ಚುನಾವಣಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರ ಮಾರ್ಗದರ್ಶನದಲ್ಲಿ ಸಹಾಯಕ ಚುನಾವಣಾಧಿಕಾರಿ(ಎಸಿ) ಸಿ.ಎಲ್. ಆನಂದ್ ಹಾಗೂ ನೋಡಲ್ ಅಧಿಕಾರಿಗಳಾದ (ತುಮಕೂರು ತಹಸೀಲ್ದಾರ್) ಬಿ.ವಿ.ಮಾರುತಿ ಪ್ರಸನ್ನ ಸೇರಿದಂತೆ ಕೆಲವು ಹಿರಿಯ ಅಧಿಕಾರಿಗಳ ಸಮ್ಮಖದಲ್ಲಿ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ತರಬೇತಿ ನೀಡಲಾಯಿತು.
ಇಲ್ಲಿ ಚುನಾವಣಾ ಸಮಯದಲ್ಲಿ ಸಿಬ್ಬಂದಿಗಳು ಯಾವ ರೀತಿ ವರ್ತಿಸಬೇಕು. ಕೆಲಸ ನಿರ್ವಹಿಸಬೇಕು. ಎಲೆಕ್ಟ್ರಾನಿಕ್ ಮತಯಂತ್ರಗಳ ಬಳಕೆ ಬಗ್ಗೆ ತರಬೇತಿ ನೀಡಲಾಯಿತು. ಇನ್ನು ರ್ಯಾಂಡಮೈಸೇಷನ್ ಬಳಿಕ ಎರಡನೇ ಹಂತದ ತರಬೇತಿ ನೀಡಲಾಗುವುದು ಎಂದು ತುಮಕೂರು ತಹಸೀಲ್ದಾರ್ ಬಿ.ವಿ.ಮಾರುತಿ ಪ್ರಸನ್ನ ತಿಳಿಸಿದರು. ಹಾಲಿ ತುಮಕೂರು ನಗರದಲ್ಲಿ 222 ಮತಗಟ್ಟೆ ಕೇಂದ್ರ, ತುಮಕೂರು ಗ್ರಾಮಾಂತರದಲ್ಲಿ 204 ಮತಗಟ್ಟೆ ಕೇಂದ್ರಗಳಿದ್ದು, ಪ್ರತಿ ಬೂತ್ ಮಟ್ಟದಲ್ಲಿ ನಾಲ್ವರಂತೆ ತರಬೇತಿ ನೀಡಲಾಯಿತು ಎಂದವರು ತಿಳಿಸಿದರು.ಲೋಕಸಭಾ ಚುನಾವಣಾ ನಿಮಿತ್ತ ನಿಯೋಜಿತಗೊಂಡಿರುವ ಅಧಿಕಾರಿಗಳು, ಸಿಬ್ಬಂದಿಗೆ ಅಂಚೆ ಮತಪತ್ರ ಹಾಗೂ ಇ.ಡಿ.ಸಿ. ಸೌಲಭ್ಯವನ್ನು ಕಲ್ಪಿಸುವ ಸಂಬಂಧವೂ ಚರ್ಚಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

