ಜಯಚಂದ್ರ ಹೇಳಿಕೆಗೆ ಖಂಡನೆ
ರೈತವಿರೋಧಿ ಸಚಿವರ ರಾಜಿನಾಮೆಗೆ ಒತ್ತಾಯಿಸಿದ ಮಾಜಿ ಶಾಸಕ
ಕ.ಪ್ರ.ವಾರ್ತೆ ಚಿಕ್ಕನಾಯಕನಹಳ್ಳಿ ಮೇ 8
ಪಶುಸಂಗೋಪನೆ ಮತ್ತು ಕಾನೂನು ಖಾತೆಗಳಂತಹ ಜವಾಬ್ದಾರಿ ಖಾತೆ ಹೊಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರರವರು ಗೋಮಾಳ ಕುರಿತು ಹೆಳಿಕೆ ನೀಡುವಾಗ ಜವಾಬ್ದಾರಿ ಅರಿತು ನೀಡಬೇಕೆಂದು ಮಾಜಿ ಶಾಸಕ ಜೆ.ಸಿ. ಮಾಧುಸ್ವಾಮಿ ಎಚ್ಚರಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಸಹಾಯ ಮಾಡಿದ ನಿಮ್ಮ ಋಣವನ್ನು ಈ ಮೂಲಕ ತೀರಿಸುತ್ತೇನೆ ಎಂದು ಛೇಂಬರ್ ಆಫ್ ಕಾಮರ್ಸ್ ಸಭೆಯಲ್ಲಿ ಹೇಳಿಕೆ ನೀಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಕೆಲವೇ ಮಂದಿ ಕೈಗಾರಿಕೋದ್ಯಮಿಗಳ ಒತ್ತಡಕ್ಕೆ ಮಣಿದು ಜಿಲ್ಲೆಯ 11,000 ಸಾವಿರ ಎಕರೆ ಗೋಮಾಳ ಕಾನೂನಿಗೆ ತಿದ್ದುಪಡಿ ತಂದು ಜಿಲ್ಲಾಧಿಕಾರಿಗಳ ಹಿಡಿತದಿಂದ ಬಿಡಿಸಿ,ನೇರವಾಗಿ ಕೈಗಾರಿಕೆಗಳಿಗೆ ನೀಡುವುದಾಗಿ ಹೇಳಿಕೆ ನೀಡಿರುವುದು ಒಬ್ಬಜವಾಬ್ದಾರಿತನ ಕೋರಿಸುತ್ತದೆ ಎಂದರು.
ಕರ್ನಾಟಕ ಜಾನುವಾರು ಕಾಯ್ದೆ 1989-90ರಲ್ಲಿ ಸರ್ಕಾರ ರಾಜ್ಯದ ಪಶುಸಂಖ್ಯೆಗನುಗುಣವಾಗಿ ಗೋಮಾಳ ಕಾಯ್ದಿರಿಸಿ ಉಳಿದ ಗೋಮಾಳವನ್ನು ಮುಕ್ತಗೊಳಿಸಿತ್ತು. ಆದರೆ ಪ್ರಕರಣ ರಾಜ್ಯ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ಗೋಮಾಳ ಮುಕ್ತಗೊಳಿಸುವ ಪ್ರಕ್ರಿಯೆಗೂ ಮುನ್ನ 3 ಜಾನುವಾರುಗಳಿಗೆ ಒಂದು ಎಕರೆಯಂತೆ ಗೋಮಾಳ ಕಾಯ್ದಿರಿಸಿ ಉಳಿದ ಗೋಮಾಳವನ್ನು ರೈತರಿಗೆ ಮಂಜೂರು ಮಾಡಬಹುದು ಎಂದು ತೀರ್ಪುನೀಡಿದೆ. ಅದರಂತೆ ರಾಜ್ಯದಲ್ಲಿ ಈಗಾಗಲೇ ರೈತರು ಸುಮಾರು 25-30ವರ್ಷಗಳಿಂದ ಗೋಮಾಳಗಳಲ್ಲಿ ತೆಂಗು-ಅಡಕೆ ತೋಟಗಳನ್ನು ಬೆಳೆಸಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಸಚಿವರು ತುಮಕೂರಿನಲ್ಲಿ ನೀಡಿರುವ ಹೇಳಿಕೆ ರೈತರ ಪಾಲಿನ ಮರಣ ಶಾಸನವಾಗಿದೆ. ಈವರೆಗೆ ಕೈಗಾರಿಕೆಗಳಿಗೆ ಕೃಷಿ ಭೂಮಿ ನೀಡಿರುವುದರಿಂದ ಯಾವ ಮತ್ತು ಯಾರಿಗೆ ಲಾಭವಾಗಿದೆ ಎಂಬುದನ್ನು ಸಚಿವರು ಜನತೆಗೆ ತಿಳಿಸಲಿ ಎಂದು ಸವಾಲು ಹಾಕಿದರು.
ಕೈಗಾರಿಕೆಂದು ಪಡೆದ ಭೂಮಿಯಲ್ಲಿ ಕೈಗಾರಿಕೆ ಸ್ಥಪಾಸಿದ ನಾಟಕಮಾಡಿ, ನಂತರ ಕೈಗಾರಿಕೆಯನ್ನು ಮುಚ್ಚಿ ರಿಯಲ್ ಎಸ್ಟೇಟ್ಕುಳಗಳಿಗೆ ಸಾವಿರಾರು ಕೋಟಿಗಳಿಗೆ ಮಾರುವ ದಂಧೆಗೆ ರೈತರ ಭೂಮಿ ಬಿಟ್ಟುಕೊಡುವುದಕ್ಕೆ ಸಚಿವರಿಗೆ ಅಧಿಕಾರ ಕೊಟ್ಟವರು ಯಾರು. ಒಬ್ಬ ರೈತ ಕೇವಲ ಮೂರು ತಿಂಗಳು ಅನುಭವ ಹೊಂದಿದ ಭೂಮಿಯನ್ನು ಸರ್ಕಾರ ಮರಳಿ ಪಡೆಯಬೇಕಾದರೆ ಉತ್ತಮ ಪರಿಹಾರ ನಿಡಬೇಕೆಂಬ ಕಾನೂನಿದ್ದರು ಈರೀತಿ ಹೇಳಿಕೆ ನೀಡಿ ರೈತರಲ್ಲಿ ಭಯ ಹುಟ್ಟಿಸುವ ಸಚಿವರ ವರ್ತನೆಯ ವಿರುದ್ಧ ಹೋರಾಟ ಅನಿವಾರ್ಯವಾಗುತ್ತದೆ. ಕೂಡಲೇ ಅವರು ಹೇಳಿಕೆ ಹಿಂಪಡೆಯದಿದ್ದರೆ, ಮುಂಬರುವ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲೇ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

