ಮರವಂತೆ: ಆಟಿ ಅಮಾವಾಸ್ಯೆ
ಗಂಗೊಳ್ಳಿ: ಮರವಂತೆಯ ನದಿ-ಸಮುದ್ರ ನಡುವಿನ ಪ್ರಕೃತಿ ರಮ್ಯ ತಾಣದಲ್ಲಿ ಮಂಗಳವಾರ ಸಹಸ್ರಾರು ಜನ ನೆರೆದು ಆಟಿ ಅಮಾವಾಸ್ಯೆ ಆಚರಿಸಿದರು.
ಇಲ್ಲಿನ ಪುರಾಣ ಪ್ರಸಿದ್ಧ ವರಾಹ ದೇವಸ್ಥಾನಕ್ಕೆ ಬೆಳಗಿನ ಜಾವ 4 ಗಂಟೆಗೆ ಬರಲಾರಂಭಿಸಿದ ವಿವಿಧೆಡೆಯ ಭಕ್ತರು, ಸಮುದ್ರ ಮತ್ತು ನದಿಯಲ್ಲಿ ಸ್ನಾನ ಮಾಡಿ ಸರತಿಯ ಸಾಲಿನಲ್ಲಿ ನಿಂತು, ದೇವರ ದರ್ಶನ ಪಡೆದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ರಾಮಚಂದ್ರ ಹೆಬ್ಬಾರ್ ಮತ್ತು ಸದಸ್ಯರು, ಅರ್ಚಕ, ಉಪಾದಿವಂತರು, ಸಿಬ್ಬಂದಿ ಮತ್ತು ಸ್ವಯಂಸೇವಕರು ಜನಜಂಗುಳಿಯನ್ನು ನಿಯಂತ್ರಿಸಿ, ದೇವರ ದರ್ಶನ ಮತ್ತು ಹರಿಕೆ ಸಲ್ಲಿಕೆಗೆ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಿದರು.
ಗಂಗೊಳ್ಳಿ ಠಾಣಾಧಿಕಾರಿ ಎ. ಸಂಪತ್ ಕುಮಾರ್, ಕುಂದಾಪುರ ಸಂಚಾರಿ ಠಾಣೆಯ ಎಸ್ಐ ಇಮ್ರಾನ್, ಮಹಿಳಾ ಎಸ್ಐ ಸುಜಾತಾ ನೇತೃತ್ವದ ಸುಮಾರು 50ಕ್ಕೂ ಹೆಚ್ಚಿನ ಪೊಲೀಸ್ ಪಡೆ ಶಿಸ್ತು ಕಾಪಾಡಲು, ನದಿ, ಸಮುದ್ರದಲ್ಲಿ ಅಪಾಯ ತಡೆಯಲು ಮತ್ತು ಹೆದ್ದಾರಿಯಲ್ಲಿ ವಾಹನ ನಿಯಂತ್ರಿಸಲು ಇಡೀ ದಿನ ಶ್ರಮಿಸಿತು.
ಕುಂದಾಪುರ ವೃತ್ತ ನಿರೀಕ್ಷಕ ಮಂಜುನಾಥ ಕವರಿ ಭೇಟಿಯತ್ತು ವ್ಯವಸ್ಥೆಯ ಉಸ್ತುವಾರಿ ನಡೆಸಿದರು.
ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಒಂದೆಡೆ ನೂರಾರು ಜನರ ರಕ್ತ ಪರೀಕ್ಷಿಸಿ, ಸಕ್ಕರೆಯ ಪ್ರಮಾಣ ತಿಳಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಸೂಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

