ಉಡುಪಿ

27ರಂದು ವಿದ್ಯುತ್ ಕಡಿತ

Published On :

ಉಡುಪಿ: ಬ್ರಹ್ಮಾವರ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಹೊನ್ನಾಳ ಫೀಡರ್‌ನಲ್ಲಿ ಮತ್ತು ಮಧುವನ ಉಪಕೇಂದ್ರದಿಂದ ಹೊರಡುವ ಶಿರಿಯಾರ ಫೀಡರ್‌ನಲ್ಲಿ ತುರ್ತು ಕಾಮಗಾರಿ ಪ್ರಯುಕ್ತ 27ರಂದು ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಕೆಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.ಹೇರೂರು, ಬೈಕಾಡಿ, ಹಾರಾಡಿ, ಹೊನ್ನಾಳ, ಸಾಲಿಕೇರಿ, ಮಧುವನ, ಸಾಯ್ಬ್ರಕಟ್ಟೆ, ಶಿರಿಯಾರ, ಬಿಲ್ಲಾಡಿ, ಆವರ್ಸೆ, ಮಂದಾರ್ತಿ, ಕೊಕ್ಕರ್ಣೆ, ಶಿರೂರು, ಮುದ್ದೂರು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ನಾಳೆ   
ಉಡುಪಿ: ಇಲ್ಲಿನ ಪೆರಂಪಳ್ಳಿ ಯುವಕ ಮಂಡಲದ ಆಶ್ರಯದಲ್ಲಿ 25ರಂದು ಮಧ್ಯಾಹ್ನ 3 ಗಂಟೆಗೆ ಮುದ್ದುಕೃಷ್ಣ ಸ್ಪರ್ಧೆ ಆಯೋಜಿಸಲಾಗಿದೆ. 1ರಿಂದ 3 ವರ್ಷ ಹಾಗೂ 3ರಿಂದ 6 ವರ್ಷದವರೆಗಿನ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಆಸಕ್ತರು ಸ್ಥಳಕ್ಕೆ ಅರ್ಧ ಗಂಟೆ ಮುಂಚಿತವಾಗಿ ಬಂದು ಹೆಸರನ್ನು ನೋಂದಾಯಿಸಬೇಕು ಎಂದು ಯುವಕ ಮಂಡಲದ ಅಧ್ಯಕ್ಷ ವಾಸುದೇವ ಭಟ್ ಪೆರಂಪಳ್ಳಿ ತಿಳಿಸಿದ್ದಾರೆ.
ಹಟ್ಟಿಯಂಗಡಿ: ಇಂದು ಸಹಸ್ರ ನಾಳಿಕೇರ ಗಣಯಾಗ
ಗಂಗೊಳ್ಳಿ: ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವರ ಸನ್ನಿಧಿಯಲ್ಲಿ ಸಹಸ್ರನಾಳಿಕೇರ ಮಹಾಗಣಪತಿ ಯಾಗ 24ರಂದು ಮೈಸೂರಿನ ಪ್ರೊ. ವಿಠಲದಾಸ್ ಅವರಿಂದ ನಡೆಯಲಿದೆ ಎಂದು ವೇ.ಮೂ. ಎಚ್. ರಾಮಚಂದ್ರ ಭಟ್ಟ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.