ಉಡುಪಿ

ರಸ್ತೆ ಅಪಘಾತ: ಓರ್ವ ಸಾವು

Published On :

ಕುಂದಾಪುರ: ಇಲ್ಲಿನ ರಾ.ಹೆ. 66ರ ನಾಗೂರು ಸಮೀಪ ಭಾನುವಾರ ಬೆಳ್ಳಂಬೆಳಗ್ಗೆ ನಡೆದ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಮೃತರು ಇಲ್ಲಿನ ಖಾರ್ವಿ ಕೇರಿಯ ಸಂದೇಶ್ ಖಾರ್ವಿ. ಅವರು ಮುಂಜಾನೆ 3 ಗಂಟೆಗೆ ಓಮ್ನಿ ಕಾರಿನಲ್ಲಿ ಕುಂದಾಪುರದತ್ತ ಸಾಗುತ್ತಿದ್ದಾಗ ಮುಂಭಾಗದಿಂದ ಬಂದ ಗೂಡ್ಸ್ ಟೆಂಪೋ ಮುಖಾಮುಖಿ ಡಿಕ್ಕಿಯಾಗಿ ತೀವ್ರ ಗಾಯಗೊಂಡು ಸ್ಥಳದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಶನಿವಾರ ರಾತ್ರಿ ಹೊನ್ನಾವರದಲ್ಲಿ ನಡೆದ ಕಬಡ್ಡಿ ಪಂದ್ಯಾಟ ನೋಡಲು ತನ್ನ ಸ್ನೇಹಿತರಾದ ಪ್ರಶಾಂತ್ ಖಾರ್ವಿ, ಪ್ರಸಾದ್ ಖಾರ್ವಿ, ಆಕಾಶ್ ಖಾರ್ವಿ, ಸುನಿಲ್ ಖಾರ್ವಿ, ಸನತ್ ಖಾರ್ವಿ ಹಾಗೂ ರಿತೇಶ್ ಮೇಸ್ತ ಎಂಬವರೊಂದಿಗೆ ತೆರಳಿದ್ದರು. ಮಳೆಯ ಕಾರಣ ಕಬಡ್ಡಿ ಪಂದ್ಯಾಟ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಮುಂಜಾನೆ 3 ಗಂಟೆ ಸುಮಾರಿಗೆ ಹೊನ್ನಾವರದಿಂದ ಹಿಂತಿರುಗಿದ್ದರು. ಈ ಸಂದರ್ಭದಲ್ಲಿ ಈ ಅಪಘಾತ ನಡೆದಿದೆ. ಈ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಪ್ರಸಾದ್ ಹಾಗು ಪ್ರಶಾಂತ್ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾಮಾನ್ಯ ಗಾಯಗೊಂಡ ಇತರರಿಗೆ ಉಳಿದವರನ್ನು ಕುಂದಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ಸಂದೇಶ್ ಸಮಾಜ ಸೇವಕರಾಗಿದ್ದು, ನಾಗರಾಜ್ ಖಾರ್ವಿ ಅವರ ಸಹೋದರನಾಗಿದ್ದು, ಮೀನು ವ್ಯವಹಾರ ಮಾಡಿಕೊಂಡಿದ್ದರು. ಮೃತರ ಅಂತ್ಯಕ್ರಿಯೆ ಬಬ್ಬು ಕುದ್ರುವಿನಲ್ಲಿ ಜರಗಿದ್ದು, ಅಸಂಖ್ಯಾತ ಜನರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.