ಉಡುಪಿ ಮುಳುಗಡೆ ವದಂತಿ!
ಉಡುಪಿ: ಪ್ರಳಯ ಆಗುತ್ತದೆ ಎಂದು 2012 ಉದ್ದಕ್ಕೂ ಗುಲ್ಲು ಹಬ್ಬಿಸಿದ್ದೇ ಹಬ್ಬಿಸಿದ್ದು, ಆದರೆ ಅದು ಸುಳ್ಳು ಆಯಿತು. ಈಗ ಮತ್ತೇ 2013ರಲ್ಲಿ ಅದೂ ಮೇ 13ರಂದು ಉಡುಪಿ ಮುಳುಗುತ್ತದೆ ಎನ್ನುವ ಸುಳ್ಳು ವದಂತಿ ಆರಂಭವಾಗಿದೆ.
ಬುಧವಾರ ವೆಬ್ಸೈಟ್ವೊಂದರಲ್ಲಿ ಈ ಸುಳ್ಳು ಸುದ್ದಿ ಮೊದಲು ಪ್ರಕಟವಾಯಿತು, ಅದನ್ನು ನೋಡಿದ ಸುದ್ದಿವಾಹಿನಿಯಲ್ಲಿ ಪ್ರಸಾರವಾಗಿ ಉಡುಪಿ ಮಾತ್ರವಲ್ಲ, ನಾಡಿನಾದ್ಯಂತ ಆತಂಕಕ್ಕೆ ಕಾರಣವಾಯಿತು.
ಈ ವೆಬ್ಸೈಟ್ನಲ್ಲಿ, ಉಡುಪಿಯ ಕೃಷ್ಣಮಠದ ರಥಬೀದಿಯಲ್ಲಿರುವ ಅನಂತೇಶ್ವರ ದೇವಾಲಯದಲ್ಲಿ ನಡೆದ ಅಷ್ಟಮಂಗಲ ಪ್ರಶ್ನಾ ಕಾರ್ಯಕ್ರಮದಲ್ಲಿ ಮೇ 13ರಂದು ಉಡುಪಿ ಮುಳುಗುತ್ತದೆ ಎಂದು ತಿಳಿದುಬಂದಿದೆ ಎಂದೆಲ್ಲ ಕಪೋಲಕಲ್ಪಿತವಾಗಿ ಬರೆಯಲಾಗಿತ್ತು.
ಪುತ್ತಿಗೆ ಮಠ ಸ್ಪಷ್ಟನೆ: ವಿಷ್ಣುವನ್ನು ಆರಾಧಿಸುವ ವೈಷ್ಣವರ ಉಡುಪಿಯಲ್ಲಿರುವ ಶಿವನನ್ನು ಆರಾಧಿಸುವ ಶೈವರು, ಈ ಅನಂತೇಶ್ವರ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯವಾಗಿದೆ. ಆದರೆ ಇದರ ಆಡಳಿತ ಇಲ್ಲಿನ ಪುತ್ತಿಗೆ ಮಠದ ಕೈಯಲ್ಲಿದೆ. ದೇವಾಲಯವು ಶಿಥಿಲಗೊಳ್ಳುತ್ತಿದ್ದು, ಅದರ ಜೀರ್ಣೋದ್ಧಾರದ ಬಗ್ಗೆ ಕೆಲವು ದಿನಗಳ ಹಿಂದೆ ಹಿರಿಯಡ್ಕ ಸಮೀಪದ ಪುತ್ತಿಗೆ ಮೂಲಮಠದಲ್ಲಿ ಅಷ್ಟಮಂಗಲ ಪ್ರಶ್ನೆ ಇಡಲಾಗಿತ್ತು. ಆದರೆ ಈ ಸಂದರ್ಭದಲ್ಲಿ ಮೇ 13ರ ಉಡುಪಿ ನಾಶದ ಬಗ್ಗೆ ಯಾವುದೇ ಎಚ್ಚರಿಕೆ ಸಿಕ್ಕಿಲ್ಲ ಎಂದು ಪುತ್ತಿಗೆ ಮಠದ ಮೂಲಗಳು ಸ್ಪಷ್ಟಪಡಿಸಿವೆ.
ಈ ಅಷ್ಟಮಂಗಲ ಪ್ರಶ್ನೆಯಲ್ಲಿ ಈ ಶಿವ ದೇವಾಲಯದಲ್ಲಿ ಪೂಜೆಯ ವೈರುಧ್ಯದ ಬಗ್ಗೆ, ದೇವಾಲಯದ ಬಲಿ ಕಲ್ಲುಗಳ ನಿರ್ಲಕ್ಷ, ಅವುಗಳ ಮೈಲಿಗೆ ಬಗ್ಗೆ ಸವಿವರವಾಗಿ ಕಂಡುಬಂದಿದೆ. ಅಲ್ಲದೆ ಮೇ 13ರಂದು ಶುಕ್ರ ಗ್ರಹದ ಚಲನೆಯಿಂದ ವಿಶ್ವದಾದ್ಯಂತ ಹಿರಿಯರಿಗೆ ಸ್ವಲ್ಪ ಮಟ್ಟಿನ ತೊಂದರೆಗಳು ಕಂಡು ಬರುತ್ತವೆ ಎಂದೂ ಹೇಳಲಾಗಿದೆ. ಆದರೆ ಅಂದು ಉಡುಪಿಗೆ ಅಪಾಯ ಇದೆ ಅಥವಾ ಉಡುಪಿ ನಾಶವಾಗುತ್ತದೆ ಎಂದು ಯಾವುದೇ ವಿಷಯ ಹೇಳಿಲ್ಲ ಎಂದು ಪುತ್ತಿಗೆ ಮಠದ ಮೂಲಗಳು ಹೇಳಿವೆ. ಆದರೂ ಅನಗತ್ಯವಾಗಿ ಮೇ 13ರಂದು ಉಡುಪಿ ನಾಶವಾಗುತ್ತದೆ, ಮುಳುಗುತ್ತದೆ ಎಂದೆಲ್ಲ ಸುದ್ದಿ ಹರಡಿಸುತ್ತಿದ್ದಾರೆ, ಇದು ಜನರಲ್ಲಿ ಸುಳ್ಳು ಆತಂಕವನ್ನುಂಟು ಮಾಡುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

