'ಸಾಮರಸ್ಯದ ಜೀವನ ನಿರಂತರವಾಗಲಿ'
ಹೆಬ್ರಿ: ಸಾಮರಸ್ಯದ ಬದುಕು ನಮ್ಮಲ್ಲಿ ನಿರಂತರವಾಗಿ ನಡೆಯಬೇಕು. ನಾವು ನಮ್ಮ ಜೀವನವನ್ನು ಸನ್ಮಾರ್ಗ ಅಥವ ದುಮಾರ್ಗದತ್ತ ಕೊಂಡೊಯ್ಯೂತ್ತಿದ್ದೇವೋ ಎಂದು ಅತ್ಮವಲೋಕನ ಮಾಡಿಕೊಳ್ಳಬೇಕು ಎಂದು ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ಅರೆಮಾದನ ಹಳ್ಳಿಯ ಶ್ರೀ ಶಿವ ಸುಜ್ಞಾನಮೂರ್ತಿ ಸ್ವಾಮೀಜಿ ಹೇಳಿದರು.
ಅವರು ಅಜೆಕಾರಿನ ಆಕಾಶಬೆಟ್ಟು ಬಾಕಿಮಾರು ಗದ್ದೆಯಲ್ಲಿ ಶುಕ್ರವಾರ ನಡೆದ ಕುರ್ಪಾಡಿ ಯುವ ವೃಂದದ 12ನೇ ವರ್ಷದ ಆದಿಗ್ರಾಮೋತ್ಸವ ಮತ್ತು ಸಾರ್ವಜನಿಕ ಶ್ರೀ ವಿಶ್ವಕರ್ಮ ಪೂಜೆಯಲ್ಲಿ ಆಶೀರ್ವಚನ ನೀಡಿದರು.
ಗ್ರಾಮೋತ್ಸವದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್. ಗೋಪಲ ಭಂಡಾರಿ ಮಾತನಾಡಿ, ಅತ್ಯಂತ ದೊಡ್ಡ ಮನಸ್ಸಿನ ಸಮಾಜಮುಖಿಯ ಆದರ್ಶದ ಕೆಲಸ ಗ್ರಾಮೋತ್ಸವದಿಂದ ನಡೆಯುತ್ತಿದೆ ಎಂದು ಶ್ಲಾಘಿಸಿದರು.
ಪುರಸ್ಕಾರ: ಬೆಳಪು ಗ್ರಾಮ ಪಂಚಾಯಿತಿ ಮೂಲಕ ಅಭಿವೃದ್ಧಿಯ ಹೊಸ ಶಖೆ ಆರಂಭಿಸಿದ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಅವರಿಗೆ ಆದಿಗ್ರಾಮೋತ್ಸವ ಗೌರವ ಮತ್ತು ಗ್ರಾಮೀಣ ಕ್ರೀಡೆ ಸೈಕಲ್ ಸರ್ಕಸ್ನಲ್ಲಿ ಸಾಧನೆ ಮಾಡಿದ ವಿಜಯ ಕುಮಾರ್ ಕುಂಭಾಶಿ ಅವರಿಗೆ ಗ್ರಾಮ ಗೌರವ ಮತ್ತು ಅಜೆಕಾರು ಬೊಂಡುಕುಮೇರಿ ಕಂಬಳ ಸಮಿತಿ, ಎಸ್.ಎ. ಹುಸೇನ್ ಮೆಮೋರಿಯಲ್ ಟ್ರಸ್ಟ್ ಕಾರ್ಕಳ ಮತ್ತು ಅಂಡಾರು ಸರ್ಕಾರಿ ಶಾಲಾ ಶತಮಾನೋತ್ಸವ ಸಮಿತಿ ಇವರಿಗೆ ಸಾಂಸ್ಥಿಕ ಸಾಧನಾ ಗೌರವ, ಜಿಲ್ಲಾ ಮಟ್ಟದಲ್ಲಿ ಗಮನ ಸೆಳೆದಿರುವ ವೈದ್ಯರಾದ ಡಾ. ಚಂದ್ರಿಕಾ ಕಿಣಿ ಮತ್ತು ಸುನೀಲ್ ಕಿಣಿ ದಂಪತಿಗೆ ಗ್ರಾಮೋತ್ಸವ ದಂಪತಿ ಗೌರವ ನೀಡಲಾಯಿತು.
ಯುವ ಸಾಧಕರನ್ನು ಗುರುತಿಸಿ ನೀಡುವ ಗ್ರಾಮೋತ್ಸವ ಯುವ ಗೌರವವನ್ನು ಛಾಯಾಗ್ರಾಹಕ ಮನೋಹರ್ ಎರ್ಮಾಳ್, ಸಿನಿಮಾ ಕ್ಷೇತ್ರದ ದಯಾನಂದ ಕುಲಾಲ್, ಕೃಷಿಕ ರಾಘವೇಂದ್ರ ಕುರ್ಡೆಲ್, ಯಕ್ಷಗಾನ ಕಲಾವಿದ ದಿನೇಶ ಪೂಜಾರಿ ಅಜೆಕಾರು, ಅಂಗನವಾಡಿ ಶಿಕ್ಷಕಿ ಶಕುಂತಳಾ, ಸಮಾಜ ಸೇವಕಿ ಗಾಯತ್ರಿ ಚಾರಾ ಹೆಬ್ರಿ, ಬಹುಮುಖ ಪ್ರತಿಭೆಯ ಕಲಾವಿದೆ ಅನುಷಾ ಮೂಡುಬಿದರೆ, ಕೊಪ್ಪ, ಕುಣಿಯೋಣ ಬಾರ ಪ್ರಥಮ ಬಹುಮನ ಪಡೆದ ಶ್ವೇತಾ ಬಿ. ಮೂಡುಬಿದಿರೆ, ಪವರ್ ಲಿಪ್ಟರ್ ಅನಿತಾ ಪಿರೇರಾ, ಜಾನಪದ ಕಲಾವಿದೆ ಆರಾಧನಾ ಟಿಕೆ ಮಂಗಳೂರು, ಸಂಘಟಕ ಗಿರೀಶ್ ಕಾಮತ್ ಅಂಡಾರು, ಸ್ವ ಉದ್ಯಮ ಕ್ಷೇತ್ರದ ಅಸಾಧಕ ನಜೀರ್ ಶಾ ಮತ್ತು ಬಾಲ ಕಲಾವಿದ ಲಾರೆನ್ಸ್ ಪಿಂಟೋ, ಇನ್ನ ಪಲಿಮಾರ್ ನೀಡಲಾಯಿತು. 100 ಶೇಕಡಾ ಫಲಿತಾಂಶ ದಾಖಲಿಸಿದ ಅಜೆಕಾರು ಚರ್ಚ್ ಶಾಲೆ ಮತ್ತು ಜೋತಿ ಜೂನಿಯರ್ ಕಾಲೇಜಿಗೆ ಗೌರವ ಪ್ರದಾನ ಮಾಡಲಾಯಿತು.
ಗ್ರಾಮದ ಏಕತೆಯ ಕಲ್ಪನೆಯೊಂದಿಗೆ ಜಿಲ್ಲೆಯಲ್ಲಿ ಆರಂಭವಾದ ಮೊದಲ ಗ್ರಾಮೋತ್ಸವ ಎಂಬ ಹೆಗ್ಗಳಿಕೆಯಿಂದ ಆದಿ ಗ್ರಾಮೋತ್ಸವದಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಗುಲಾಂ ಅಹಮ್ಮದ್, ಮುಂಬೈ ಉದ್ಯಮಿ ದೇವಸ್ಯ ಶಿವರಾಮ ಶೆಟ್ಟಿ, ಪಮ್ಮೋಟ್ಟು ಸುಂದರ ಶೆಟ್ಟಿ, ಉದ್ಯಮಿ ಅಂಡಾರು ಮಹಾವೀರ ಹೆಗ್ಡೆ, ಮರ್ಣೆ ಪಂಚಾಯಿತಿ ಅಧ್ಯಕ್ಷೆ ಹೀರಾ ಶೆಟ್ಟಿ, ಅಜೆಕಾರು ಠಾಣಾಧಿಕಾರಿ ಡಿ.ಎಂ. ಕುಮಾರ್, ಸಿಯೋನ್ ಆಶ್ರಮದ ಪೌಲೋಸ್, ಕುರ್ಪಾಡಿ ಯುವ ವೃಂದದ ಗೌರವಾಧ್ಯಕ್ಷ ಡಾ. ಸಂತೋಷ್ ಕುಮಾರ್ ಶೆಟ್ಟಿ, ಸಂಸ್ಥಾಪಕ, ಸಂಘಟಕ ಶೇಖರ ಅಜೆಕಾರು, ಅಧ್ಯಕ್ಷ ದಾಮೋದರ್, ಉಪನ್ಯಾಸಕ ಬೋರ್ಗಲ್ ಗುಡ್ಡೆ ಮಂರಜುನಾಥ್, ಕುರ್ಪಾಡಿ ಶಂಕರ ಆಚಾರ್ಯ, ಗಿರಿಜಾ ಶಂಕರ ಆಚಾರ್ಯ, ಸೌಮ್ಯಶ್ರೀ ಶೇಖರ್ ಅಜೆಕಾರ್, ಪುರೋಹಿತತ್ ಜಿ.ಎಸ್. ಪುರಂದರ ಆಚಾರ್ಯ ಮುನಿಯಾಲ್ ಇತರರು ಇದ್ದರು.
ಮೊದಲ ಬಾರಿಗೆ ಕಲೆಯ ಅಧಿದೇವತೆಯಾದ ಎಲ್ಲಾ ಕುಶಲ ಕರ್ಮಿಗಳ ಆರಾಧ್ಯ ದೈವ ವಿಶ್ವಕರ್ಮ ಪೂಜೆಯು ಸಾರ್ವಜನಿಕವಾಗಿ ನಡೆಯಿತು.
ವೈವಿಧ್ಯಮಯ ಕಾರ್ಯಕ್ರಮ: ಸಾರ್ವಜನಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮೊದಲ ಬಾರಿಗೆ ವಿಜಯ ಕುಮಾರ್ ಕುಂಭಾಸಿ ಅವರಿಂದ ಸೈಕಲ್ ಸರ್ಕಸ್, ಕೆಳದಿ ಚೆನ್ನಮ್ಮದಲ್ಲಿ ನಟಿಸಿದ ಅನುಷಾ ಶೆಟ್ಟಿ ಮತ್ತು ಅಭಾಷಾ ಶೆಟ್ಟಿ ಅವರಿಂದ ಹರಿಕಥಾ ಕಾಲಕ್ಷೇಪ, ಝೀ ಟಿವಿ ಪ್ರಶಸ್ತಿ ವಿಜೇತ ಶ್ವೇತ ಅವರ ನೃತ್ಯ, ಮಂಗಳೂರಿನ ಸೂಪರ್ ಬಾಲ ಕಲಾವಿದೆ ಆರಾಧನಾ ಎನ್.ಕೆ. ಅವರಿಂದ ಹಾಡುಗಳು, ಲಾರೆನ್ಸ್ ಪಿಂಟೋ ಅವರ ಕಲಾಕೃತಿಗಳ ಪ್ರದರ್ಶನ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

