ಉಡುಪಿ

ಸರ್ಕಾರಿ ವಾಹನಚಾಲಕರ ಸಂಘ

Published On :

ಉಡುಪಿ: ಜಿಲ್ಲೆಯ ಆರೋಗ್ಯ, ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಇಲಾಖೆಗಳ ವಾಹನ ಚಾಲಕರ ಸಂಘವನ್ನು ರಾಜ್ಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ ಉದ್ಘಾಟಿಸಿದರು. ಕೇಂದ್ರ ಸಂಘದ ರಾಜ್ಯಾಧ್ಯಕ್ಷ ತಿಮ್ಮರಾಜು ಅಧ್ಯಕ್ಷತೆಯನ್ನು ವಹಿಸಿದ್ದರು. ಕೇಂದ್ರ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜು ಮತ್ತು ಕೇಂದ್ರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಸೋಮಶೇಖರ ಉಪಸ್ಥಿತರಿದ್ದರು. ನಾಗರಾಜ ಶೇರಿಗಾರ್ ಸ್ವಾಗತಿಸಿದರು. ರವೀಂದ್ರ ಪೂಜಾರಿ ನಿರೂಪಿಸಿ ಗಣೇಶ್ ವಂದಿಸಿದರು. ನಂತರ ಸಂಘದ ಗೌರವಾಧ್ಯಕ್ಷರಾಗಿ ಪಿ. ಬಾಲಚಂದ್ರ ಹೆಬ್ಬಾರ್, ಅಧ್ಯಕ್ಷರಾಗಿ ನಾಗರಾಜ ಶೇರಿಗಾರ, ಉಪಾಧ್ಯಕ್ಷರಾಗಿ ಧರ್ಮೇಂದ್ರ ಎಸ್, ಪ್ರಧಾನ ಕಾರ್ಯದರ್ಶಿಯಾಗಿ ಸಿ. ಕೆ. ಸೆಲ್ವರಾಜ್, ಜೊತೆ ಕಾರ್ಯದರ್ಶಿಯಾಗಿ ಗಣೇಶ್, ಕೋಶಾಧಿಕಾರಿ ಶಂಕರ ಪಿ, ಸಂಘಟನಾ ಕಾರ್ಯದರ್ಶಿಗಳಾಗಿ ಎ. ರವೀಂದ್ರ ಪೂಜಾರಿ, ದಿನೇಶ್ ಪ್ರಭು ಮತ್ತು ಸುಭಾಸ್ ಅವರನ್ನು ಆರಿಸಲಾಯಿತು.
ಎಂಜಿಎಂ ಕಾಲೇಜು ವಾರ್ಷಿಕಾಂಕಕ್ಕೆ ಪ್ರಶಸ್ತಿ
ಉಡುಪಿ: ಮಂಗಳೂರು ವಿವಿ ನಡೆಸಿದ 2011-12ನೇ ಸಾಲಿನ ಕಾಲೇಜು ವಾರ್ಷಿಕಾಂಕ ಸ್ಫರ್ಧೆಯ -ಬಿ- ವಿಭಾಗದಲ್ಲಿ ಉಡುಪಿಯ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಾರ್ಷಿಕಾಂಕ -ಸುಪ್ರಭಾ- ದ್ವೀತಿಯ ಬಹುಮಾನ ಗಳಿಸಿದೆ. ಕಾಲೇಜಿನ ವಾರ್ಷಿಕಾಂಕವು ಕಳೆದ 4 ವರ್ಷಗಳಿಂದ ಸತತವಾಗಿ ಬಹುಮಾನಗಳನ್ನು ಗಳಿಸುತ್ತಿದ್ದು ಕಾಲೇಜಿನ ಈ ಮಹತ್ಸಾಧನೆಯಲ್ಲಿ ಕಾರಣರಾದ ಪ್ರಧಾನ ಸಂಪಾದಕ ಡಾ. ವಸಂತ ಕುಮಾರ್, ಸಂಪಾದಕ ಮಂಡಳಿ, ಭೋದಕ, ಭೋದಕೇತರ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಚಾರ್ಯರು ಅಭಿನಂದಿಸಿದ್ದಾರೆ.
ರಾಷ್ಟ್ರಮಟ್ಟಕ್ಕೆ ಆಯ್ಕೆ
ಉಡುಪಿ: ಮಣಿಪಾಲದ ಮಾಧವ ಕೃಪಾ ಶಾಲೆಯ ದೈಹಿಕ ಶಿಕ್ಷಕಿ ಶಾಲಿನಿ ಎಸ್. ಅವರು ಇತ್ತೀಚಿಗೆ ಕೋಲಾರದಲ್ಲಿ ನಡೆದ 34ನೇ ರಾಜ್ಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಎತ್ತರ ಜಿಗಿತದಲ್ಲಿ ಚಿನ್ನ, ಉದ್ದ ಜಿಗಿತದಲ್ಲಿ ಬೆಳ್ಳಿ ಹಾಗೂ 100 ಮೀ. ಓಟದಲ್ಲಿ ಕಂಚಿನ ಪದಕಗಳನ್ನು ಗಳಿಸಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.