ರೆಂಜಾಳ ಜೈನ್ ಮಿಲನ್ ಪದಗ್ರಹಣ
ಕಾರ್ಕಳ: ರೆಂಜಾಳ ಜೈನ್ ಮಿಲನ್ನ 2013- 14ನೇ ಪದಗ್ರಹಣ ಸಮಾರಂಭವು ಬಸದಿಯಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅಭಯ್ ಕುಮಾರ್ ಜೈನ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ರತ್ನವರ್ಮ ಪೂವಣಿಯವರನ್ನು ಮಿಲನ್ ವತಿಯಿಂದ ಸನ್ಮಾನಿಸಲಾಯಿತು.
ರತ್ನರಾಜ್ ಪಾಂಡೀಲು ವರದಿ ವಾಚಿಸಿದರು. ಮುನಿರಾಜ್ ರೆಂಜಾಳ ಧಾರ್ಮಿಕ ತರಗತಿಯ ಪ್ರಮಾಣ ಪತ್ರ ವಿತರಿಸಿದರು. ಭಾರತಿ ಜಿನಚಂದ್ರರು ವಿವಿಧ ಸ್ಪರ್ಧೆಗಳ ವಿವರ ನೀಡಿ, ಬಿ. ಮಹಾವೀರ ಹೆಗ್ಡೆ ಬಹುಮಾನ ವಿತರಿಸಿದರು.
ಅಧ್ಯಕ್ಷ ಶಿಶುಪಾಲ್ ಜೈನ್ ನಾರಾವಿ, ವಲಯ ನಿರ್ದೇಶಕರು ಮಿಲನ್ ಚುಟುವಟಿಕೆಗಳನ್ನು ಶ್ಲಾಘಿಸಿದ್ದರಲ್ಲದೆ ಮೇ 26ರಂದು ಎಲ್ಲಾ ಮಿಲನ್ನ ಜಂಟಿ ಸಭೆಯಲ್ಲಿ ನಾರಾವಿ ಬಸದಿಯಲ್ಲಿ ಜರಗಿಸುವುದಾಗಿ ಪ್ರಕಟಿಸಿದರು. ನಿರುಪಮಾ ಪ್ರಾರ್ಥಿಸಿದರು.
ಮಲ್ಲಿಕಾ ಮುನಿರಾಜ್ ಸ್ವಾಗತಿಸಿ, ಅಜಿತ್ ಕುಮಾರ್ ಅರುಶಿತಾ ವಂದಿಸಿದರು. ಶ್ರುತಿ ಜೈನ್ ಕಾರ್ಯಕ್ರಮ ನಿರೂಪಿಸಿದರು. ನಂತರ ಪಂಚಮಿ ಮಾರೂರು ಅವರಿಂದ ಸಮವಸರಣ ವೈಭವ ನೃತ್ಯ, ಬಸದಿಯಲ್ಲಿ ಭಜನೆ, ದೀಪಾರಧನೆ ಪೂರ್ವಕ ಜಿನರಾತ್ರಿ ಪೂಜೆ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

