ಉಡುಪಿ

ಶಕು 'ಕೈ'ಗೆ ಟಿಕೆಟ್ ವದಂತಿ

Published On :

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಆಯ್ಕೆ ಖಚಿತವಾಗಿದೆ. ಇದು ಪುತ್ತೂರು, ವಿಟ್ಲ ಮತ್ತಿತರ ಕಡೆಗಳಲ್ಲಿ ಭಾನುವಾರ ನಡೆದ ವ್ಯಾಪಕ ಪ್ರಚಾರ.
ಇದಕ್ಕೆ ಪುಷ್ಟಿ ನೀಡುವಂತೆ ಶಕುಂತಳಾ ಶೆಟ್ಟಿ ಭಾನುವಾರ ಮಧ್ಯಾಹ್ನ ತನ್ನ ರಾಜಕೀಯ ಮಾರ್ಗದರ್ಶಕ, ಹಿರಿಯ ರಾಜಕಾರಣಿ ಕೆ. ರಾಮಭಟ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ.
ಈ ಬಾರಿ ತಟಸ್ಥ ನಿಲುವು ತಾಳುವುದಾಗಿ ಪ್ರಕಟಿಸಿದ್ದ ರಾಮ ಭಟ್,ಗೆ ಈಗಲೂ ತನ್ನದೇ ಆದ ಆಭಿಮಾನಿಗಳ ಬಳಗವಿದ್ದು, ಈ ಹಿನ್ನೆಲೆಯಲ್ಲಿ ಶಕುಂತಳಾ ಶೆಟ್ಟಿ ಭೇಟಿ ಮತ್ತು ಪುತ್ತೂರಿನಲ್ಲಿ ನಡೆದ ಪ್ರಚಾರಕ್ಕೂ ತಾಳೆಯಾಗುತ್ತಿದೆ.  
ವೇದಿಕೆ ಆರಂಭಿಸಿದ್ದರು: ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಈ ಹಿಂದೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕಿಯಾಗಿದ್ದ ಶಕುಂತಳಾ ಶೆಟ್ಟಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಅವಕಾಶ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿಯ ಹಿರಿಯ ನಾಯಕ ರಾಮ ಭಟ್ ಮಾರ್ಗದರ್ಶನದಲ್ಲಿ ಶಕುಂತಳಾ ಸೇರಿದಂತೆ ಹಲವು ಬಿಜೆಪಿ ನಾಯಕರು ಬಿಜೆಪಿಯಿಂದ ಹೊರಬಂದು ಸ್ವಾಭಿಮಾನಿ ವೇದಿಕೆ ಆರಂಭಿಸಿದ್ದರು.
ರಾಮ ಭಟ್ ಅವರೇ ಶಕುಂತಳಾ ಶೆಟ್ಟಿ ಅವರನ್ನು ಸ್ವಾಭಿಮಾನಿ ವೇದಿಕೆಯ ವತಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಸಿದ್ದರು. ಆ ಸಂದರ್ಭ ಅವಕಾಶ ವಂಚಿತರೆಂದು ರಾಜ್ಯ ಮಟ್ಟದಲ್ಲಿಯೇ ಅನುಕಂಪ ಗಿಟ್ಟಿಸಿದ್ದ ಶಕುಂತಳಾ ಶೆಟ್ಟಿ  25,171 ಮತಗಳನ್ನು ಪಡೆದು ತನ್ನ ಜನಬೆಂಬಲ ತೋರ್ಪಡಿಸಿದ್ದರು.
ಬಳಿಕದ ಸ್ವಾಭಿಮಾನಿ ವೇದಿಕೆ, ಸಮರ್ಪಣಾ ಮಹಿಳಾ ಸಂಘಟನೆ ಸ್ಥಾಪಿಸಿ ಸಾಮಾಜಿಕ ಸೇವೆಯಲ್ಲಿ ತೊಡಗಿ ನಿರಂತರ ಜನ ಸಂಪರ್ಕದಲ್ಲಿದ್ದರು.
ಜೆಡಿಎಸ್,ಗೆಳೆಯುವ ಯತ್ನ: ಶಕುಂತಳಾ ಅವರನ್ನು ಈ ನಡುವೆ ಜೆಡಿಎಸ್,ಗೆ ಸೆಳೆಯುವ ಪ್ರಯತ್ನ ನಡೆದಿತ್ತು. ಸ್ವತಃ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶಕುಂತಳಾ ಶೆಟ್ಟಿ ಮನೆಗೆ ಆಗಮಿಸಿ ಭೇಟಿ ಮಾಡಿದ್ದರು. ಬಳಿಕ ಬಿಎಸ್,ಆರ್ ಪಕ್ಷದ ಶ್ರೀರಾಮುಲು ಭೇಟಿಯಾಗಿ ಮಾತುಕತೆಗೆ ನಡೆಸಿದ್ದು, ಅವರು ಬಿಎಸ್,ಆರ್ ಪಕ್ಷ ಸೇರುತ್ತಾರೆ ಎಂಬ ಪ್ರಚಾರವೂ ನಡೆದಿತ್ತು.
ಆದರೆ, ಶಕುಂತಳಾ ಕಳೆದ ಸ್ಥಳೀಯಾಡಳಿತ ಚುನಾವಣೆಯ ಸಂದರ್ಭದಲ್ಲಿ ಮಾಜಿ ಸಂಸದ ವಿನಯ ಕುಮಾರ್ ಸೊರಕೆ ನೇತೃತ್ವದಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್,ಗೆ ಸೇರ್ಪಡೆಗೊಂಡಿದ್ದರು. ಬಳಿಕ ಕಾಂಗ್ರೆಸ್,ನಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದರು.
ಶಕುಗೆ ಸೊರಕೆ ಒಲವು: ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಅಭಯ ಕಾವು ಹೇಮನಾಥ ಶೆಟ್ಟಿ ಅವರಿಗಿತ್ತು. ಶಾಸಕಿ ಶಕುಂತಳಾ ಶೆಟ್ಟಿಗೆ ಅವಕಾಶ ಮಾಡಿಕೊಡುವ ಬಗ್ಗೆ ಮಾಜಿ ಸಂಸದ ವಿನಯಕುಮಾರ್ ಸೊರಕೆ ಒಲವು ವ್ಯಕ್ತಪಡಿಸಿದ್ದರು.
ಪುತ್ತೂರು ಮೂಲದವರೇ ಆದ ಜಯಕರ್ನಾಟಕ ಸಂಘಟನೆ ಸ್ಥಾಪಕಾಧ್ಯಕ್ಷ ಮುತ್ತಪ್ಪ ರೈ ಕೂಡ ಸಹಕಾರದ ಭರವಸೆ ನೀಡಿದ್ದರು ಎನ್ನಲಾಗುತ್ತಿದೆ.
ಕೇಂದ್ರ ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್ ಕೂಡ ಶಕುಂತಳಾ ಶೆಟ್ಟಿ  ಪರವಾಗಿದ್ದಾರೆ ಎಂಬ ಪ್ರಚಾರ ಹರಡಿತ್ತು. ಪುತ್ತೂರು ಕ್ಷೇತ್ರದ  ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ನಡೆದಿರುವುದು ದೃಢಪಟ್ಟಿಲ್ಲವಾದರೂ ಶಕುಂತಳಾ ಶೆಟ್ಟಿಗೆ ಸ್ಪರ್ಧಿಸಲು ಹಸಿರು ನಿಶಾನೆ ದೊರಕಿದೆ ಎಂಬ ವಿಚಾರ ಪುತ್ತೂರಿನಾದ್ಯಂತ ಸುದ್ದಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.