'ಗುರಿ, ಪರಿಶ್ರಮದಿಂದ ಸಾಧನೆ'
ಉಡುಪಿ: ನಮ್ಮ ಭವಿಷ್ಯದ ಜೀವನವನ್ನು ನಾವೇ ರೂಪಿಸಬೇಕು. ಅದಕ್ಕಾಗಿ ಜೀವನದಲ್ಲಿ ಒಂದು ಗುರಿ, ಅದನ್ನು ಸಾಧಿಸಲು ಸತತ ಪರಿಶ್ರಮ ಮುಖ್ಯ ಎಂದು ವಿಕಲ ಚೇತನ ಪ್ರತಿಭಾನ್ವಿತ ಸಾಧಕಿ, ಮೂಡುಬಿದಿರೆ ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಸಬಿತಾ ಮೋನಿಸ್ ಹೇಳಿದ್ದಾರೆ.
ಇಲ್ಲಿನ ಬೆಳ್ಮಣ್ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ಜರುಗಿದ ಕರ್ನಾಟಕ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಬಾಲ್ಯದಿಂದಲೂ ಎರಡೂ ಕೈಗಳಿಲ್ಲದಿದ್ದರೂ ತಾನು ತಂದೆ, ತಾಯಿ ಹಾಗೂ ಗುರುಗಳ ಪ್ರೋತ್ಸಾಹ, ಮಾರ್ಗದರ್ಶನದಿಂದ ಕಾಲು ಬೆರಳುಗಳಿಂದಲೇ ಪರೀಕ್ಷೆ ಬರೆದು ಐಎಎಸ್ ಪರೀಕ್ಷೆ ಬರೆದ ಬಗ್ಗೆ ವಿವರಿಸಿದ ಅವರು, ಸಾಧನೆಗೆ ದೈಹಿಕ ವಿಕಲತೆ ಅಡ್ಡಿಯಾಗುವುದಿಲ್ಲ ಎಂದು ತನ್ನನ್ನೇ ಉದಾಹರಿಸಿದರು.
ಶಾಲೆಯ ಹಿರಿಯ ಶಿಕ್ಷಕ ಬಿ. ಪುಂಡಲೀಕ ಮರಾಠೆ ಮಾತನಾಡಿ, ಸಬಿತಾ ಮೋನಿಸ್ ಅವರ ಸಾಧನೆಗಳನ್ನು ಪರಿಚಯಿಸಿದರು. ಶಾಲಾ ಸಂಚಾಲಕ ಫಾ. ಲಾರೆನ್ಸ್ ಬಿ. ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ರೆನಿಲ್ಡಾ ಪಿರೇರಾ, ಬೆನಡಿಕ್ಟ್ ಮೊನಿಸ್ ಇದ್ದರು. ರಿಯೋನಾ, ನಾಗರಾಜ್, ಪವಿತ್ರಾ ರಾಜ್ಯೋತ್ಸವದ ಬಗ್ಗೆ ಮಾತನಾಡಿದರು. ಲೈನಲ್ ಸ್ವಾಗತಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

