ಸುದ್ದಿ ಸಂಕ್ಷೇಪ
ಕಾಳಾವರ ಷಷ್ಠಿ ಆಮಂತ್ರಣ ಪತ್ರಿಕೆ ಅನಾವರಣ
ಕುಂದಾಪುರ: ಇಲ್ಲಿನ ಕಾಳಾವರದ ಶ್ರೀಮಹಾಲಿಂಗೇಶ್ವರ ಮತ್ತು ಶ್ರೀಕಾಳಿಂಗ (ಸುಬ್ರಹ್ಮಣ್ಯ) ದೇವಸ್ಥಾನದಲ್ಲಿ ಡಿ.8 ಮತ್ತು 9ರಂದು ನಡೆಯುವ ಹಿರಿಷಷ್ಠಿ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ತಾಪಂ ಸದಸ್ಯ ದೀಪಕ್ ಕುಮಾರ್ ಶೆಟ್ಟಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಸಭೆಯ ಅಧ್ಯಕ್ಷತೆಯನ್ನು ಉತ್ಸವ ಸಮಿತಿ ಅಧ್ಯಕ್ಷ ಪ್ರೊ. ಶಂಕರ್ ರಾವ್ ಕಾಳಾವರ ವಹಿಸಿದ್ದರು. ಹಿರಿಯರಾದ ಕೋಣಿ ನರಸಿಂಹ ಕಾರಂತ, ಎಚ್. ದಯಾನಂದ ಹೆಗ್ಡೆ, ರತ್ನಾಕರ ಶೆಟ್ಟಿ, ರಾಮಚಂದ್ರ ನಾವಡ, ಸುರೇಶ ಎನ್. ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ಭರತ ಶೆಟ್ಟಿ, ಸತ್ಯನಾರಾಯಣ ಪುರಾಣಿಕ, ಗಜೇಂದ್ರ ಆಚಾರ್, ಶ್ರೀನಿವಾಸ ಕಾಳಾವರ್, ಕೆ. ಚಂದ್ರಶೇಖರ ಶೆಟ್ಟಿ ಹಾಗೂ ಉತ್ಸವ ಸಮಿತಿ ಸದಸ್ಯರು ಇದ್ದರು. ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು.
ಗ್ರಂಥಾಲಯ ಸಪ್ತಾಹ
ಉಡುಪಿ: ಇಲ್ಲಿನ ಶಿರ್ವ ಗ್ರಾಪಂ ಗ್ರಂಥಾಲಯ ಕಚೇರಿಯಲ್ಲಿ ಗ್ರಂಥಾಲಯ ಸಪ್ತಾಹವನ್ನು ಗ್ರಾಪಂ ಸದಸ್ಯ ಕೆ.ರಾಮರಾಯ ಪಾಟ್ಕರ್ ಉದ್ಘಾಟಿಸಿದರು. ಗ್ರಂಥಪಾಲಕಿ ಅಮ್ಮಿ ಶಿರ್ವ, ಗ್ರಾಪಂ ಸದಸ್ಯೆ ಕಮಲಾಕ್ಷಿ, ಅನಿತಾ ಕುಮಾರಿ, ವಿನಯ, ಪಾರ್ವತಿ ಇದ್ದರು.
ಸಾರ್ವಜನಿಕ ಸಂಗೀತ ಸ್ಪರ್ಧೆ
ಉಡುಪಿ: ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದ.ಕ. ಮತ್ತು ಉಡುಪಿ ಜಿಲ್ಲೆ ಇದರ ವತಿಯಿಂದ ಇಲ್ಲಿನ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಆಯೋಜಿಸಲಾದ ಅಂತರ್ ಕಾಲೇಜು ಹಾಗೂ ಸಾರ್ವಜನಿಕ ಸಂಗೀತ ಸ್ಪರ್ಧೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷೆ ನಿರುಪಮಾ ಪ್ರಸಾದ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಿರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥರು, ಒಕ್ಕೂಟದ ಅಧ್ಯಕ್ಷ ರವೀಂದ್ರ ಎಸ್. ಪ್ರಭು, ಉಪಾಧ್ಯಕ್ಷ ಸತೀಶ್ ಬನ್ನಂಜೆ, ಸಹ ಕಾರ್ಯದರ್ಶಿ ಅಶೋಕ್ ಸಾಮಂತ್, ಕಲಾವತಿ ದಯಾನಂದ ಬಿ.ಕೆ. ಕಾರಂತ ಉಪಸ್ಥಿತರಿದ್ದರು.
ಯುಎಫ್ಸಿ ಮಕ್ಕಳ ಹಬ್ಬ
ಉದ್ಯಾವರ: ನಾವಿಂದು ವಿದೇಶಿ ಸಂಸ್ಕೃತಿಗೆ ಮಾರುಹೋಗಿ ಅದನ್ನು ಅನುಸರಿಸುತ್ತಾ ಇರುವುದರಿಂದ ನಮ್ಮ ಸಂಸ್ಕೃತಿಯ ಕಲಾ ಮಾಧ್ಯಮಗಳಿಗೆ ಹಿನ್ನಡೆ ಉಂಟಾಗಿದೆ. ನಾವು ಪ್ರಜ್ಞಾ ಪೂರಕವಾಗಿ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಹಾಗಾಗಿ ಪಾಶ್ಚಾತ್ಯ ನೃತ್ಯ, ಸಂಗೀತ ವೈಭವೀಕರಣಗೊಳ್ಳುತ್ತಿದೆ ಎಂದು ಕಲಾವಿದೆ ದೀಕ್ಷಾ ರಾಮಕೃಷ್ಣ ವಿಷಾದ ವ್ಯಕ್ತಪಡಿಸಿದರು. ಅವರು ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಜರುಗಿದ ಉಡುಪಿ ಜಿಲ್ಲಾ ಮಟ್ಟದ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆ ಮಕ್ಕಳ ಸಮೂಹ ಸ್ಪರ್ಧೆ ಯು.ಎಫ್.ಸಿ. ಮಕ್ಕಳ ಹಬ್ಬ- 2013ನ್ನು ಉದ್ಘಾಟಿಸಿ ಮಾತನಾಡಿ, ಕಲಾ ಮಾಧ್ಯಮಗಳಲ್ಲಿ ತೊಡಗಿಸಿಕೊಂಡರೆ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಯಾವ ಅಡ್ಡಿಯೂ ಆಗುವುದಿಲ್ಲ ಎಂದರು. ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ವಹಿಸಿದ್ದರು. ಉದ್ಯಾವರ ಜಿಪಂ ಸದಸ್ಯ ದಿವಾಕರ ಕುಂದರ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಜೇಶ್ ಶೆಣೈ, ತಾಪಂ ಸದಸ್ಯ ಗಿರೀಶ್ ಕುಮಾರ್ ಇದ್ದರು. ಸಂಸ್ಥೆಯ ಅಧ್ಯಕ್ಷ ಆಬಿದ್ ಆಲಿ ಸ್ವಾಗತಿಸಿದರು. ಅನೂಪ್ ಕುಮಾರ್ ನಿರೂಪಿಸಿದರು. ರಮೇಶ್ ಕುಮಾರ್ ವಂದಿಸಿದರು.
ಪ್ರತಿಭೋತ್ಸವ ಉದ್ಘಾಟನೆ
ಕಾಪು: ಸುನ್ನಿ ಸ್ಟುಡೆಂಟ್ ಫೆಡರೇಶನ್ ಉಚ್ಚಿಲ ಸೆಕ್ಟರ್ ವತಿಯಿಂದ ಇತ್ತೀಚೆಗೆ ಕಾಪು ಪೊಲಿಪುವಿನಲ್ಲಿ ಆಯೋಜಿಸಲಾದ ಪ್ರತಿಭೋತ್ಸವ ಸ್ಪರ್ಧೆಯನ್ನು ಸ್ಥಳೀಯ ಖತೀಬ್ ಬದ್ರುದ್ದೀನ್ ಅಹ್ಸನಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಶಬೀರ್ ಸಖಾಫಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಝೀರ್ ಸಅದಿ ಬೆಳಪು, ಅಬ್ದುರ್ರಶೀದ್ ಸಖಾಫಿ ಮಜೂರು, ಕಾಪು ಜಮಾತ್ ಅಧ್ಯಕ್ಷ ಮುಹಮ್ಮದ್ ಅಲಿ, ಎಸ್.ವೈ.ಎಸ್. ಕಾಪು ಕಾರ್ಯದರ್ಶಿ ಹಾಜಿ ಮುಹಿಯ್ಯುದ್ದೀನ್ ಗುಡ್ವಿಲ್, ಶೌಖತ್ ಅಲಿ ಮತ್ತಿತರರು ಇದ್ದರು. ಪ್ರತಿಭೋತ್ಸವ ಸ್ಪರ್ಧೆಯಲ್ಲಿ ಪಕೀರ್ಣಕಟ್ಟೆ ಶಾಖೆ ಚಾಂಪಿಯನ್ ಶಿಪ್ ಗೆದ್ದುಕೊಂಡಿತು. ದ್ವಿತೀಯ ಉಚ್ಚಿಲ ಶಾಖೆ ಹಾಗೂ ತೃತೀಯ ಕಾಪು ಶಾಖೆಯು ಪಡೆದುಕೊಂಡಿತು. ಜೂನಿಯರ್ ವಿಭಾಗದಲ್ಲಿ ಜುನೈದ್ ಉಚ್ಚಿಲ, ಸೀನಿಯರ್ ವಿಭಾಗದಲ್ಲಿ ರಝೀನ್ ಕಾಪು, ಜನರಲ್ ವಿಭಾಗದಲ್ಲಿ ತೌಫೀಕ್ ಪಕೀರ್ಣಕಟ್ಟೆ ಚಾಂಪಿಯನ್ ಆಗಿ ಮೂಡಿಬಂದರು. ಎಸ್ಸೆಸ್ಸೆಫ್ ಸಂಚಾಲಕ ಆಸೀಫ್ ಕಾಪು ಸ್ವಾಗತಿಸಿದರು. ಮುಹಮ್ಮದ್ ಅಲಿ ಸಅದಿ ನಿರೂಪಿಸಿ, ಸ್ವಾದ್ವಿಕ್ ವಂದಿಸಿದರು.
ಸಾಲಿಗ್ರಾಮ: ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ
ಕುಂದಾಪುರ: ಇಲ್ಲಿನ ಸಾಲಿಗ್ರಾಮ ಶಾಖಾ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ಇತ್ತೀಚಿಗೆ ಜರುಗಿತು. ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಪಿ. ಸಾಧು ಮಾತನಾಡಿ, ಇಂದಿನ ಮಕ್ಕಳು ಮೊಬೈಲ್, ಕಂಪ್ಯೂಟರ್ಗಳಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ, ಅದರ ಬದಲು ಓದುವುದಕ್ಕೆ ಹೆಚ್ಚಿನ ಸಮಯ ನೀಡಿದರೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎಂದರು. ಈ ಸಂದರ್ಭದಲ್ಲಿ ಪಶು ವೈಧ್ಯಾಧಿಕಾರಿ ಡಾ. ರಾಜಶೇಖರ ಶ್ಯಾನುಭಾಗ ಇದ್ದರು.
ಬೆಳ್ಮಣ್: ವಿದ್ಯಾರ್ಥಿ ವೇತನ ವಿತರಣೆ
ಉಡುಪಿ: ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಶನ್ ಬೆಳ್ಮಣ್ ವಲಯದ ವತಿಯಿಂದ ಬೆಳ್ಮಣ್ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಇತ್ತೀಚೆಗೆ ಅಸೋಸಿಯೇಶನ್ನ ಸದಸ್ಯರ ಮಕ್ಕಳಿಗೆ ಉಚಿತ ವಿದ್ಯಾರ್ಥಿ ವೇತನವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ವಿಠಲ ಶೆಟ್ಟಿ, ಕಾಪು ಕ್ಷೇತ್ರ ಸಮಿತಿ ಅಧ್ಯಕ್ಷ ಯೋಗಾನಂದ, ಜಿಲ್ಲಾ ಸಮಿತಿ ಸದಸ್ಯ ಆನಂದ ಕೆ. ಪುತ್ರನ್, ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ರಮಾನಂದ ಅತ್ತೂರು, ವಲಯ ಕಾರ್ಯದರ್ಶಿ ದಿವ್ಯಾ, ವಸುಧಾ ಕಾಮತ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

