'ಭಗವದ್ಗೀತೆ ಜ್ಞಾನಾಮೃತ'
ಉಡುಪಿ: ಇಲ್ಲಿನ ಡಾ.ಟಿ.ಎಂ.ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಉಡುಪಿ ಸುತ್ತಮುತ್ತಲಿನ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಭಗವದ್ಗೀತೆ ಕಂಠಪಾಠ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಆದಿಉಡುಪಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಕೆ.ರಾಮದಾಸ ಭಟ್ ಮಾತನಾಡಿ, ಭಗವದ್ಗೀತೆ ಎಂಬುದು ಸಮುದ್ರದ ನೀರಿನಂತೆ ನಾವು ಎಷ್ಟು ಬೇಕಾದರೂ ಜ್ಞಾನದ ಅಮೃತವನ್ನು ತುಂಬಿಕೊಳ್ಳಲು ಸಾಧ್ಯ. ಹಾಗೆಯೇ ಮೋಕ್ಷದ ದಾರಿ ಕಂಡುಕೊಳ್ಳಲು ಅವಕಾಶವಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಮಹಾಬಲೇಶ್ವರ ರಾವ್, ಭಗವದ್ಗೀತೆ ಎಂಬುದು ಕಾಲದಿಂದ ಕಾಲಕ್ಕೆ ಪರಿಷ್ಕೃತವಾಗುತ್ತ ಬಂದಿರುವ ಗ್ರಂಥ. ಇದರ ವೈಶಿಷ್ಟ್ಯ ಮತ್ತು ದೌರ್ಬಲ್ಯ ಏನೆಂದರೆ ಅದನ್ನು ಯಾವ ಮಟ್ಟಕ್ಕೂ ಕೊಂಡೊಯ್ಯಬಹುದು. ಹಾಗೆಯೇ ಎಲ್ಲಿಯವರೆಗೂ ವಿಸ್ತರಿಸಬಹುದು. ಆದರೆ ಅಲ್ಲಿರುವ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ವಿವೇಚನೆ ನಮಗಿರಬೇಕು. ಅಪನಂಬಿಕೆಗಳನ್ನು ಬದಿಗೊತ್ತಿದರೆ ಭಗವದ್ಗೀತೆ ಒಂದು ಅದ್ಭುತವಾದ, ತಾತ್ವಿಕ, ಮನೋವೈಜ್ಞಾನಿಕವಾದ ಪ್ರಶ್ನೆಗಳನ್ನು ಎತ್ತುವ ಶ್ರೇಷ್ಠ ಗ್ರಂಥವಾಗಿದೆ ಎಂದರು.
ವಿವಿಧ ಪ್ರೌಢಶಾಲೆಗಳಿಂದ ಒಟ್ಟು 12 ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅವರಿಗೆ ಪ್ರಮಾಣಪತ್ರ ಹಾಗೂ ಭಗವದ್ಗೀತೆಯ ಪುಸ್ತಕವನ್ನು ವಿತರಿಸಲಾಯಿತು. ಉಪನ್ಯಾಸಕ ಜಿ.ರಾಘವೇಂದ್ರ ಹೇರ್ಳೆ ಸ್ವಾಗತಿಸಿದರು. ಉಷಾ ಎಚ್. ನಿರೂಪಿಸಿದರು. ಪ್ರೀತಿ ಎಸ್.ರಾವ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

