ಬಾಲಕಿ ಮೇಲೆ ನಿರಂತರ ಅತ್ಯಾಚಾರ
ಸಿದ್ದಾಪುರ: ಕಳೆದ ಮೂರು ವರ್ಷದಿಂದ ಬಾಲಕಿ ಮೇಲೆ ಅತ್ಯಾಚಾರವೆಸಗುತ್ತಿದ್ದ ಆರೋಪಿ ಶ್ರೀನಿವಾಸ (47) ಎಂಬಾತನನ್ನು ಸಿದ್ದಾಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಮೂಲತಃ ರಾಯಚೂರಿನ ಮಹಿಳೆಯೊಬ್ಬಳು 13 ವರ್ಷಗಳ ಹಿಂದೆ ಗಂಡನ ನಡವಳಿಕೆಯಿಂದ ಬೇಸೆತ್ತು, ಆತನನ್ನು ಬಿಟ್ಟು ತನ್ನ ಮಗಳದೊಂದಿಗೆ ಸಿದ್ದಾಪುರ ಸಮೀಪದ ಹಾಲುಗುಂದ ಗ್ರಾಮದ ಕಾಫಿ ತೋಟದಲ್ಲಿ ನೆಲೆಸಿದ್ದರು.
ಕಾನೂರು, ಚೇರಳ, ಶ್ರೀಮಂಗಲ ಹೀಗೆ ವಿವಿಧೆಡೆ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತ ಜೀವನ ನಿರ್ವಹಿಸುತ್ತಿದ್ದ ಈಕೆಗೆ ತಮಿಳುನಾಡಿನ ಮಧುರೈ ನಿವಾಸಿ ಶ್ರೀನಿವಾಸ ಎಂಬಾತನ ಪರಿಚಯವಾಗಿತ್ತು. ಈಕೆ ಮತ್ತು ಮಗಳಿಗೆ ಆಶ್ರಯ ನೀಡಿ, ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿಕೊಂಡಿದ್ದ ಎನ್ನಲಾಗಿದೆ. ಶ್ರೀನಿವಾಸ್ಗೆ ಈ ಹಿಂದೆ ತಮಿಳುನಾಡಿನಲ್ಲಿ ಮದುವೆಯಾಗಿ ಎರಡು ಮಕ್ಕಳಿದ್ದು, ಅವರನ್ನು ಅಲ್ಲೇ ಬಿಟ್ಟು ಬಂದಿದ್ದ.
ಶ್ರೀನಿವಾಸ ಮತ್ತು ರಾಯಚೂರಿನ ಮಹಿಳೆ ಹಾಲುಗುಂದ ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಒಂದೇ ಮನೆಯಲ್ಲಿ ಒಂದು ಕುಟುಂಬದವರಂತೆ ವಾಸವಾಗಿದ್ದರು.
ಸುಮಾರು ನಾಲ್ಕು ವರ್ಷದಿಂದ ಇವರಿಬ್ಬರ ಸಂಬಂಧದಲ್ಲಿ ಬಿರುಕು ಉಂಟಾಗಿತ್ತು. ಶ್ರೀನಿವಾಸ ತನ್ನ ಸಾಕು ಮಗಳಂತಿದ್ದ 15 ವರ್ಷದ ಬಾಲಕಿ ಮೇಲೆ ಕಳೆದ ಮೂರು ವರ್ಷಗಳಿಂದ ಲೈಂಗಿಕ ದೌರ್ಜನ್ಯ ವೆಸಗಿದ್ದ. ಮಾತ್ರವಲ್ಲದೆ ಈ ವಿಷಯವನ್ನು ಹೊರಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದ.
ಮಗಳ ಮೇಲೆ ಆಶ್ರಯದಾತನೇ ಅತ್ಯಾಚಾರವೆಸಗುವುದನ್ನು ನೋಡಿಯೂ ತಾಯಿ ಯಾರಲ್ಲೂ ಹೇಳಲಾಗದೆ ಸುಮ್ಮನಿದ್ದಳು. ಇತ್ತೀಚೆಗಷ್ಟೇ ಬಾಲಕಿ ತನ್ನ ಶಾಲೆಯಲ್ಲಿ ಸ್ನೇಹಿತೆರೆದುರು ಈ ವಿಷಯ ಬಹಿರಂಗ ಪಡಿಸಿದ್ದಳು.
ಒಂದು ವಾರದ ಹಿಂದೆಯಷ್ಟೇ ತಾಯಿ- ಮಗಳು ಮನೆ ಬಿಟ್ಟು ಬಂದು ಶ್ರೀಮಂಗಲ- ಚೆಟ್ಟಳ್ಳಿಯಲ್ಲಿ ವಾಸವಾಗಿದ್ದಾರೆ. ಅಲ್ಲಿ ಪರಿಚಯವಾದ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಗಣೇಶ್ ಎಂಬವರೊಂದಿಗೆ ತಾಯಿ ಈ ಎಲ್ಲಾ ವಿಷಯ ತಿಳಿಸಿ, ತಮಗೆ ರಕ್ಷಣೆ ನೀಡುವಂತೆ ಬೇಡಿಕೊಂಡರು. ತಾಯಿ- ಮಗಳಲ್ಲಿ ಧೈರ್ಯ ತುಂಬಿದ ಗಣೇಶ್, ಮಹಿಳೆಯೊಂದಿಗೆ ಸಿದ್ದಾಪುರಕ್ಕೆ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ದೂರಿನನ್ವಯ ಸಿದ್ದಾಪುರ ಪೊಲೀಸರು ಆರೋಪಿ ಶ್ರೀನಿವಾಸನನ್ನು ಬಂಧಿಸಿರುವುದಾಗಿ ಸರ್ಕಲ್ ಇನ್ಸ್ಪೆಕ್ಟರ್ ಪ್ರಕಾಶ್ ಗೌಡ ತಿಳಿಸಿದ್ದಾರೆ.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

