ಕಡಿಯಾಳಿ: ಶೇ.100 ಮತದಾನ ಅಭಿಯಾನ
ಉಡುಪಿ: ಇಲ್ಲಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ಯೂತ್ ಎಗೈನ್ಸ್ಟ್ ಕರಪ್ಷನ್ ವತಿಯಿಂದ ಶೇ.100 ಮತದಾನ ಅಭಿಯಾನ ಕಾರ್ಯಕ್ರಮ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಕಾತ್ಯಾಯನಿ ಮಂಟಪದಲ್ಲಿ ಶನಿವಾರ ನಡೆಯಿತು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಡಾ. ಶಿವಾನಂದ ನಾಯಕ್, ರಾಜಕಾರಣಿಗಳ ಮೇಲೆ ಜನರು ಇಟ್ಟಿರುವ ನಂಬಿಕೆ ಸಂಪೂರ್ಣವಾಗಿ ಕುಸಿದು ಹೋಗಿರುವ ಪರಿಣಾಮ ಜನರು ಮತದಾನ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಮತದಾನ ಮಾಡುವುದರಿಂದ ಸಮಸ್ಯೆಗಳು ಬಗೆ ಹರಿಯಲಾರವು ಎಂಬ ಭಾವನೆ ಜನರ ಮನದೊಳಗೆ ಮೂಡಿದೆ. ಸಾರ್ವಜನಿಕರಲ್ಲಿ ಮತದಾನದ ಅರಿವು ಮೂಡಿಸಿ ಮತದಾನದ ಪ್ರಾಮುಖ್ಯತೆ ಬಗ್ಗೆ ತಿಳಿ ಹೇಳುವಲ್ಲಿ ಇಂದಿನ ಯುವಜನಾಂಗ ಮುಂದೆ ಬರಬೇಕು ಎಂದರು.
ಮುಖ್ಯ ಅತಿಥಿ, ವಕೀಲ ಸೂರತ್ ಕುಮಾರ್ ಮಾತನಾಡಿ, ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಮತದಾರರು ಮತದಾನ ಮಾಡಬೇಕು. ಕೇವಲ ಹಣದ ಆಸೆಗಾಗಿ ಪ್ರಜೆಗಳು ಮತ ಮಾರಾಟ ಮಾಡಿಕೊಂಡರೆ ಉತ್ತಮ ನಾಯಕ ಅರಿಸಿ ಬಾರದೆ ದೇಶದ ಸಮಸ್ಯೆಗಳು ಕೇವಲ ಸಮಸ್ಯೆಗಳಾಗಿಯೇ ಉಳಿದುಕೊಳ್ಳುತ್ತವೆ. ಆದ್ದರಿಂದ ಪ್ರಥಮವಾಗಿ ನಮ್ಮಲ್ಲಿ ಬದಲಾವಣೆಯನ್ನು ತಂದುಕೊಳ್ಳಬೇಕು. ಆಸೆ, ಆಮಿಷಗಳಿಗೆ ಬಲಿಯಾಗಿ ಪವಿತ್ರ ಮತವನ್ನು ಮಾರಾಟ ಮಾಡಿಕೊಳ್ಳದೆ ಆಲೋಚಿಸಿ ಅರ್ಹ ವ್ಯಕ್ತಿಗೆ ಮತದಾನ ಮಾಡುವ ಮೂಲಕ ಪ್ರಜಾತಂತ್ರ ವ್ಯವಸ್ಥೆ ಬಲಗೊಳಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಸಂಚಾಲಕ ಶಶಿರ ಎಚ್.ಪಿ. ನಿರೂಪಿಸಿದರು. ನಗರ ಕಾರ್ಯದರ್ಶಿ ಅಭಿಷೇಕ್ ಸ್ವಾಗತಿಸಿದರು. ನಗರ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ವಂದಿಸಿದರು. ಬಳಿಕ ಸೂರತ್ ಕುಮಾರ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

