ಪಟ್ಲ: ಇಂದಿನಿಂದ 'ರಂಗ ಹಬ್ಬ'
ಮಂಗಳೂರು: ಉಡುಪಿ ಜಿಲ್ಲೆ ಪಟ್ಲದ ಭೂಮಿಗೀತ ಸಾಂಸ್ಕೃತಿಕ ವೇದಿಕೆ ವತಿಯಿಂದ 2ನೇ ವರ್ಷದ ರಂಗ ಸಂಭ್ರಮ 'ರಂಗ ಹಬ್ಬ- 2014' ಫೆ.7ರಿಂದ 9ರವರೆಗೆ ಪಟ್ಲ ಯು.ಎಸ್. ನಾಯಕ್ ಪ್ರೌಢಶಾಲೆ ಬಯಲುರಂಗ ಮಂಟಪದಲ್ಲಿ ನಡೆಯಲಿದೆ.
ಫೆ.7ರಂದು ಸಂಜೆ 7 ಗಂಟೆಗೆ ಚಿಂತಕ ಪ್ರೊ.ಕೆ. ಫಣಿರಾಜ್ ರಂಗಹಬ್ಬ ಉದ್ಘಾಟಿಸಲಿದ್ದಾರೆ. ಬಳಿಕ ಮಣಿಪಾಲ ಸಂಗಮ ಕಲಾವಿದೆರ್ ತಂಡದಿಂದ ಪ್ರಸಾದ್ ರಾವ್ ಮಟ್ಟು ನಿರ್ದೇಶನದ 'ಮೋಹನದಾಸೆ' ತುಳು ನಾಟಕ ಪ್ರದರ್ಶನ ನಡೆಯಲಿದೆ.
8ರಂದು ಸಂಜೆ 7ಕ್ಕೆ ರಂಗ ವಿಮರ್ಶಕ ಜಿ.ಪಿ. ಪ್ರಭಾಕರ ತುಮರಿ ಅವರಿಂದ ಉಪನ್ಯಾಸ ನಡೆಯಲಿದ್ದು, ಕೋಟೆ ಗ್ರಾಪಂ ಅಧ್ಯಕ್ಷ ಪ್ರಶಾಂತ್ ಜತ್ತನ್ನ, ಮೋಹನದಾಸ ನಾಯಕ್ ಪರ್ಕಳ ಭಾಗವಹಿಸಲಿದ್ದಾರೆ. ಬಳಿಕ ಹಾರಾಡಿಯ ಭೂಮಿಕಾ ತಂಡದಿಂದ ಬಿ.ಎಸ್. ರಾಮ್ ಶೆಟ್ಟಿ ನಿರ್ದೇಶನದಲ್ಲಿ 'ಅಗ್ನಿಲೋಕ' ನಾಟಕ ಪ್ರದರ್ಶನವಿದೆ.
9ರಂದು ಸಂಜೆ 7ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ರಂಗನಿರ್ದೇಶಕ, ಸಾಹಿತಿ ಐ.ಕೆ. ಬೊಳುವಾರು ಆಶಯ ಭಾಷಣ ಮಾಡಲಿದ್ದಾರೆ. ಬಳಿಕ ಪಟ್ಲ ಭೂಮಿಗೀತ ಸಾಂಸ್ಕೃತಿಕ ವೇದಿಕೆ ತಂಡದಿಂದ ಸಂತೋಷ್ ನಾಯಕ್ ಪಟ್ಲ ನಿರ್ದೇಶನದಲ್ಲಿ 'ವಿನಶನ' ತುಳು ನಾಟಕ ಪ್ರದರ್ಶನ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

