ಮಿಯ್ಯಾರು ಜೋಡುಕರೆ ಕಂಬಳ
ಕಾರ್ಕಳ: ಇಲ್ಲಿನ ಕಂಬಳ ಸಮಿತಿ, ನವೋದಯ ವಿಕಾಸ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಮಿಯ್ಯಾರು ಲವಕುಶ ಜೋಡುಕರೆ ಕಂಬಳ ಮೈದಾನದಲ್ಲಿ ಲವಕುಶ ಜೋಡುಕರೆ ಕಂಬಳ ಶನಿವಾರ ಆರಂಭಗೊಂಡಿತು. 150ಕ್ಕೂ ಅಧಿಕ ಜೋಡಿ ಕೋಣಗಳು ಪಾಲ್ಗೊಂಡಿದ್ದವು.
ಫಲಿತಾಂಶ: ಕನೆ ಹಲಗೆ- ಬಾರ್ಕೂರು ಶಾಂತಾರಾಮ ಶೆಟ್ಟಿ, ಹಗ್ಗ ಹಿರಿಯ- ಮೂಡುಬಿದಿರೆ ಕರಿಂಜೆ ವಿಶ್ವನಾಥ ಶೆಟ್ಟಿ ಪ್ರಥಮ, ಕೊಳಕ್ಕೆ ಇರ್ವತ್ತೂರು ಭಾಸ್ಕರ ಎಸ್. ಕೋಟ್ಯಾನ್ ದ್ವಿತೀಯ, ಹಗ್ಗ ಕಿರಿಯ- ಉಡುಪಿ ಹಿರೇಬೆಟ್ಟು ದೀಕ್ಷಿತ್ ಕುಮಾರ್ ಶಿವ ಪಾಣಾರ ಪ್ರಥಮ, ನಂದಳಿಕೆ ನವ್ಯತಾ ಶ್ರೀಕಾಂತ್ ಭಟ್ ದ್ವಿತೀಯ, ಅಡ್ಡ ಹಲಗೆ- ಮಾಳ ಕರಜನ ಕಾರ್ತಿಕ್ ಭಾಸ್ಕರ ಆಚಾರ್ಯ ಪ್ರಥಮ, ಮಡಂತ್ಯಾರು ಮಾಲಾಡಿ ದ್ವಿತೀಯ, ನೇಗಿಲು ಹಿರಿಯ- ಬೋಳದಗುತ್ತು ಸತೀಶ್ ಶೆಟ್ಟಿ ಪ್ರಥಮ, ಇರುವೈಲು ಪಾಂಡಿಲು ಬಾಳ ಪೂಜಾರಿ ದ್ವಿತೀಯ,ನೇಗಿಲು ಕಿರಿಯ- ಕಾಂತಾವರ ಬಾಂದೊಟ್ಟು ಜಗದೀಶ ಕೆ. ಪೂಜಾರಿ ಪ್ರಥಮ, ಕಾಂತಾವರ ಬಾಂದೊಟ್ಟು ಜಗದೀಶ ಕೆ. ಪೂಜಾರಿ ದ್ವಿತೀಯ ಸ್ಥಾನಗಳಿಸಿದ್ದಾರೆ.
ರಾಜ್ಯಮಟ್ಟದ ಯುವಜನ ಮೇಳ ಎಲ್ಲೂರಿನಲ್ಲಿ
ಮಣಿಪಾಲ: ಉಡುಪಿ ತಾಲೂಕಿನ ಪಡುಬಿದ್ರಿ ಸಮೀಪದ ಎಲ್ಲೂರಿನಲ್ಲಿ ಈ ಸಾಲಿನ ರಾಜ್ಯಮಟ್ಟದ ಯುವಜನ ಮೇಳ ನಡೆಸಲು ತೀರ್ಮಾನಿಸಲಾಗಿದ್ದು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ನಡೆಯಿತು.
ಈ ಮೇಳದ ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮುಖ್ಯಸ್ಥ ಡಾ. ಮೋಹನ್ ಆಳ್ವ ನಿಯುಕ್ತಿಗೊಂಡಿದ್ದಾರೆ. ಮೇಳದ ಸ್ಪರ್ಧೆಗಳ ತೀರ್ಪಿನಲ್ಲಿ ಯಾವುದೇ ಗೊಂದಲಗಳಾಗಂತೆ ಉತ್ತಮ ತೀರ್ಪುಗಾರರನ್ನು ನಿಯೋಜಿಸಬೇಕು, ಮೇಳ ನಡೆಯುವ ಸಭಾಂಗಣಕ್ಕೆ ವಿದ್ಯುತ್, ನೀರಿನ ವ್ಯವಸ್ಥೆ ಮತ್ತು ವೇದಿಕೆಯ ಸಿದ್ಧತೆಗಳನ್ನು ನಡೆಸಬೇಕು ಎಂದು ಅವರು ಹೇಳಿದರು. ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎ. ಪ್ರಭಾಕರ ಶರ್ಮ, ನಗರಸಭೆ ಅಧ್ಯಕ್ಷ ಪಿ. ಯುವರಾಜ್ ಹಾಗೂ ವಿವಿಧ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಯುವಕ ಸಂಘಗಳ ಪ್ರತಿನಿಧಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

