ಉತ್ತರ ಕನ್ನಡ

ಸಾಹಿತ್ಯ, ಸಂಸ್ಕೃತಿ ಮೇಲೆ ಇಂಗ್ಲಿಷ್ ಭಾಷಾ ಪ್ರಭಾವ

Published On :

ಯಲ್ಲಾಪುರ: ಇಂದು ಎಲ್ಲ ಹಂತದಲ್ಲಿ ಇಂಗ್ಲಿಷ್ ಪ್ರಭಾವ ಹೆಚ್ಚುತ್ತಿದ್ದು, ಬರಹ, ಸಾಹಿತ್ಯ, ಸಂಸ್ಕೃತಿ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಆದ್ದರಿಂದ ಕಸಾಪನಂತಹ ಸಂಸ್ಥೆ ಮೇಲೆ ಮಹತ್ವದ ಹೊಣೆ ಇದೆ ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪುಟ್ಟು ಕುಲಕರ್ಣಿ ಹೇಳಿದರು.
ಅವರು ಗುರುವಾರ ಸಂಜೆ ವೈಟಿಎಸ್‌ಎಸ್ ಸಭಾಭವನದಲ್ಲಿ ತಾಲೂಕು ನೂತನ ಕಸಾಪ ಪದಾಧಿಕಾರಿಗಳಿಗೆ ಸೇವಾ ದೀಕ್ಷೆ ನೀಡಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯ ಸೌಧ ಕಟ್ಟಲು ಸನ್ನದ್ಧರಾಗಿ: ಅಧ್ಯಕ್ಷತೆ ವಹಿಸಿದ್ದ ನೂತನ ಕಸಾಪ ಅಧ್ಯಕ್ಷ ಶ್ರೀರಂಗ ಕಟ್ಟಿ ಸೇವಾ ದೀಕ್ಷೆ ಪಡೆದು, ಸಾಧನೆ ಸುಲಭವಲ್ಲ. ನಿರಂತರ ಪರಿಶ್ರಮ ಬೇಕು. ಫಲಾಪೇಕ್ಷೆಯಿಲ್ಲದೇ ಕಾರ್ಯ ಮಾಡುವವನೇ ಕರ್ಮಯೋಗಿ. ಗುಬ್ಬಿ ನಿರಂತರವಾಗಿ ಕಡ್ಡಿಗಳನ್ನು ಗೂಡಿಗಾಗಿ ಸಂಗ್ರಹಿಸಿದಂತೆ ತಾಲೂಕಿನ ಸಮಸ್ತ ಕನ್ನಡಾಭಿಮಾನಿಗಳೆಲ್ಲಾ ಸೇರಿ ಈ ಸಾಹಿತ್ಯ ಸೌಧ ಕಟ್ಟುವುದಕ್ಕೆ ಸನ್ನದ್ಧರಾಗಿದ್ದೇವೆ ಎಂದರು. ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಡಿ. ಶಂಕರ ಭಟ್ಟ ಮಾತನಾಡಿ, ಸಾಹಿತ್ಯ ಸೃಜನಶೀಲವಾಗಿರಬೇಕು. ಸಾಹಿತ್ಯದ ಸಂಘಟನೆ ಸಾಹಿತಿಗಳಿಂದಲೇ ಆಗುತ್ತದೆನ್ನಲಾಗದು. ಎಲ್ಲರ ಸಹಕಾರ ಅಗತ್ಯ ಎಂದರು. ಜಿಲ್ಲಾ ಕಸಾಪ ಕೋಶಾಧ್ಯಕ್ಷ ಬೀರಣ್ಣ ನಾಯಕ ಮೊಗಟಾ, ನಿಕಟಪೂರ್ವ ಅಧ್ಯಕ್ಷ ಆರ್. ಎಂ. ಭಟ್ಟ ಬಾಳ್ಕಲ್ ಸಾಂದರ್ಭಿಕ ಮಾತನಾಡಿದರು.
ಕಸಾಪ ನೂತನ ಘಟಕದ ಕೋಶಾಧ್ಯಕ್ಷ ದತ್ತಾ ರೇವಣಕರ್, ಗೌ. ಕಾರ್ಯದರ್ಶಿಗಳಾದ ಬಿ.ಜಿ. ಹೆಗಡೆ ಗೇರಾಳ, ಮಹಾರುದ್ರಪ್ಪ ನೆಲ್ಲಿಗಣಿ, ಜಿಲ್ಲಾ ಸಮಿತಿ ಸದಸ್ಯರಾದ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ನಾರಾಯಣ ನಾಯಕ ಉಪಸ್ಥಿತರಿದ್ದರು. ವಸುಶ್ರೀ ಹಳೆಮನೆ ಹಾಗೂ ಸುಧಾ ಭಟ್ಟರ ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶಿಕ್ಷಕ ಜಿ.ಎಸ್. ಗಾಂವ್ಕರ್ ಸ್ವಾಗತಿಸಿ, ಪರಿಚಯಿಸಿದರು. ಫ.ಗ. ಭಟ್ಟ ಗುಡ್ಡೆ ಪ್ರಾಸ್ತಾವಿಕ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.