ಹಾಡಲಾರದವನಿಗೆ ಮೈಕ್ ಡೊಂಕು
ನಮ್ಮ ಸೋಲಿಗೆ ಕಾರಣವೆಂದು ನಾವು ಆರೋಪಿಸುವ ವಿಷಯಗಳು
ನಮ್ಮ ದೌರ್ಬಲ್ಯವನ್ನು ತಾತ್ಕಾಲಿಕವಾಗಿ ಮುಚ್ಚುವ ಪರದೆ
ನೆಪ ಹೇಳಿದ ಪಾಪ ಜಪದಿಂದ ಪರಿಹಾರ
ಕೈಲಾಗದವನ ಆರೋಪ ಪಟ್ಟಿ
ನಡೆಯಲಾಗದ ಕುಡುಕನಿಗೆ ರಸ್ತೆಯೆಲ್ಲ ಹೊಂಡ
ಯಾವುದೇ ಪ್ರಶ್ನೆಗೆ ಸರಿಯಾದ ಉತ್ತರ ಹೊಳೆಯದಿದ್ದಾಗ ಹೊಳೆಯುವ ಉತ್ತರ
ನಿಮ್ಮನ್ನು ದೂರವಿಡಲು ಬಯಸುವವರು ನೀಡುವ ದೂರು
ಹುಡುಗಿಯರ ಬಾಯಲ್ಲಿ ನಲಿಯುವ ಮುತ್ತು
ಎಲ್ಲವೂ ಮರೆತಾಗ ನೆನಪಾಗೋದು ಇದೇ
ಶಾಂತಿ
ಕ್ರಾಂತಿಯಿಂದ ದೊರೆಯುವುದೆಂಬ ಭ್ರಾಂತಿಗೆ ತುತ್ತಾಗಿರುವುದು ಇದೇ
ರಕ್ತ ಕ್ರಾಂತಿ ಮತ್ತು ನೆತ್ತರು ವಾಂತಿಗೆ ಪರಿಹಾರವಿದು
ಯುದ್ಧದ ಪರಮೋದ್ದೇಶ
ಪಾಕಿಸ್ತಾನ ಏನೇ ದ್ರೋಹ ಮಾಡಿದರೂ ಭಾರತ ಜಪಿಸುವ ಮಂತ್ರ
ಶಾಂತಿ ಮಂತ್ರ ಜಪಿಸಿದರೆ ಏನೂ ಉದುರದೇ ಇರಬಹುದ, ಆದರೆ ಭಾರತೀಯ ಸೈನಿಕರ ತಲೆಯಂತೂ ಉರುಳುತ್ತದೆ
-ವಿಶ್ವನಾಥ ಸುಂಕಸಾಳ
vishwasunkasal@yahoo.com