ಇಂದ್ರಲೋಕಕ್ಕೊಂದು ಪಾಟೀ ಸವಾಲು ಈ 'ಚಂದ್ರಲೋಕ'
ಅಜಾತ ಶತ್ರು(ಜೋತಿಷ ಶಾಸ್ತ್ರದ ಪ್ರಕಾರ ಈತನಿಗೆ ಶತ್ರುಗಳೇ ಇಲ್ಲ)
ಚೌತಿ ದಿನ ನೋಡಿದರೆ ಅಪವಾದ ತರುತ್ತಾನೆ ಎಂಬ ಅಪವಾದ ಈತನಿಗಿದೆ
ಇವನ ಲೋಕದಲ್ಲಿ ಯಾರೂ ದೊಡ್ಡದಾಗಿ ಉಸಿರೆತ್ತಲೂ ಆಗದು
ನೀರು ಮತ್ತು ವಾತ ಎರಡೂ ಇಲ್ಲದ ನಿರ್ವಾತ ಪ್ರದೇಶ
ಇಲ್ಲಿ ಗಾಳಿಯಿಲ್ಲವಾದ್ದರಿಂದ ಶಬ್ದವೂ ಇಲ್ಲ. ಅಂದಮೇಲೆ ಭಾಷಣಗಳೂ ಇಲ್ಲ....ವಾವ್!
ಇಲ್ಲಿ ನೀರಿಲ್ಲ. ನೀವೇ ಬಿಟ್ಟರೂ ಅದು ನೀರಾಗಿ ಉಳಿಯುವುದಿಲ್ಲ
ಇದು ಬೋಳುಗುಡ್ಡೆಯೇ ಆಗಿರುವುದರಿಂದ ಮರ ಕಡಿದು ಬೋಳು ಮಾಡುವ ಶ್ರಮ ತಪ್ಪಿತು ಮನುಷ್ಯನಿಗೆ
ಮೊದಲೇ ಹೊಂಡಗಳಿರುವುದರಿಂದ ರಸ್ತೆ ನಿರ್ಮಿಸಬೇಕಾದ ಅಗತ್ಯವೂ ಇಲ್ಲ
ಸತ್ತವರೆಲ್ಲ ಚಂದ್ರಲೋಕಕ್ಕೇ ಹೋಗುತ್ತಾರೆಂದು ಪುರಾಣ ಹೇಳುತ್ತದೆ. ಹಾಗಾಗಿ ಗಡಿಬಿಡಿ ಬೇಡಬಿಡಿ
ಅಮಾವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ರೂಪ ಬದಲಿಸುವವ
ವಿಶ್ವನಾಥ ಸುಂಕಸಾಳ