ಸಂಪಾದಕೀಯ

ಇಲ್ಲೊಬ್ಬಳು ಮಾತಿನಲ್ಲೇ ಮಂಟಪ ಕಟ್ಟುತ್ತಾಳೆ...

Published On :

ಫ್ಯಾಷನ್ ಡಿಸೈನರ್ ಮಧು, 9945737427
ಆ ಚೆಲುವೆಗೆ ನಿದ್ದೆಯಲ್ಲಿ ಸಿನಿಮಾ ಹಾಡುಗಳನ್ನು ಹೇಳುವ ಅಭ್ಯಾಸ ಇದೆಯಂತೆ. ಅವಳನ್ನು ಮದುವೆ ಮಾಡಿಕೊಳ್ಳಲೋ ಬೇಡವೋ?
ನಿದ್ರೆ ಮಾಡೋಕೆ ಬಿಡದೇ ಇದ್ರೆ ಆಯ್ತು!

ರವಿಕುಮಾರ ಜಿ. ಬಿ. 9449669897
ಚುನಾವಣೆ ಹತ್ತಿರ ಬರುತ್ತಿದ್ದಂತೆ ಮಂತ್ರಿಗಳು ಶಂಖು ಸ್ಥಾಪನೆಗಳನ್ನು ಬಿಡುವಿಲ್ಲದೆ ಮಾಡುತ್ತಿದ್ದಾರೇಕೆ?
ಹಾಗಾದರೂ ಜನರ ಮನಸ್ಸಿನಲ್ಲಿ ಉಳಿಯದಿದ್ದರೆ ಆಮೇಲೆ ಶಂಖ ಊದುತ್ತ ಕೂರಬೇಕಲ್ಲ!

ಜಿ. ಬಿ. ಪ್ರವೀಣಕುಮಾರ, ರಾಯಚೂರು 9972354596
ಇಲ್ಲೊಬ್ಬಳು ಮಾತಿನಲ್ಲೇ ಮಂಟಪ ಕಟ್ಟುತ್ತಾಳೆ...
ಆ ಮಂಟಪದಲ್ಲಿ ತಲೆಬಗ್ಗಿಸಿ ಕೂರುವುದಕ್ಕೆ ನಿಮ್ಮಂಥವರು ಸಿದ್ಧರಿದ್ದೀರಿ ಎಂದು ಆಕೆಗೆ ಖಾತ್ರಿಯಾಗಿದೆ!

ಓಂ ಚೆನ್ನೇಶ್ ಅರಬಿಳಚಿ ಕ್ಯಾಂಪ್ 9900739725
ನಮಗೆ ಬೀಳುವ ಕನಸುಗಳೆಲ್ಲ ನಿಜವಾಗುವ ಹಾಗಿದ್ದರೆ ಹೇಗಿರ್ತಾ ಇತ್ತು?
ಶಾಶ್ವತ ನಿದ್ರೆಗೆ ಜಾರುವಂಥ ಪರಿಣಾಮವಾದರೆ ಆಶ್ಚರ್ಯವೇನಿಲ್ಲ.

ತ. ಮ. ದೇವಾನಂದ, ತರೀಕೆರೆ 9844570546
ಮಠಕ್ಕೂ ಮನೆಗೂ ಏನು ಸಂಬಂಧ?
ಮಠ-ಮನೆಗಳ ಸಂಬಂಧ ತೀವ್ರಗೊಂಡಾಗಲೇ ಹಗರಣಗಳು ಹುಟ್ಟೋದು!

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.