ಸಂಪಾದಕೀಯ

ಭಾರತದ ವಿಚಿತ್ರ ವ್ಯವಹಾರ

Published On :

ವಾಣಿಜ್ಯೋದ್ಯಮದ ವ್ಯವಹಾರಗಳಲ್ಲಿ, ಭಾರತದ ನೀತಿ ನಿರೂಪಣೆಗೂ, ಅದನ್ನು ಜಾರಿಗೆ ತರುವ ವಿಧಾನಕ್ಕೂ ಇರುವ ವ್ಯತ್ಯಾಸದ ಪರಿಣಾಮವಾಗಿ ಜಾಗತಿಕ ಸಂಸ್ಥೆಗಳಿಗೆ ಭಾರತದ ಮಾತಿನಲ್ಲಿ ವಿಶ್ವಾಸ ಕುಗ್ಗಿದೆ ಎಂದು ಖ್ಯಾತ ನಾಮ ಉದ್ಯಮಿ ರತನ್ ಟಾಟಾ ಹೇಳಿರುವುದನ್ನು ಸರ್ಕಾರ, ಸಾರ್ವಜನಿಕರು ಗಂಭೀರವಾಗಿ ಪರಿಗಣಿಸಬೇಕು.
ನೀತಿ ನಿರೂಪಣೆಯ ವಿಚಾರದಲ್ಲಿ ಟಾಟಾ ಅವರದ್ದು ಯಾವ ತಕರಾರೂ ಇಲ್ಲ. ಸರ್ಕಾರಕ್ಕೆ ತನಗೆ ಬೇಕಾದ ರೀತಿಯಲ್ಲಿ ನೀತಿಯನ್ನು ನಿರೂಪಿಸುವ ಹಕ್ಕಿದೆ. ಆದರೆ ಒಮ್ಮೆ ನೀತಿಯನ್ನು ಜಾಗತಿಕ ವೇದಿಕೆಗಳಲ್ಲಿ ಪ್ರಕಟಿಸಿದ ಅನಂತರ ಅದನ್ನು ಬದಲಾಯಿಸುವ ಸಂಪ್ರದಾಯ ಒಳ್ಳೆಯದಲ್ಲ. ಈಗ ಭಾರತದಲ್ಲಿ ಆಗಿರುವುದು ಅದೇ ರೀತಿ ಎಂದೂ ಅವರು ಹೇಳಿದ್ದಾರೆ. ಟಾಟಾ ಅವರಿಗೆ ಇಂತಹ ವಿಚಾರಗಳಲ್ಲಿ ಇರುವ ಮಾಹಿತಿ ಹಾಗೂ ಅನುಭವ ನಿಜವಾಗಲೂ ಪ್ರಶ್ನಾತೀತವಾದ ಸ್ವರೂಪದ್ದು.
ಅವರು ತಮ್ಮ ಹೇಳಿಕೆಯಲ್ಲಿ, ಸರ್ಕಾರದ ಔದ್ಯಮಿಕ ನೀತಿ ಜಾರಿಗೆ ಬರುವ ಹಂತದಲ್ಲಿ, ಹಲವಾರು ಬಗೆಯ ಆಸಕ್ತ ಹಿತಗಳ ಒತ್ತಡಕ್ಕೆ ಮಣಿದು, ಪ್ರಕಟಿತ ನೀತಿಯೇ ಕುರೂಪವಾಗುವಂತಹ ಸಂದರ್ಭಗಳೂ ಇರಬಹುದು. ಎನ್ನುವ ಅರ್ಥ ಬರುವ ರೀತಿಯಲ್ಲಿ ಪದಗಳನ್ನು ಬಳಸಿದ್ದಾರೆ.
ಭಾರತದಲ್ಲಿ ನೀತಿ ನಿರೂಪಣೆಯಲ್ಲಿ ಸ್ಪಷ್ಟತೆಯನ್ನು ಅಳವಡಿಸುವುದಕ್ಕೆ ಸೂಕ್ತ ರೀತಿಯ ದಾಖಲೆಗಳನ್ನು ಸಿದ್ಧಪಡಿಸುವುದಕ್ಕೆ ಅಗತ್ಯವಾದ ಕೌಶಲ್ಯ ಇದೆ. ಆದರೆ ಆಸಕ್ತ ಹಿತಗಳ ಒತ್ತಡಕ್ಕೆ ಮಣಿಯಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವಂತಿದೆ. ಔದ್ಯಮೀಕರಣಕ್ಕೆ ವಿದೇಶಿ ನೆರವನ್ನು ಅಪೇಕ್ಷಿಸುತ್ತಿರುವ ಸಮಯದಲ್ಲಿ ಸರ್ಕಾರದ ಇಂತಹ ವರ್ತನೆ ಅಸಹನೀಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.