ಬೇರೆಯವರ ಹಣೆಬರಹವನ್ನು ಬರೆಯೋದೇ ಇವನ ಹಣೆಬರಹ
ಇವನಿಂದ ನಿದ್ರಾವಸ್ಥೆಯಲ್ಲಿ ಹಣೆಬರಹ ಬರೆಸಿಕೊಂಡವರೆಲ್ಲ ಇಂದು ನೈಟ್ ಡ್ಯೂಟಿಯಲ್ಲಿದ್ದಾರೆ
ಇವನೊಂಥರ ಡಾಕ್ಟರ್ ಇದ್ದಹಾಗೆ. ಇವನು ಬರೆದದ್ದನ್ನು ಯಾರಿಂದಲೂ ಓದಲು ಸಾಧ್ಯವಿಲ್ಲ
ಇವನ ಕೈ ಬರಹವೆಲ್ಲ ಬ್ರಹ್ಮಲಿಪಿಯೇ
ಹುಟ್ಟು ಸಾವುಗಳಿಗೆಲ್ಲ ಮುಹೂರ್ತ ಫಿಕ್ಸ್ ಮಾಡುವಾತ
ನಮ್ಮ ನಾಲ್ಕು ಮುಖದ ರಾಷ್ಟ್ರ ಲಾಂಛನಕ್ಕೆ ನಾಲ್ಕು ಮುಖದ ಬ್ರಹ್ಮನೇ ಸ್ಫೂರ್ತಿ
ಜನಸಂಖ್ಯಾ ಸ್ಫೋಟಕ್ಕೆ ಮುಖ್ಯ ಕಾರಣನೀತ
ಪುಲ್ಲಿಂಗವಾದರೆ ಸಗುಣ. ನಪುಂಸಕ ಬ್ರಹ್ಮನಾದರೆ ನಿರ್ಗುಣ
ಹಮ್ಮು ತೊರೆದವಗೆ ಬೊಮ್ಮನೊಲಿವನು
ಇವನು ದೇವರು, ಆದರೂ ಪೂಜೆ ಮಾಡುವವರಿಲ್ಲ
-ವಿಶ್ವನಾಥ ಸುಂಕಸಾಳ
vishwasunkasal@yahoo.com