ನಾಲ್ಕು ಗೆಳೆಯರು ಬಾರ್‌ನಲ್ಲಿ ಕುಳಿತು ಗುಂಡಿನ ಪಾರ್ಟಿ ನಡೆಸಿದ್ದರು. ಆಗ ಟೇಬಲ್ ಮೇಲಿಟ್ಟಿದ್ದ ಮೊಬೈಲ್ ರಿಂಗಾಯಿತು. ಕೋಲ್ಯ ಫೋನ್ ಎತ್ತಿಕೊಂಡ.
ಕೋಲ್ಯ: ಹಲೋ?
ಹೆಂಡತಿ: ಹಾಯ್ ಡಾರ್ಲಿಂಗ್ ಜ್ಯುವೆಲರಿ ಶಾಪಲ್ಲಿ ಇದೀನಿ. 50 ಸಾವಿರ ರುಪಾಯಿಯ ನೆಕ್ಲೆಸ್ ತುಂಬಾ ಇಷ್ಟ ಆಯ್ತು...
ಕೋಲ್ಯ: ಅಯ್ಯೋ...ದುಡ್ಡು ಹೋದ್ರೆ ಹೋಯ್ತು. ನೀನು ಖರೀದಿ ಮಾಡು.
ಹೆಂಡತಿ: ರೇಷ್ಮೆ ಸೀರೇನೂ ತೊಗೊಳ್ಳಾ? ಬರೀ 10 ಸಾವಿರ ರುಪಾಯಿ.
ಕೋಲ್ಯ: ಬರೀ ಒಂದೇ ಸಾಕಾ, ಎರಡು ಮೂರು ತೊಗೋ...
ಹೆಂಡತಿ: ಓಕೆ ಡಿಯರ್. ನಿಮ್ಮ ಕ್ರೆಡಿಟ್ ಕಾರ್ಡ್ ನನ್ನ ಹತ್ತಿರಾನೇ ಇದೆ. ಇದರಲ್ಲೇ ಖರೀದಿ ಮಾಡ್ತೀನಿ.
ಕೋಲ್ಯ: ಮಜಾ ಮಾಡು!
ಗೆಳೆಯರು(ಅಚ್ಚರಿಯಿಂದ): ಅಯ್ಯೋ ತಲೆ ಕೆಟ್ಟಿದೇನಾ ಅಥವಾ ಹೆಂಡ್ತೀನ ಎಷ್ಟು ಪ್ರೀತಿಸ್ತೀನಿ ಅಂತ ತೋರಿಸ್ಕೊಳ್ಳೋದಕ್ಕೆ ಈ ಥರ ಮಾಡಿದ್ಯಾ?
ಕೋಲ್ಯ: ಅದೆಲ್ಲ ಹೋಗ್ಲಿ. ಮೊದ್ಲು ಈ ಮೊಬೈಲ್ ಯಾರ್ದೂ ಅಂತ ಹೇಳಿ!