ಕೋಲ್ಯನ ಗರ್ಲ್ಫ್ರೆಂಡ್ ಅವನ ತಲೆಯಲ್ಲಿ ಕೈಯಾಡಿಸುತ್ತಾ ಕೇಳಿದಳು: 'ಹಣ, ತೂಕ, ಎತ್ತರ...ಇವೆಲ್ಲವನ್ನೂ ಅಳೆಯಬಹುದು. ಆದರೆ ಪ್ರೀತಿ, ನಂಬಿಕೆ, ಗೆಳೆತನಗಳನ್ನೇಕೆ ಅಳೆಯಲು ಸಾಧ್ಯವಿಲ್ಲ?'
ಕೋಲ್ಯ ಕೆಲವು ಕ್ಷಣ ಯೋಚಿಸಿ, ಅವಳ ಕೈಗಳನ್ನು ಮೆಲ್ಲಗೆ ಅದುಮಿ, ಕಣ್ಣಲ್ಲಿ ಕಣ್ಣಿಟ್ಟು ಹೇಳಿದ: 'ನೋಡು, ಈವಾಗ್ಲೇ ನನ್ನ ಎಕ್ಸಾಮ್ ಅಲ್ಲಿ 3 ವಿಷಯಗಳು ಕಿತ್ಗೊಂಡು ಹೋಗಿವೆ. ಸುಮ್ನೆ ಏನೇನೋ ಕೇಳಿ ತಲೆ ತಿನ್ಬೇಡ'!