'ಅರ್ಥ'ಗಳಿಸಲಾಗದ ಯಾವುದೇ ಪ್ರಯತ್ನ ಅಥವಾ ಅರ್ಥವಿಲ್ಲದ ಯತ್ನ
ಕಲ್ಲೆಸೆದರೂ ಫಲ ಉದುರದೇ ಇರುವಂಥ ವಿಫಲ ಕಾರ್ಯ
ಮೂರ್ಖನಿಗೆ ಬುದ್ಧಿ ಹೇಳುವುದು ಮತ್ತು ಬುದ್ಧಿವಂತನಿಗೆ ಪಾಠ ಹೇಳೋದು
ಗಾಳಿಗೆ ಗುದ್ದುವುದು, ನೀರಿನಲ್ಲಿ ಬರೆಯುವುದು, ನಾರಿಯ ಬುದ್ಧಿಯನ್ನು ತಿದ್ದುವುದು
ಸತ್ಯವಂತಿಕೆ ಮತ್ತು ಪ್ರಾಮಾಣಿಕವಾಗಿ ಬದುಕುವ ಪ್ರಯತ್ನ
ಮನಮೋಹನ್ ಸಿಂಗ್ ಎದುರು ಮೈಕ್ ಹಿಡಿಯುವುದು
ದೇಶವನ್ನು ಉದ್ದರಿಸುವ ಕನಸು ಕಾಣುವುದು
ಸಿನಿಮಾ ನೋಡದ, ಬಂಕ್ ಹಾಕದ ಕಾಲೇಜು ಜೀವನ
ಲವ್ ಮಾಡದವನ ಬದುಕು
ಹಣವನ್ನು ಅಗತ್ಯಕ್ಕೆ ಖರ್ಚಿಸದೇ ಕೂಡಿಡುವಿಕೆ
ಹೆಂಡತಿಯ ದೃಷ್ಟಿಯಲ್ಲಿ ಒಳ್ಳೆಯವನೆಂದು ಹೇಳಿಸಿಕೊಳ್ಳಬೇಕೆಂದು ಇಚ್ಚಿಸುವುದು
ನಾಳೆಯಿಂದ ಕುಡಿತ ಬಿಡುತ್ತೇನೆ ಎನ್ನುವವನ ಮಾತನ್ನು ನಂಬುವುದು
ಹೆಂಡತಿಗೆ ಅವಳ ತಪ್ಪನ್ನು ಅರ್ಥ ಮಾಡಿಸಲು ಹೊರಡುವುದು
-ವಿಶ್ವನಾಥ ಸುಂಕಸಾಳ
vishwasunkasal@yahoo.com